ವಿಜಯನಗರ: ಹಂಪಿ (Hampi) ಸ್ಮಾರಕಗಳ ಮೇಲೆ ನೃತ್ಯ ಮಾಡಿದ್ದ ಯುವಕ ಸೋಶಿಯಲ್ ಮೀಡಿಯಾದಲ್ಲಿ (Social Media) ಕ್ಷಮೆ ಕೇಳಿದ್ದಾನೆ. ಹಂಪಿ ಪೊಲೀಸರು (Police) ಯುವಕನ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಎಚ್ಚೆತ್ತ ಮಂಡ್ಯ ಮೂಲದ ದೀಪಕ್ ಗೌಡ ಕ್ಷಮೆ ಕೇಳಿದ್ದಾನೆ. ವಿಶ್ವ ಪಾರಂಪರಿಕ ತಾಣ, ಹಂಪಿಯ ಹೇಮಕೂಟ ಪರ್ವತದ ಜೈನ ದೇಗುಲದ ಮೇಲೆ ಹತ್ತಿ ನೃತ್ಯ ಮಾಡಿದ್ದ ದೀಪಕ್ ವಿಡಿಯೋ (Dance Video) ಹರಿಬಿಟ್ಟಿದ್ದನು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಶ್ರೀಹರಿಬಾರು ಎಫ್ಐಆರ್ (FIR Filed) ದಾಖಲಿಸಿದ್ದರು. ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ಆಕ್ಸಿಡೆಂಟ್
ಬೆಂಗಳೂರು ನಗರದಲ್ಲೊಂದು ಡೆಡ್ಲಿ ಆಕ್ಸಿಡೆಂಟ್ (Deadly Accident) ನಡೆದಿದ್ದು, ಅಪಘಾತದ ವಿಡಿಯೋ ವೈರಲ್ (Accident Video Viral) ಆಗಿದೆ. ಕಮ್ರಾನ್ ಎಂಬವರು ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (Bengaluru Police) ತನಿಖೆ ನಡೆಸುತ್ತಿದ್ದಾರೆ. ವಿಡಿಯೋದಲ್ಲಿ ಸಿಮೆಂಟ್ ಲಾರಿಯೊಂದು ಕಾರ್ಗೆ ಡಿಕ್ಕಿ ಹೊಡೆದಿದೆ.
ವಿಡಿಯೋ ಟ್ವೀಟ್ ಮಾಡಿರುವ ಕಮ್ರಾನ್, ಅಪಘಾತದಲ್ಲಿ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮದು ತಪ್ಪಿಲ್ಲ ಅಂದ್ರೂ ಕೆಲವೊಮ್ಮೆ ನಾವೇ ಹೊಣೆಗಾರರು ಆಗ್ತೀವಿ ಅಂತ ಬರೆದುಕೊಂಡಿದ್ದಾರೆ.
#Bengaluru
WARNING GRAPHIC FOOTAGE
Dashcam footage from the mangled SUV showing an over speeding cement mixer truck coming straight onto the vehicle. The accident killed a woman IT professional and her daughter who she was driving to school
Sometimes we are not even at fault
RIP pic.twitter.com/zdqle68rtU
— Kamran (@CitizenKamran) March 1, 2023
ಸಮುದ್ರದಲೆಗಳ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಉಡುಪಿಯ ಮಲ್ಪೆ ಬೀಚ್ನಲ್ಲಿ (Malpe Beach, Udupi) ಈ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮಾನಗಿ ಗ್ರಾಮದ ಐಶ್ವರ್ಯ( 16) ರಕ್ಷಣೆಗೊಳಗಾದ ಬಾಲಕಿ. ಮಲ್ಪೆ ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಐಶ್ವರ್ಯ ಅಲೆಗಳ ನಡುವೆ ಸಿಲುಕಿದ್ದಳು.
ಏಕಾಏಕಿ ಬಂದ ಬೃಹತ್ ಅಲೆಗೆ ಸಿಲುಕಿ ನೀರಿನಲ್ಲಿ ಐಶ್ವರ್ಯ ಮುಳುಗುತ್ತಿದ್ದಳು. ತಕ್ಷಣ ಕಾರ್ಯಚರಣೆ ನಡೆಸಿದ ಲೈಫ್ ಗಾರ್ಡ್ ಮತ್ತು ಆಪತ್ಭಾಂದವ ಈಶ್ವರ್ ಮಲ್ಪೆ ಜೊತೆಯಾಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿ ನೇರವಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪು ನೀರು ಕುಡಿದ ಹಿನ್ನೆಲೆ ಬಾಲಕಿ ಅಸ್ವಸ್ಥಳಾಗಿದ್ದಳು. ಸದ್ಯ ಬಾಲಕಿ ಐಶ್ವರ್ಯ ಚೇತರಿಸಿಕೊಂಡಿದ್ದಾಳೆ.
ಚಿಕ್ಕಮಗಳೂರು: ಬಾವಿಗೆ ಬಿದ್ದ ಬೆಕ್ಕಿನ ರಕ್ಷಣೆ
ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು (Cat Resuce) ಅಗ್ನಿ ಶಾಮಕದಳದಿಂದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಎಂ. ಜಿ.ರಸ್ತೆಯಲ್ಲಿ ನಡೆದಿದೆ. ಮೂವತ್ತು ಅಡಿ ಅಳದ ತೆರೆದ ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಬುಟ್ಟಿಯಲ್ಲಿ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.
ರಾಮನಗರ: ಹಾಡಹಗಲೇ ಮನೆಯ ಮಹಡಿ ಮೇಲೆ ಚಿರತೆ ಪ್ರತ್ಯಕ್ಷ
ರಾಮನಗರ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ಆನಂದ್ ಎಂಬವರ ಮನೆ ಮಹಡಿ ಮೇಲೆ ಚಿರತೆ (Leopard) ಪ್ರತ್ಯಕ್ಷವಾಗಿದೆ. ಮನೆ ಮಹಡಿ ಮೇಲೆ ಚಿರತೆ ಇರೋ ವಿಡಿಯೋ ಮಾಡಿರುವ ಆನಂದ್, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಬಂದ ಹಿನ್ನೆಲೆ ಇಗ್ಗಲೂರು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಹಲವು ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿದೆ. ಇಗ್ಗಲೂರು ಬಳಿಯ ಚಿಕ್ಕಬೋರೆಗೌಡನದೊಡ್ಡಿ ಗ್ರಾಮದಲ್ಲಿ ಗೌತಮ್ ಎಂಬ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ