Murder: ಗುರಾಯಿಸಿ ನೋಡಿದ್ದೇ ತಪ್ಪಾಗಿ ಹೋಯ್ತು, ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!

ಸಿಲ್ಲಿ ರೀಸನ್‌ಗಳಿಗೆಲ್ಲ ಕೊಲೆ ನಡೆದೇ ಹೋಗುತ್ತದೆ ಎನ್ನುವುದಕ್ಕೆ ಬೆಂಗಳೂರಿನಲ್ಲೇ ಉದಾಹರಣೆಯೊಂದು ನಡೆದಿದೆ. ಇಲ್ಲಿ ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಂದು ಮುಗಿಸಿದ್ದಾನೆ.

ಆರೋಪಿ ರಾಮಕೃಷ್ಣ

ಆರೋಪಿ ರಾಮಕೃಷ್ಣ

  • Share this:
ಬೆಂಗಳೂರು: ಕೊಲೆ (Murder) ನಡೆಯೋದಕ್ಕೆ ಯಾವ ಘನಂದಾರಿ ಕಾರಣವೂ (Reason) ಬೇಕಿಲ್ಲ, ಚಿಕ್ಕ ಚಿಕ್ಕ ಸಿಲ್ಲಿ (Silly) ಎನಿಸುವಂತೆ ರೀಸನ್‌ಗಳಿಗೆಲ್ಲ ಕೊಲೆ ನಡೆದೇ ಹೋಗುತ್ತದೆ ಎನ್ನುವುದಕ್ಕೆ ಬೆಂಗಳೂರಿನಲ್ಲೇ (Bengaluru) ಉದಾಹರಣೆಯೊಂದು (Example) ನಡೆದಿದೆ. ಇಲ್ಲಿ ಅಣ್ಣನೊಬ್ಬ (Brother) ತನ್ನ ತಮ್ಮನನ್ನೇ ಕೊಂದು ಮುಗಿಸಿದ್ದಾನೆ. ಈ ಕೊಲೆಗೆ ಕಾರಣ ಮಾತ್ರ ಕ್ಷುಲ್ಲಕ. ಅಷ್ಟಕ್ಕೂ ತಮ್ಮ ಗುರಾಯಿಸಿದ ಎಂಬ ಕಾರಣ ತೆಗೆದು, ಅಣ್ಣ ಆ ತಮ್ಮನನ್ನು ಕೊಲೆ ಮಾಡಿದ್ದಾನೆ. ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ (Knife) ತಮ್ಮನ ಹೊಟ್ಟೆಗೆ ಅಣ್ಣ ಚುಚ್ಚಿದ್ದಾನೆ. ಇಷ್ಟಕ್ಕೆ ಗಂಭೀರವಾಗಿ ಗಾಯಗೊಂಡ ತಮ್ಮನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಗುರಾಯಿಸಿದ ಎಂಬ ಕಾರಣಕ್ಕೆ ತಮ್ಮನನ್ನೇ ಕೊಂದ ಅಣ್ಣ

ತನ್ನನ್ನು ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ತನ್ನ ತಮ್ಮನನ್ನು ಅಣ್ಣನೇ ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ಠಾಣಾ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ. ರಾಮಕೃಷ್ಣ ಎಂಬಾತನೇ ತನ್ನ ತಮ್ಮನನ್ನು ಕೊಲೆ ಮಾಡಿದ ಆರೋಪಿ. ಈತನ ತಮ್ಮ 25 ವರ್ಷದ ಬಾಲು ಎಂಬಾತ ಕೊಲೆಯಾಗಿದ್ದಾನೆ.

ಚಾಕುವಿನಿಂದ ಇರಿದು ಕೊಂದ ಅಣ್ಣ

ತನ್ನನ್ನು ಗುರಾಯಿಸಿ ನೋಡಿದ ಎನ್ನುವ ಕಾರಣಕ್ಕೆ ರಾಮಕೃಷ್ಣ ತಮ್ಮನ ಬಳಿ ಜಗಳವಾಡಲು ಆರಂಭಿಸಿದ್ದಾನೆ. ಆದರೆ ಇದು ವಿಕೋಪಕ್ಕೆ ಹೋಗಿ ರಾಮಕೃಷ್ಣ ಅಡುಗೆ ಮನೆಯಲ್ಲಿ ಇದ್ದ ಚಾಕು ತಂದು, ತಮ್ಮನನ್ನು ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Pavitra Lokesh: ಒಂದೇ ರೂಮಲ್ಲಿ ಇದ್ದಾರಾ ನರೇಶ್-ಪವಿತ್ರಾ ಲೋಕೇಶ್? ಹೋಟೆಲ್‌ ಮುಂದೆಯೇ ಕುಳಿತಿದ್ದಾರಂತೆ ರಮ್ಯಾ ರಘುಪತಿ!

ಅಣ್ಣ ತಮ್ಮನ  ನಡುವೆ ಆಗಾಗ ಜಗಳ

ಅಣ್ಣ-ತಮ್ಮನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಅನೇಕ ಬಾರಿ ಕೊಲ್ಲಲು ಆತ ಪ್ರಯತ್ನಿಸಿದ್ದನಂತೆ. ಆದರೆ ಈ ಬಾರಿ ಗುರಾಯಿಸಿದ ಎಂಬ ಸಿಲ್ಲಿ ಕಾರಣ ತೆಗೆದು, ಚಾಕು ಇರಿದು ಕೊಂದೇ ಬಿಟ್ಟಿದ್ದಾನೆ. ಇನ್ನು ಕೊಲೆ ಬಳಿಕ ಆರೋಪಿ ರಾಮಕೃಷ್ಣ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನೆಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಾಕುವಿನಿಂದ ಇರಿದು ಯುವಕನ ಮೇಲೆ ಹಲ್ಲೆ

ಚಿತ್ರದುರ್ಗದಲ್ಲಿ ಯುವಕನೋರ್ವ ಮತ್ತೋರ್ವ ಯುವಕನಿಗೆ ಚಾಕು ಇರಿದು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಹೊರವಲಯದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಸಮೀವುಲ್ಲಾ ಎಂಬಾತನೇ ಹಲ್ಲೆಗೊಳಗಾದ ಯುವಕ.

ಗುರಾಯಿಸಿದ ಕಾರಣಕ್ಕೆ ನಡೆಯಿತಾ ಹಲ್ಲೆ?

ಆಲೂರು ಗ್ರಾಮದ ಯುವಕ ಸಮಿವುಲ್ಲಾ ಶನಿವಾರ ಸಂಜೆ ವಾಯು ವಿಹಾರಕ್ಕೆಂದು ಬಂದು, ರಸ್ತೆಯಲ್ಲಿ ನಿಂತಿದ್ದಾಗ, ನೂತನ್ ಎಂಬಾತ ಗುರಾಯಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಈ ರೀತಿ ಯಾಕೆ ಗುರಾಯಿಸುತ್ತೀಯಾ ಎಂದು ಸಮಿವುಲ್ಲಾ ಪ್ರಶ್ನಿಸಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ವಿಕೋಪಕ್ಕೆ ತಿರುಗಿ, ಸಮಿವುಲ್ಲಾ, ನೂತನ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ನೂತನ್ ಸಮಿವುಲ್ಲಾನ ಎದೆ ಮತ್ತು ಹಣೆಯ ಭಾಗಕ್ಕೆ ನಾಲ್ಕೈದು ಬಾರಿ
ಚಾಕುವಿನಿಂದ ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ.

ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಸಮಿವುಲ್ಲಾ ಗಂಭೀರ ಗಾಯಗೊಂಡಿದ್ದು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‍ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

ಹೆಂಡತಿ ಬಗ್ಗೆ ಮಾತನಾಡಿದ್ದಕ್ಕೆ ಕೊಲೆ

ಮತ್ತೊಂದೆಡೆ ತನ್ನ ಹೆಂಡತಿಯ ಬಗ್ಗೆ ಹಗುರವಾಗಿ ಮಾತನಾಡಿದ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿರುವ ಪ್ರಕರಣ ಬಳ್ಳಾರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ. ಶ್ರೀರಾಮ್ ಕೊಲೆ ಆರೋಪಿಯಾಗಿದ್ದು, ತಮ್ಮಣ್ಣ(43)ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
Published by:Annappa Achari
First published: