Pottery: ಸಾಂಪ್ರದಾಯಿಕ ಗುಡಿಕೈಗಾರಿಕೆಯತ್ತ ಯುವಕರ ನಿರ್ಲಕ್ಷ್ಯ, ಕುಂಬಾರಿಕೆಗೆ ಈಗ ಸಿಗುತ್ತಿದೆ ಆಧುನಿಕತೆಯ ಸ್ಪರ್ಶ

ಕೇವಲ ಗೃಹೋಪಯೋಗಿ ಪಾತ್ರೆಗಳನ್ನು ಮಾತ್ರ ಪೂರೈಸುತ್ತಿದ್ದ ಕುಂಬಾರಿಕಾ ವೃತ್ತಿ ಇಂದು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ  ತೊಡಗಿಕೊಳ್ಳುವ ಮೂಲಕ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಕುಂಬಾರಿಕೆಯ ಕುಟುಂಬಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1950ರಲ್ಲಿ ಪ್ರಾರಂಭವಾದ ಕುಂಬಾರರ ಸಹಕಾರಿ ಸಂಘ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.

ಆತಂಕದಲ್ಲಿ ಕುಂಬಾರರ ಬದುಕು

ಆತಂಕದಲ್ಲಿ ಕುಂಬಾರರ ಬದುಕು

  • Share this:
ದಕ್ಷಿಣ ಕನ್ನಡ: ಪ್ರಾಚೀನ ಗುಡಿ ಕೈಗಾರಿಕೆಗಳಲ್ಲೊಂದಾದ (Cottage industry) ಕುಂಬಾರಿಕೆ (Pottery) ಇಂದು ಹಲವು ಸಮಸ್ಯೆಗಳ (Problems) ಸುಳಿಯಲ್ಲಿ ಸಿಲುಕಿ ನಶಿಸುವತ್ತ ಸಾಗಿದೆ. ಕುಂಬಾರಿಕೆಯನ್ನೇ ಜೀವನವನ್ನಾಗಿಸಿದ್ದ ಕುಟುಂಬಗಳಿಂದ (Family) ಪರ್ಯಾಯ ಉದ್ಯೋಗವನ್ನರಸಿ ಸಾಗುತ್ತಿದೆ. ಇಂತಹ ಕುಟುಂಬಗಳನ್ನು ಮತ್ತೆ ಒಂದುಗೂಡಿಸಿ ವೃತ್ತಿಯ ಪುನರುಜ್ಜೀವನಕ್ಕೆ ಶ್ರಮಿಸುತ್ತಿರುವ ಕುಂಬಾರರ ಸಹಕಾರಿ ಸಂಘ (Co-Operative Society) ಈ ನಿಟ್ಟಿನಲ್ಲಿ ಯಶಸ್ಸಿನ ಮೆಟ್ಟಿಲೇರಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿರುವ (Puttur) ಕುಂಬಾರಿಕಾ ಉದ್ಘಾಟನಾ ಘಟಕ ಹೊಸ ವಿನ್ಯಾಸಗಳ ಮೂಲಕ ಆಧುನೀಕತೆಗೆ (modernity) ತೆರೆದುಕೊಳ್ಳುತ್ತಿದೆ ಆದರೂ ಕಚ್ಚಾವಸ್ತುಗಳ (Row Materials) ಕೊರತೆ ಮತ್ತು ಯುವ ಪೀಳಿಗೆಯ (Youths) ಅನಾಸಕ್ತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಂಬಾರಿಕೆ ವೃತ್ತಿಯ ಭವಿಷ್ಯಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ.

ಕುಂಬಾರಿಕೆಯನ್ನು ಕಾಡುತ್ತಿದೆ ಹಲವು ಸಮಸ್ಯೆ

ಗುಡಿ ಕೈಗಾರಿಕೆಗಳಲ್ಲಿ ಒಂದಾದ ಕುಂಬಾರಿಕೆಗೆ ನಾಗರಿಕತೆಯಷ್ಟೇ ಇತಿಹಾಸವಿದೆ. ಆದರೆ ಇಂದು ಈ ಪ್ರಾಚೀನ ಕಾಯಕ ಆಧುನೀಕತೆಯ ಭರಾಟೆಗೆ ಸಿಲುಕಿ ನಶಿಸುವನತ್ತ ಹೆಜ್ಜೆ ಹಾಕುತ್ತಿದೆ. ಹಲವು ಸಮಸ್ಯೆಗಳು ಇಂದು ಕುಂಬಾರಿಕೆಯನ್ನು ಕಾಡುತ್ತಿದೆ. ಕುಂಬಾರಿಕಾ ವೃತ್ತಿಗೆ ಅಗತ್ಯವಾಗಿ ಬೇಕಾಗಿರುವ ಮಣ್ಣಿನ ಕೊರತೆ, ಕಟ್ಟಿಗೆಗಳ ಕೊರತೆ ಹಾಗೂ ಪ್ಲಾಸ್ಟಿಕ್ ಪಾತ್ರಗಳ ಹಾವಳಿ ಕುಂಬಾರರು ಕುಂಬಾರಿಕೆ ವೃತ್ತಿಯನ್ನು ತ್ಯಜಿಸುವ ಹಂತಕ್ಕೆ ತಲುಪಿವೆ.

ಸಹಕಾರ ಸಂಘದಿಂದ ಕುಂಬಾರಿಕೆಗೆ ಪ್ರೋತ್ಸಾಹ

ಕುಂಬಾರಿಕೆಯನ್ನೇ ತನ್ನ ಬದುಕನ್ನಾಗಿಸಿದ್ದ ಹಲವು ಕುಟುಂಬಗಳಿಂದು ಪರ್ಯಾಯ ವೃತ್ತಿಯತ್ತ ವಾಲುತ್ತಿದ್ದು, ಇಂಥಹ ಕುಟುಂಬಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1950ರಲ್ಲಿ ಪ್ರಾರಂಭವಾದ ಕುಂಬಾರರ ಸಹಕಾರಿ ಸಂಘ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೌಡಿಚಾರಿನಲ್ಲಿರುವ ಸಂಘದ ಉತ್ಪಾದನಾ ಘಟಕವು ಇಂಥಹ ಹಲವು ಸಾಂಪ್ರದಾಯಿಕ ಕೈಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಿದೆ. ಮಹಿಳೆಯರೇ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಘಟಕದಲ್ಲಿ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಸಂಘ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಕುಂಬಾರಿಕೆಗೆ ಪ್ರೋತ್ಸಾಹವನ್ನೂ ನೀಡುತ್ತಿದೆ.

ಇದನ್ನೂ ಓದಿ: Uttara Kannada: ಮಳೆರಾಯನಿಗೆ ಸವಾಲೊಡ್ಡಿದ ಕಾರವಾರದ ಯುವಕರು!

ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಕುಂಬಾರಿಕೆ

ಕೇವಲ ಗೃಹೋಪಯೋಗಿ ಪಾತ್ರೆಗಳನ್ನು ಮಾತ್ರ ಪೂರೈಸುತ್ತಿದ್ದ ಕುಂಬಾರಿಕಾ ವೃತ್ತಿ ಇಂದು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ  ತೊಡಗಿಕೊಳ್ಳುವ ಮೂಲಕ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಅಲ್ಲದೆ ಉತ್ಪಾದನೆಯಲ್ಲೂ ಆಧುನಿಕ ತಂತ್ರಜ್ಞಾನವನ್ನು ಬಳಸುವ ಚಿಂತನೆ ನಡೆಸಿರುವ ಈ ಸಂಘ ಈಗಾಗಲೇ ಮಣ್ಣು  ಹದಗೊಳಿಸುವ ಹಾಗೂ ಮಡಿಕೆ ಮಾಡಲು ಯಂತ್ರವನ್ನು ಬಳಸಿಕೊಳ್ಳುತ್ತಿದೆ.

ಮಹಿಳೆಯರ ಸ್ವಾವಲಂಬನೆಗೆ ಆದ್ಯತೆ

ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವತ್ತಲೂ ಈ  ಸಂಘ ಹೆಜ್ಜೆ ಇರಿಸಿದ್ದು, ಹತ್ತಾರು ಮಹಿಳೆಯರಿಗೆ ಉದ್ಯೋಗವನ್ನು ನೀಡುತ್ತಿದೆ.ಆದರೆ ಕೇವಲ ಹಿರಿ  ತಲೆಮಾರು ಮಾತ್ರ ಈ ಕುಂಬಾರಿಕೆ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದು, ಯುವ ಪೀಳಿಗೆ ಮಾತ್ರ ಈ ವೃತ್ತಿಯಿಂದ ಹಿಂದೆ  ಸರಿಯುತ್ತಿರುವುದು ದಕ್ಷಿಣಕನ್ನಡ ಜಿಲ್ಲೆಗೆ  ಸಂಬಂಧಿಸಿದಂತೆ ಕುಂಬಾರಿಕೆಯ ಭವಿಷ್ಯದ ಪ್ರಶ್ನೆಯೂ ಮನೆ ಮಾಡಿದೆ.

ಇದನ್ನೂ ಓದಿ: Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು

ಸಾಂಪ್ರದಾಯಿಕ ಕುಂಬಾರಿಕೆ ಉಳಿಸುವತ್ತ ಗಮನ

ಹೇಳಿ ಹೆಸರಿಲ್ಲದಂತೆ  ನಾಶದ ಅಂಚಿಗೆ ಸರಿದಿದ್ದ ಕುಂಬಾರರ ವೃತ್ತಿಯನ್ನು ಮತ್ತೆ ಎದ್ದೇಳುವಂತೆ ಮಾಡಿದ ಕೀರ್ತಿ ಕುಂಬಾರರ ಸಂಘಕ್ಕೆ ಸಲ್ಲುತ್ತದೆ. ಸರಕಾರ ಕುಂಬಾರಿಕರಿಗೆ ಅವಶ್ಯಕವಾದ ಮಣ್ಣು ಹಾಗೂ ಕಟ್ಟಿಗೆಯ ಪೂರೈಕೆಯನ್ನು ಮಾಡುವ ಮೂಲಕ ಕುಂಬಾರಿಕೆಯನ್ನು ಉಳಿಸುವತ್ತ ಗಮನಹರಿಸಬೇಕಿದೆ. ಕುಂಬಾರ ಸಮುದಾಯದ‌ ಯುವ ಪೀಳಿಗೆ ಕುಂಬಾರ ವೃತ್ತಿಯನ್ನು ಉಳಿಸುವತ್ತ ಮನಸ್ಸು‌ ಮಾಡಬೇಕಿದೆ.
Published by:Annappa Achari
First published: