HOME » NEWS » State » YOUNG MAN KILLED FOR NOT CLEAR 15 THOUSAND DEBT IN GULBARGA SESR SAKLB

ಯುವಕನಿಗೆ ಮೃತ್ಯುವಾಗಿ ಕಾಡಿದ 15 ಸಾವಿರ ರೂಪಾಯಿ ಸಾಲ; ಕಿಡ್ನ್ಯಾಪ್ ಮಾಡಿ, ಬರ್ಬರವಾಗಿ ಹತ್ಯೆ

ಕೊಡಿಸಿದ ಸಾಲವವನ್ನು ನೀನೇ ಕಟ್ಟೆಂದು ದುಂಬಾಲು ಬಿದ್ದಿದ್ದ ಸಾಲಗಾರರು, ಕೊನೆಗೆ ಯುವಕನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ

news18-kannada
Updated:February 12, 2021, 8:10 PM IST
ಯುವಕನಿಗೆ ಮೃತ್ಯುವಾಗಿ ಕಾಡಿದ 15 ಸಾವಿರ ರೂಪಾಯಿ ಸಾಲ;  ಕಿಡ್ನ್ಯಾಪ್ ಮಾಡಿ, ಬರ್ಬರವಾಗಿ ಹತ್ಯೆ
ಸಾಂದರ್ಭಿಕ ಚಿತ್ರ.
  • Share this:
ಕಲಬುರ್ಗಿ (ಫೆ.12):  ಗೆಳೆಯನೊಬ್ಬನಿಗೆ ನೆರವಾಗಲೆಂದು ಕೊಡಿಸಿದ 15 ಸಾವಿರ ರೂಪಾಯಿ ಸಾಲ ಯುವಕನಿಗೆ ಮೃತ್ಯುವಾಗಿ ಕಾಡಿದೆ. ಕೊಡಿಸಿದ ಸಾಲವವನ್ನು ನೀನೇ ಕಟ್ಟೆಂದು ದುಂಬಾಲು ಬಿದ್ದಿದ್ದ ಸಾಲಗಾರರು, ಕೊನೆಗೆ ಯುವಕನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಕೊಲೆಗೈದ ಘಟನೆ ಕಲಬುರ್ಗಿ ತಾಲೂಕಿನ ಸಿಂದಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ವಿರೇಶ್ ಬೀಮಳ್ಳಿ(28) ಎಂದು ಗುರುತಿಸಲಾಗಿದೆ. ವಿರೇಶ್, ಕಲಬುರ್ಗಿ ನಗರದ ದುಬೈ ಕಾಲೋನಿ ನಿವಾಸಿಯಾಗಿದ್ದು, ಹಣಕಾಸಿನ ವಿಚಾರಕ್ಕೆ ಅಪಹರಣ ಮಾಡಿ ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಲು ಯತ್ನಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. 

ವೀರೇಶ್ ನಗರದ ಸೂಪರ್ ಮಾರ್ಕೇಟ್ ನಲ್ಲಿ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಶರಣು ಕಟ್ಟಡ ಕಾರ್ಮಿಕನಾಗಿದ್ದರೆ, ಮಕ್ಕಳು ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಬುಧವಾರ ಮುಂಜಾನೆ ಕೆಲಸಕ್ಕೆ ಹೋಗಿದ್ದ ವಿರೇಶ್ ನಂತರ ನಾಪತ್ತೆಯಾಗಿದ್ದ. ಮೂವರು ವ್ಯಕ್ತಿಗಳು ಬಾಂಡೆ ಅಂಗಡಿಗೆ ಬಂದು ವೀರೇಶ್ ನನ್ನು ಕರೆದುಕೊಂಡು ಹೋಗಿದ್ದರು. ಬುಧವಾರ ಮಧ್ಯಾಹ್ನ ವೀರೇಶ್ ನಾಪತ್ತೆಯಾಗಿದ್ದ. ವೀರೇಶ್ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆ ಶರಣು ಮತ್ತಿತರರು ಮಗನಿಗಾಗಿ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಪತ್ತೆಯಾಗದೇ ಇದ್ದಾಗ ಕೊನೆಗೆ ಚೌಕ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು.ಆದರೆ ಗುರುವಾರ ಸಂಜೆ ವೀರೇಶ್ ಭೀಮಳ್ಳಿ ಶವವಾಗಿ ಪತ್ತೆಯಾಗಿದ್ದಾನೆ. ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ದುಷ್ಕರ್ಮಿಗಲು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿದ್ದಾರೆ. ತೀವ್ರ ರಕ್ತಸ್ರಾವದಿಂದ ವೀರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತಪಟ್ಟ ನಂತರ ವೀರೇಶ್ ನನ್ನು ಅಲ್ಲಿಯೇ ಗುಂಡಿ ತೋಡಿ ಹೂಳಲು ಯತ್ನಿಸಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಕೆಲಸಕ್ಕೆಂದು ಹೋದ ಮಗ ಈಗ ಶವವಾಗಿ ಪತ್ತೆಯಾಗಿದ್ದಾನೆ. ಶ್ರೀಶೈಲ್ ಮತ್ತು ಇನ್ನಿಬ್ಬರು ವ್ಯಕ್ತಿಗಳು ತನ್ನ ಮಗನನ್ನು ಆಟೋದಲ್ಲಿ ಕರೆದೊಯ್ದಿರಂತೆ. ಅವರಿಂದಲೇ ಈ ಕೊಲೆ ಕೃತ್ಯ ನಡೆದಿದೆ ಎಂದು ಮೃತ ವೀರೇಶ್ ತಂದೆ ಶರಣು ಆರೋಪಿಸಿದ್ದಾರೆ.

ಗೆಳೆಯರು ಮತ್ತು ಪೋಷಕರು ಹೇಳುವ ಪ್ರಕಾರ ವೀರೇಶ್ ಗೆ ಯಾರೊಂದಿಗೂ ದ್ವೇಷ ಹಗೆತನಗಳಿದ್ದಿಲ್ಲ. ಆದರೂ ಈ ರೀತಿ ಅಪಹರಣ ಮಾಡಿ ಕೊಲೆ ಮಾಡಿರೋದು ಎಲ್ಲರಲ್ಲಿಯೂ ಅಚ್ಚರಿಗೆ ಕಾರಣವಾಗಿದೆ. ತನ್ನ ಮಗು ದುಡಿಯುತ್ತಿದ್ದನಾದರೂ, ತನ್ನ ಖರ್ಚನ್ನು ತಾನು ನೋಡಿಕೊಳ್ಳುತ್ತಿದ್ದ. ಮನೆಗೆ ಹಣ ಕೊಡುವಂತೆಯೂ ಕೇಳುತ್ತಿರಲಿಲ್ಲ. ಹೀಗಾಗಿ ಆತನಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆಯೂ ಇರಲಿಲ್ಲ. ಬರುವ ಹಣದಲ್ಲಿಯೇ ಜೀವನ ಮಾಡಿಕೊಂಡು ಹೊರಟಿದ್ದ. ತನ್ನ ಪಾಡಿಗೆ ತಾನು ಜೀವನ ಮಾಡುತ್ತಿದ್ದವನನ್ನು ಹೀಗೆ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ಶರಣು ಅಲವತ್ತುಕೊಂಡಿದ್ದಾನೆ.

ಇದನ್ನು ಓದಿ: ಐಶ್ವರ್ಯಾ ಶಿವಕುಮಾರ್​ ಅರಿಶಿಣ ಶಾಸ್ತ್ರದ ಮತ್ತಷ್ಟು ಎಕ್ಸ್​ಕ್ಲೂಸಿವ್​ ಚಿತ್ರಗಳು ಇಲ್ಲಿವೆ

ಮೃತ ವೀರೇಶ್ ತನ್ನ ಗೆಳೆಯ ಸಾಗರ್ ಎನ್ನುವವರಿಗೆ ಶ್ರೀಶೈಲ್ ಕಡೆಯಿಂದ 15 ಸಾವಿರ ರೂಪಾಯಿ ಸಾಲ ಕೊಡಿಸಿದ್ದ ಎನ್ನಲಾಗಿದೆ. ಆದರೆ ಹಣ ಪಡೆದಿದ್ದ ಸಾಗರ್ ವಾಪಸ್ ಕಟ್ಟಿರಲಿಲ್ಲ. ಹೀಗಾಗಿ ನೀನೇ ಹಣ ಕಟ್ಟಿಕೊಡುವಂತೆ ಶ್ರೀಶೈಲ್, ಮೃತ ವೀರೇಶ್ ಗೆ ಒತ್ತಡ ಹಾಕಿದ್ದ ಎನ್ನಲಾಗಿದೆ. ನಾನ್ಯಾಕೆ ಹಣ ವಾಪಸ್ ಕೊಡಲಿ ಎಂದು ವೀರೇಶ್ ಹೇಳಿದ್ದರಿಂದ ಕುಪಿತಗೊಂಡು ಶ್ರೀಶೈಲ್ ಈ ರೀತಿಯ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದು, ಶೀಘ್ರವೇ ಎಲ್ಲ ಸತ್ಯ ಬಹಿರಂಗಗೊಳ್ಳಲಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಗೆಳೆಯನಿಗೆ 15 ಸಾವಿರ ರೂಪಾಯಿ ಸಾಲ ಕೊಡಿಸಿದ ತಪ್ಪಿಗಾಗಿ ವೀರೇಶ್ ಶವವಾಗಿದ್ದಾನೆ. ಕೇವಲ 15 ಸಾವಿರ ರೂಪಾಯಿಗೆ ಈ ರೀತಿ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ವೀರೇಶ್ ಆಪ್ತ ವಲಯ ಆಕ್ರೋಶ ವ್ಯಕ್ತಪಡಿಸಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆಯೂ ಆಗ್ರಹಿಸಿದೆ.

(ವರದಿ - ಶಿವರಾಮ ಅಸುಂಡಿ)
Published by: Seema R
First published: February 12, 2021, 7:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories