ಅಪ್ರಾಪ್ತ ಬುದ್ದಿಮಾಂದ್ಯೆ ಮೇಲೆ  ಅತ್ಯಾಚಾರ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ

ಆರೋಪಿ ವಿರುದ್ದ ಐಪಿಸಿ ಸೆಕ್ಷನ್  376(2) (ಎಲ್),  376 (ಎಬಿ) ಹಾಗೂ ಪೋಕ್ಸೊ ಕಾಯ್ದೆ 4(2) 5(ಜೆ) 1 ಹಾಗೂ 5 (ಕೆ) (ಎಂ) ಮತ್ತು 6ರಡಿಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಚಾಮರಾಜನಗರ (ಆ.13) ಜಿಲ್ಲೆಯ ಯಳಂದೂರು ತಾಲೋಕಿನ  ಗ್ರಾಮವೊಂದರಲ್ಲಿ ಅಂಗವಿಕಲ ಹಾಗೂ ಬುದ್ದಿಮಾಂದ್ಯ  ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗು  2 ಲಕ್ಷ ರೂಪಾಯಿ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಇದೇ ತಾಲೋಕಿನ 26 ವರ್ಷದ ರವಿ ಅಲಿಯಾಸ್ ರವಿಕುಮಾರ್ ಎಂಬ ಯುವಕ  ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾನೆ. 2018ರ ಆಗಸ್ಟ್ 15 ರಂದು ಈ ಘಟನೆ ನಡೆದಿತ್ತು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಮೂರು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಅಪರಾಧ ಸಾಭೀತಾದ ಹಿನ್ನಲೆಯಲ್ಲಿ ಯುವಕನಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಘಟನೆಯ ವಿವರ

ಅಂಗವೈಕಲ್ಯ ಹಾಗೂ ಬುದ್ದಿಮಾಂದ್ಯೆಯಾದ ಒಂಭತ್ತು ವರ್ಷದ  ಬಾಲಕಿ 2018ರ ಆಗಸ್ಟ್ 15 ರಂದು ಗ್ರಾಮದ ಶಾಲೆಯಲ್ಲಿ  ಆಟವಾಡುತ್ತಿದ್ದಾಗ ಯುವಕ ರವಿ ಬಾಲಕಿ ಯನ್ನು ಪುಸಲಾಯಿಸಿ, ಆಕೆಯ ಬಾಯಿ ಮುಚ್ಚಿ ಮಹಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಕೃತ್ಯ ಕಂಡ ಇತರ ಮಕ್ಕಳು ಬಾಲಕಿಯ ತಾತನಿಗೆ ವುಷಯ ತಿಳಿಸಿದರು. ತಕ್ಷಣ ಬಾಲಕಿಯ ತಾತ ಸ್ಥಳಕ್ಕೆ ಹೋದಾಗ ಬಾಲಕಿ ನಡೆದ ಘಟನೆ ವಿವರಿಸಿದ್ದಳು.

ಬಳಿಕ ಬಾಲಕಿಯ ತಾಯಿ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ  ಆರೋಪಿ ವಿರುದ್ದ ಐಪಿಸಿ ಸೆಕ್ಷನ್  376(2) (ಎಲ್),  376 (ಎಬಿ) ಹಾಗೂ ಪೋಕ್ಸೊ ಕಾಯ್ದೆ 4(2) 5(ಜೆ) 1 ಹಾಗೂ 5 (ಕೆ) (ಎಂ) ಮತ್ತು 6ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರವಿಯನ್ನು ಬಂಧಿಸಿದ್ದರು. ತನಿಖೆ ನಡೆಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್  ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಇದನ್ನು ಓದಿ: ಮಂಗಳೂರಿನಲ್ಲಿ ಎನ್ ಐ ಎ ಕಚೇರಿ ಸ್ಥಾಪಿಸುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ

3 ವರ್ಷಗಳ ಕಾಲ ವಿಚಾರಣೆ ನಡೆದು , ಆರೋಪಿ ರವಿ ಕೃತ್ಯವೆಸಗಿರುವುದು ಸಾಬೀತಾದ ಕಾರಣ ಆತನಿಗೆ 20 ವರ್ಷ ಜೈಲು ಶಿಕ್ಷೆ  ಹಾಗು 2 ಲಕ್ಷ ರೂಪಾಯಿ ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿ  ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನ್ ಪುರಿ ಅವರು  ತೀರ್ಪು ನೀಡಿದ್ದಾರೆ.

ಅಪ್ರಾಪ್ತ ನೊಂದ ಬಾಲಕಿಯ ಪುನಶ್ಚೇತನಕ್ಕಾಗಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು  ಒದಗಿಸುವಂತೆ  ಅವರು ಸರ್ಕಾರಕ್ಕೆ  ನಿರ್ದೇಶಿಸಿದ್ದಾರೆ. ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಬಾಲಕಿಗೆ ಪರಿಹಾರವಾಗಿ 2 ಲಕ್ಷದ 50 ಸಾವಿರ ರೂ ನೀಡುವಂತೆಯು ಅವರು ಸೂಚಿಸಿದ್ದಾರೆ. ಪ್ರಾಸಿಕ್ಯುಷನ್  ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಕೆ. ಯೋಗೇಶ್ ವಾದ ಮಂಡಿಸಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: