Kodagu: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಸಾವು! ಅತ್ತೆ-ನಾದಿನಿಯರ ಮೇಲೆ ಗಂಭೀರ ಆರೋಪ

ಸ್ನೇಹ ಪ್ರೀತಿಗೆ ತಿರುಗಿ ಎರಡು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಒಂದುವರೆ ವರ್ಷದ ಹಿಂದೆ ತಂದೆ, ತಾಯಿ ಮತ್ತು ಅಣ್ಣಂದಿರ ವಿರೋಧದ ನಡುವೆಯೂ ನಿತೇಶ್‍ನ ಜೊತೆಗೆ ಹಸೆಮಣೆ ಏರಿದ್ದಳು. ಆದರೆ ಈಗ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.

ಅನುಪಮಾ-ನಿತೇಶ್ ದಂಪತಿ

ಅನುಪಮಾ-ನಿತೇಶ್ ದಂಪತಿ

  • Share this:
ಕೊಡಗು: ಇಬ್ಬರದು ಮೇಡ್ ಫಾರ್ ಈಚ್ ಅದರ್ (Made for Each Other’s) ಎನ್ನುಂತಹ ಜೋಡಿ (Couple). ಮೂರು ವರ್ಷಗಳಿಂದ ಪ್ರೀತಿಸಿ (Love) ಕಳೆದ ಒಂದುವರೆ ವರ್ಷದ ಹಿಂದೆಯಷ್ಟೇ ಇಬ್ಬರು ಹಸೆಮಣೆ (Marriage) ಏರಿದ್ದರು. ಇಬ್ಬರು ಖುಷಿ ಖುಷಿಯಾಗಿಯೇ ಸಂಸಾರದ ದೋಣಿ ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಬುಧವಾರ ಸಂಜೆ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ (suspicious death). ಹಾಗಾದರೆ ಪರಸ್ಪರ ಪ್ರೀತಿಸಿ ಮದುವೆಯಾದವರ ಬಾಳಲ್ಲಿ ಆಗಿದ್ದಾದರೂ ಏನು? ಪ್ರೀತಿ, ಸಂಸಾರ ಸಾಕೆಂದು ಅವಳೇ ಆತ್ಮಹತ್ಯೆಗೆ ಒಳಗಾದಳಾ? ಯಾರಾದರೂ ಕೊಂದರಾ? ಅಥವಾ ಆಕಸ್ಮಿಕ ಸಾವಾ? ಹೀಗೆ ಆಕೆ ಸಾವಿನ ಹಿಂದೆ ನೂರಾರು ಅನುಮಾನ ಮೂಡಿದೆ.

ಪ್ರೀತಿ ವಿವಾಹವಾಗಿದ್ದ ಅನುಮಪಾ-ನಿತೇಶ್

ಕೊಡಗು ಜಿಲ್ಲೆ ಪೊನ್ನಂಪೇಟೆಯ ನಾಗೇಗೌಡ ಎಂಬುವವರ ಮುದ್ದಿನ ಮಗಳು ಅನುಪಮಾ. ಕಾಲೇಜಿಗೆ ಹೋಗುತ್ತಿದ್ದಾಕೆ, ಬೆಳ್ಳೂರು ಹೆಮ್ಮಡು ಗ್ರಾಮದ ನಿತೇಶ್ ಜೊತೆಗೆ ಸ್ನೇಹ ಬೆಳೆಸಿದ್ದಳು. ಸ್ನೇಹ ಪ್ರೀತಿಗೆ ತಿರುಗಿ ಎರಡು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಒಂದುವರೆ ವರ್ಷದ ಹಿಂದೆ ತಂದೆ, ತಾಯಿ ಮತ್ತು ಅಣ್ಣಂದಿರ ವಿರೋಧದ ನಡುವೆಯೂ ನಿತೇಶ್‍ನ ಜೊತೆಗೆ ಹಸೆಮಣೆ ಏರಿದ್ದಳು.

ತಂದೆ ತಾಯಿಗಳು ಕೂಡ ಆಗಿದ್ದು ಆಗಿಹೋಯಿತು. ಹೇಗೋ ಸುಖವಾಗಿದ್ದರೆ ಸಾಕು ಎಂದು ಸುಮ್ಮನಾಗಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಲ್ಲಿ ತಮ್ಮ ಮಗಳನ್ನು ಕೆಲಸಕ್ಕೆ ಕಳುಹಿಸಿದರು ಎನ್ನೋದು ಯುವತಿ ಅನುಪಮಾ ಅವರ ಪೋಷಕರ ಆರೋಪ.

ಮನೆ ಹೆಂಗಸರ ಕಿರುಕುಳ ಆರೋಪ

ಅವನನ್ನು ಮದುವೆ ಆಗುವುದು ನಮಗೆ ಒಂದು ಎಳ್ಳಷ್ಟು ಇಷ್ಟವಿರಲಿಲ್ಲ. ಆದರೂ ನಮ್ಮನ್ನೆಲ್ಲಾ ಧಿಕ್ಕರಿಸಿ ಮದುವೆಯಾದಳು. ಅವರ ಮನೆಯಲ್ಲಿ ಗಂಡಸರು ಏನೂ ನಡೆಯಲ್ಲ. ಕೇವಲ ಹೆಂಗಸರದೇ ದರ್ಬಾರ್. ಅವರ ಕಿರುಕುಳದಿಂದಲೇ ನನ್ನ ತಂಗಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅನುಪಮ ಸಹೋದರ ಚಂದ್ರು ಆರೋಪಿಸಿದ್ದಾರೆ.

ಇದನ್ನೂ ಓದಿ: Puneeth Rajkumarಗೆ ಇದೆಂಥಾ ಅಪಮಾನ! ಇಲ್ಲಿ ಅಪ್ಪು ಫೋಟೋ, ಕನ್ನಡ ಧ್ವಜಕ್ಕೆ ನೋ ಎಂಟ್ರಿ!

 ಕಣ್ಣೀರಿಟ್ಟ ಪತಿ ನೀತೇಶ್

ಗೋಣಿಕೊಪ್ಪದ ಖಾಸಗೀ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಅನುಪಮಗೆ ಆರೋಗ್ಯ ಸರಿಯಿರಲಿಲ್ಲವಂತೆ. ಮಂಗಳವಾರ ಕೆಲಸಕ್ಕೆ ಹೋಗಿದ್ದವಳು ಮನೆಗೆ ಬಂದು ಗಂಜಿ ಅನ್ನ ತಿಂದಿದ್ದಳಂತೆ. ಅದಾದ ಮೇಲೆ ತಡರಾತ್ರಿ ಆಕೆಗೆ ವಾಂತಿ ಆಗುವುದಕ್ಕೆ ಆರಂಭವಾಗಿತ್ತು. ಹೀಗಾಗಿ ಗೋಣಿಕೊಪ್ಪ ಆಸ್ಪತ್ರೆಗೆ ಅಂಬ್ಯಲೆನ್ಸ್ ನಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೆವು. ಸ್ಕಾನಿಂಗ್ ಎಲ್ಲಾ ಮಾಡಿಸಿದ್ದೆವು.

ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂತಲೂ ಹೇಳಿದ್ದರು. ವಾಪಸ್ ಊರಿಗೆ ಬರುವಾಗ ದೇವಾಸ್ಥಾನಕ್ಕೆ ಹೋಗಿ ಬರೋಣ ಅಂತ ಹೋಗಿದ್ದೆವು. ಆಗ ಮತ್ತೆ ಆಕೆಗೆ ಸುಸ್ತಾದ ಕಾರಣ ಆಸ್ಪತ್ರೆಗೆ ಕರೆದೊಯ್ದಿದ್ದೆವು. ಅಷ್ಟರಲ್ಲಿ ತನ್ನ ಪತ್ನಿ ಸಾವನ್ನಪ್ಪಿದ್ದಾಳೆ ಅಂತ ವೈದ್ಯರು ಹೇಳುತ್ತಿದ್ದಾರೆ ಎಂದು ಅನುಪಮ ಪತಿ ನಿತೇಶ್ ಕಣ್ಣೀರಿಟ್ಟಿದ್ದಾರೆ.

ಅತ್ತೆ-ನಾದಿಯಿಂದ ಕಿರುಕುಳ ಆರೋಪ

ಆದರೆ ಅನುಪಮಾ ತಂದೆ ನಾಗೇಗೌಡ ಹೇಳೋದೆ ಬೇರೆ. ನಿತೇಶ್ ನನ್ನು ಮದುವೆಯಾದ ಬಳಿಕ ಇಬ್ಬರು ಅನ್ಯೋನ್ಯತೆಯಿಂದಲೇ ಇದ್ದರು. ಕಳೆದ ಒಂದು ತಿಂಗಳ ಹಿಂದೆ ನನ್ನ ಪತ್ನಿ ಪದ್ಮಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕಿತ್ತು. ಇದಕ್ಕಾಗಿ ಮಗಳು ಅನುಪಮಾ ಬಳಿ ಹಣ ಕೇಳಿದ್ದೆ. ಅದಾದ ಬಳಿಕ ನನ್ನ ಮಗಳಿಗೆ, ಅವರ ಅತ್ತೆ ಮತ್ತು ನಾದಿನಿಯರಿಂದ ವಿಪರೀತ ಕಿರುಕುಳ ಇತ್ತು ಎಂದು ದೂರಿದ್ದಾರೆ.

ನಾದಿನಿಯರು ಹೇಳೋದೇ ಬೇರೆ!

ಈ ಕುರಿತು ನಾದಿನಿಯರನ್ನು ಕೇಳಿದರೆ, ನಾವೇನು ಮಾಡಿಲ್ಲ, ಮೊನ್ನೆಯಿಂದಲೇ ಅತ್ತಿಗೆಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ನಾವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೆವು ಎನ್ನುತ್ತಿದ್ದಾರೆ.

ಇದನ್ನೂ ಓದಿ: Shocking News: "ನೀನು ನೋಡೋಕೆ ಚೆನ್ನಾಗಿಲ್ಲ" ಅಂತ ಗರ್ಭಿಣಿಗೆ ಟಾಯ್ಲೆಟ್‌ ಕ್ಲೀನರ್‌ ಕುಡಿಸಿದ ಪಾಪಿ ಪತಿ! ನರಳಾಡುತ್ತ ಪ್ರಾಣ ಬಿಟ್ಟ ಹೆಂಡತಿ

ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾಗಿ ಖುಷಿಯಾಗಿಯೇ ಇದ್ದ ಅನುಪಮಾ ಇದ್ದಕ್ಕಿದ್ದಂತೆ ಸಾವನ್ನಪ್ಪಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ಅನುಪಮಾ ತಂದೆ ನಾಗೇಗೌಡ ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.
Published by:Annappa Achari
First published: