HOME » NEWS » State » YOUNGSTER MURDERED BY GANG IN NELAMANGALA GNR

ಸ್ನೇಹಿತನ ಜತೆ ಹೋಗಿ ಕೊಲೆಯಾದ ಯುವಕ - ತಲೆಗೆ ಬಿಯರ್​​ ಬಾಟಲಿನಿಂದ ಹೊಡೆದು ಸಾಯಿಸಿದ ರೌಡಿಗಳು

ತನ್ನದಲ್ಲದೆ ತಪ್ಪಿಗೆ ಹದಿ ಹರೆಯದ ಯುವಕ ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

news18-kannada
Updated:September 19, 2020, 7:44 PM IST
ಸ್ನೇಹಿತನ ಜತೆ ಹೋಗಿ ಕೊಲೆಯಾದ ಯುವಕ - ತಲೆಗೆ ಬಿಯರ್​​ ಬಾಟಲಿನಿಂದ ಹೊಡೆದು ಸಾಯಿಸಿದ ರೌಡಿಗಳು
ಸಾಂದರ್ಭಿಕ ಚಿತ್ರ
  • Share this:
ನೆಲಮಂಗಲ(ಸೆ.19): ತನ್ನದಲ್ಲದ ಕೆಲಸಕ್ಕೆ‌ ಸ್ನೇಹಿತನ ಜೊತೆ ಹೋಗಿದ್ದ ಯುವಕನನ್ನ ಮೂರು ಜನ ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ಬಡಾವಣೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಕೊರಟಗೆರೆ ಮೂಲದ ಈತ ಖಾಸಗಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ನೆಲಮಂಗಲ ನಗರದಲ್ಲಿ ವಾಸವಾಗಿದ್ದ ಯುವಕ ಸತೀಶ್ (26) ಮೃತ ದುರ್ದೈವಿ. ಮದುವೆಗೆ ಹೆಣ್ಣು ಹುಡುಕುತ್ತಿದ್ದ ಹದಿ ಹರೆಯಾದ ಪ್ರಾಯದ ಈ ಯುವಕ ತನ್ನದಲ್ಲದ ತಪ್ಪಿಗೆ ಹೆಣವಾಗಿ ಹೋಗಿದ್ದಾರೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಖಾಸಗಿ ಬಡಾವಣೆಯಲ್ಕಿ ನಡೆದ ಗಲಾಟೆಯೊಂದರಲ್ಲಿ ಈತನ ಪ್ರಾಣ ಪಕ್ಷಿ ಹಾರಿ ಹೋಯಿತು. ಹರೀಶ, ಸಿದ್ದ ಹಾಗೂ ಮಲ್ಲೇಶ ವಿರುದ್ದ ಕೊಲೆ ಆರೋಪ ಕೇಳಿ ಬಂದಿದೆ.

ಗಲಾಟೆಗೂ ಈತನ ಸಾವಿಗೂ ಸಂಬಂಧ ಏನು ಅಂತಾ ನೋಡೀದಾದ್ರೆ, ವಾಜರಹಳ್ಳಿ ನಿವಾಸಿ ಹಾಗೂ ಮೃತನ ಸ್ನೇಹಿತನಾಗಿದ್ದ ಪ್ರದೀಪ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ. ಜೀವನೋಪಾಯಕ್ಕಾಗಿ ತನಗೆ ಪರಿಚಿತನಾಗಿದ್ದ ಆರೋಪಿ ಹರೀಶನ ಮ್ಯಾಕ್ಸಿ ಕ್ಯಾಬ್ ಓಡಿಸಲು ಒಪ್ಪಿಕೊಂಡು ಗಾಡಿ ಓಡಿಸುತ್ತಿದ್ದ. 9000 ಸಂಬಳವನ್ನ ಸಹ ಮಾತನಾಡಿ ಅಡ್ವಾನ್ಸ್ ಪಡೆದಿದ್ದ. ಆದ್ರೆ ಪಡೆದ ಅಡ್ವಾನ್ಸ್ ಹಣ ಬಿಟ್ಟರೆ ಒಂದು ರುಪಾಯಿ ಸಂಬಳವನ್ನ ಸಹ ಹರೀಶ ಪ್ರದೀಪನಿಗೆ ಕೊಟ್ಟಿರಲಿಲ್ಲ. ಈ ನಡುವೆ ಜಗಳವಾಗಿ ಪ್ರದೀಪ ಕೆಲಸ ಬಿಟ್ಟಿದ್ದ, ಮಾಡಿದ್ದ ಕೆಲಸಕ್ಕೆ ಸಂಬಳ ಕೊಡು ಎಂದು ಪ್ರದೀಪ ಹರೀಶನನ್ನ ಆಗ್ಗಾಗೆ ಫೋನ್ ಮಾಡಿ ಕೇಳುತ್ತಿದ್ದ.

ನೆನ್ನೆ ಸಂಜೆ ಅದೇನಾಯ್ತೋ ಏನೋ ಹರೀಶ ಪ್ರದೀಪನಿಗೆ ಫೋನ್ ಮಾಡಿ ನೆಲಮಂಗಲದ ಕೆಬಿಡಿ ಬಳಿ ಬಾ ನಿನ್ನ ದುಡ್ಡು ಕೊಡ್ತಿನಿ ಅಂದಿದ್ದ. ಸರಿ ಅಂತ ಪ್ರದೀಪ ತನ್ನ ಜೊತೆಗಿದ್ದ ಸ್ನೇಹಿತ ಸತೀಶ್‌ನನ್ನು ಕರೆದುಕೊಂಡು ಆತನ ಬೈಕ್‌ನಲ್ಲಿ ಕೆಬಿಡಿ ಬಳಿ ಹೋಗುತ್ತಾರೆ. ಆಗ್ಗಾ ಫೋನ್ ಮಾಡುದ್ರೆ ಅಲ್ಲಿ ಬೇಡ ಮೈಲನಹಳ್ಳಿಯ ಬಡಾವಣೆ ಬಳಿ ಬಾ ಎಂದು ಹರೀಶ ಹೇಳ್ತಾನೆ. ಹೇಗೋ ಸಂಬಳ ಕೊಟ್ರೆ ತನ್ನ ಕಷ್ಟ ನೀಗುತ್ತದೆ ಎಂದು ಮೈಲನಹಳ್ಳಿಗೆ ಹೋಗುತ್ತಾನೆ.

ಇವರೂ ಅಲ್ಲಿಗೆ ಹೋಗುವಷ್ಟರಲ್ಲಿ ಹರೀಶ ತನ್ನ ಸ್ನೇಹಿತರಾದ ಸಿದ್ದ ಹಾಗೂ ಮಲ್ಲೇಶನ ಜೊತೆ ಕಂಠ ಪೂರ್ತಿ ಕುಡಿತಾ ಕೂತಿರ್ತಾನೆ. ಅಲ್ಲಿಗೆ ಪ್ರದೀಪ ಹಾಗೂ ಮೃತ ಸತೀಶ್ ಹೋಗ್ತಾರೆ. ಪ್ರದೀಪ ಹಾಗೂ ಹರೀಶನ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಏರುತ್ತದೆ. ಅಲ್ಲಿಯವರೆಗೂ ಇವರ ತಂಟೆಗೆ ಹೋಗದ ಸತೀಶ್ ಮಧ್ಯಪ್ರವೇಶಿಸುತ್ತಾನೆ. ಆರೋಪಿಗಳು ಹೇಳಿ ಕೇಳಿ ಮಧ್ಯದ ಅಮಲಿನಲ್ಲಿ ಇದ್ರು, ನೀನ್ಯಾರೊ ನಮ್ಮ ವಿಷಯಕ್ಕೆ ಬರೋಕ್ಕೆ ಅಂತ ಹೇಳಿ ತಾವು ತಂದಿದ್ದ ಬಿಯರ್ ಬಾಟಲಿಯಿಂದ ಮೃತ ಸತೀಶನ ತಲೆ ಹಾಗೂ  ಮುಖಕ್ಕೆ ಹೊಡೆದು ಗಂಭೀರವಾಗಿ ಗಾಯಗೊಳಿಸುತ್ತಾರೆ. ತಕ್ಷಣ ಪ್ರದೀಪ ತನ್ನ ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸಿದರು ಸಹ ಚಿಕಿತ್ಸೆ ಫಲಕಾರಿಯಾಗೆ ಸತೀಶ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗೊಂದು ನ್ಯಾಯ! ಪರಪ್ಪನ ಅಗ್ರಹಾರದಲ್ಲಿ ರಾಗಿಣಿ, ಸಂಜನಾಗೆ ರಾಜ ಮರ್ಯಾದೆ?

ಒಟ್ಟಾರೆ ತನ್ನದಲ್ಲದೆ ತಪ್ಪಿಗೆ ಹದಿ ಹರೆಯದ ಯುವಕ ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Published by: Ganesh Nachikethu
First published: September 19, 2020, 7:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading