ಬೆಂಗಳೂರು: 16 ಬಾರಿ ಪ್ರೀತಿಸಿದ (Love) ಯುವತಿಯನ್ನು ಚುಚ್ಚಿ ಕೊಲೆಗೈದ ಯುವಕ (Youth) ಪೊಲೀಸರ ಮುಂದೆ ತನ್ನ ಪ್ರೇಮಕಥೆಯನ್ನು (Love Story) ಬಿಚ್ಚಿಟ್ಟಿದ್ದಾನೆ. ಬೆಂಗಳೂರಿನ (Bengaluru Crime News) ಜೀವನ್ ಭಿಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುರುಗೇಶ್ ಪಾಳ್ಯದ (Murugesh Palya) ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಯುವತಿ ಲೀಲಾಳ ಬರ್ಬರ ಹತ್ಯೆ (Leela Murder Case) ನಡೆದಿತ್ತು. ಆಂಧ್ರಪ್ರದೇಶ (Andhra Pradesh) ಮೂಲದ ದಿನಕರ್, ಐದು ವರ್ಷಗಳಿಂದ ಪ್ರೀತಿಸಿದ ಲೀಲಾಳನ್ನು ಕೊಲೆ (Murder) ಮಾಡಿದ್ದರ ಕಾರಣವನ್ನು ಬಾಯಿಬಿಟ್ಟಿದ್ದಾನೆ.
ಲೀಲಾ ಕೆಲಸ ಮಾಡುತ್ತಿದ್ದ ಕಂಪನಿ ಬಳಿ ಬಂದಿದ್ದ ದಿನಕರ್, ಗೇಟ್ ಮುಂಭಾಗ ಆಕೆಯ ಜೊತೆ ಸುಮಾರು 10 ನಿಮಿಷ ಮಾತನಾಡಿದ್ದಾನೆ. ನಂತರ ಗೇಟ್ನಿಂದ ಸ್ವಲ್ಪ ದೂರ ಕರೆತಂದು ಚಾಕುವಿನಿಂದ 16 ಬಾರಿ ಇರಿದು ಕೊಲೆ ಮಾಡಿದ್ದಾನೆ. ಲೀಲಾ ಕೊಲೆ ಬಳಿಕ ದಿನಕರ್ ಸಹ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನು. ಆದರೆ ಸಾರ್ವಜನಿಕರು ಆರೋಪಿಯನ್ನು ಸೆರೆ ಹಿಡಿದ ಪರಿಣಾಮ ಆತ ಕಂಬಿ ಹಿಂದೆ ಸೇರಿದ್ದಾನೆ.
ಎಂಎಸ್ಸಿ ಓದುತ್ತಿರುವಾಗಲೇ ಪರಿಚಯ
ಲೀಲಾ ಮತ್ತು ದಿನಕರ್ ಇಬ್ಬರು ಆಂಧ್ರಪ್ರದೇಶ ಮೂಲದವರು. ವೈಜಾಗ್ನಲ್ಲಿ ಎಂಎಸ್ಸಿ ಓದುತ್ತಿರುವ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಈ ಪರಿಚಯ ಪ್ರೇಮವಾಗಿ ಬದಲಾಗಿತ್ತು. ಹೀಗೆ ಇಬ್ಬರು ಕಳೆದ ಐದು ವರ್ಷ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ದಿನಕರ್ ಹೆಲ್ತ್ ಕೇರ್ನಲ್ಲಿ ಮಾಡಿಕೊಂಡು, ಪಿಜಿಯಲ್ಲಿ ವಾಸವಾಗಿದ್ದನು.
ಗೆಳೆಯನಿಂದ ದೂರವಾಗಿದ್ದ ಲೀಲಾ
ಇತ್ತ ಲೀಲಾ ಸಹ ಓದು ಮುಗಿದ ಬಳಿಕ ಬೆಂಗಳೂರಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಲೀಲಾ, ಕಳೆದ ಕೆಲವು ದಿನಗಳಿಂದ ದಿನಕರ್ನಿಂದ ಅಂತರ ಕಾಯ್ದುಕೊಂಡಿದ್ದಳು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಗೆಳೆಯನಿಂದ ಲೀಲಾ ದೂರವಾಗಿದ್ದಳು.
ಎರಡು ಚಾಕು ತಂದಿದ್ದ ದಿನಕರ್
ದಿನಕರ್ ಮೊಬೈಲ್ ನಂಬರ್ ಸಹ ಬ್ಲಾಕ್ ಮಾಡಿದ್ದಳು. ಬೇರೆ ಮೊಬೈಲ್ ನಂಬರ್ ನಿಂದ ಕಾಲ್ ಮಾಡಿದ್ರೂ ಲೀಲಾ ಮಾತನಾಡುತ್ತಿರಲಿಲ್ಲ. ಇದರಿಂದ ಲೀಲಾ ಜೊತೆ ಮಾತನಾಡಲು ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಬಳಿ ಬಂದಿದ್ದಳು. ಬರುವಾಗ ಜೊತೆಯಲ್ಲಿ ಎರಡು ಚಾಕು ತಂದಿದ್ದ ದಿನಕರ್, ಆಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದನು.
ದಿನಕರ್ ಬದುಕಿದ್ದು ಹೇಗೆ?
ಲೀಲಾ ಕೊಂದ ಬಳಿಕ ದಿನಕರ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ತನ್ನ ಹೆಲ್ಮೆಟ್ನಿಂದ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಚಾಕು ಕೈನಿಂದ ಕೆಳಗೆ ಬಿದ್ದಿದೆ. ಕೂಡಲೇ ಜನರು ದಿನಕರ್ನನ್ನು ಸುತ್ತುವರಿದು, ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನ ಬೇಕರಿಯಲ್ಲಿ ಬಡಿದಾಟ
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಬೇಕರಿಗೆ ನುಗ್ಗಿ ಧಾಂದಲೆ ನಡೆಸಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮಾಳಗಾಳದಲ್ಲಿ, ಪ್ರಕಾಶ್ ಎಂಬವ ವ್ಯಕ್ತಿ ರಘುನಾಥ್ ಬೇಕರಿಗೆ ನುಗ್ಗಿದ್ದಾನೆ. ಶೋಕೇಸ್ ಗ್ಲಾಸ್ ಹೊಡೆದು ರಘುನಾಥ್ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿ ಪ್ರಕಾಶ್ಗಾಗಿ ಪೊಲೀಸರ ಹುಡುಕಾಡ್ತಿದ್ದಾರೆ.
ಇದನ್ನೂ ಓದಿ: Crime News: ಕ್ಷುಲ್ಲಕ್ಕೆ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ; ಇತ್ತ ಹಾವೇರಿಯಲ್ಲಿ ಭೀಕರ ಅಪಘಾತ, ಇಬ್ಬರ ಸಾವು
ಲಾರಿ ಮೇಲೆ ಬಿದ್ದ ಕಬ್ಬಿಣದ ಸಲಾಕೆ!
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಭಾರೀ ಅನಾಹುತವೊಂದು ತಪ್ಪಿದೆ. ಬೃಹತ್ ಗಾತ್ರದ ಕಬ್ಬಿಣದ ಸಲಾಕೆಯೊಂದು ಲಾರಿ ಮೇಲೆ ಬಿದ್ದಿದೆ. ನಗರದ ಕೆಲವಡೆ ಭಾರೀ ವಾಹನಗಳ ಸಂಚಾರವನ್ನು ತಡೆಗಟ್ಟಲು ಕಬ್ಬಿಣದ ಸಲಾಕೆ ಅಳವಡಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ