ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ; ಪ್ರಾಣಾಪಾಯದಿಂದ ಪಾರು

ಬೆಳಗ್ಗೆ 11.20 ಕ್ಕೆ ಮೆಟ್ರೋ ಟ್ರ್ಯಾಕ್ ಮೇಲಕ್ಕೆ ವೇಣು ಜಿಗಿದಿದ್ದಾನೆ. ಅದೃಷ್ಟವಶಾತ್ ಹೈ ವೋಲ್ಟೇಜ್ ಲೈನ್ ಗೆ ಆತನ ದೇಹ ಟಚ್ ಆಗಿಲ್ಲ. ಹೀಗಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

HR Ramesh | news18
Updated:January 11, 2019, 1:22 PM IST
ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ; ಪ್ರಾಣಾಪಾಯದಿಂದ ಪಾರು
ಹಳಿ ಮೇಲೆ ಬಿದ್ದ ಯುವಕನನ್ನು ರಕ್ಷಿಸುತ್ತಿರುವ ಸಿಬ್ಬಂದಿ
HR Ramesh | news18
Updated: January 11, 2019, 1:22 PM IST
ಬೆಂಗಳೂರು: ಇಲ್ಲಿನ ನ್ಯಾಷನಲ್ ಕಾಲೇಜು ಮೆಟ್ರೋ ರೈಲು ನಿಲ್ದಾಣದ ಹಳಿ ಮೇಲೆ ಯುವಕನೊಬ್ಬ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಬಸವನಗುಡಿ ನಿವಾಸಿ ವೇಣು (25) ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದುಬಂದಿದೆ. ವೃತ್ತಿಯಲ್ಲಿ ಟೈಲರ್ ಆದ ವೇಣು, ಡಿ.ಕೆ.ಟೈಲರ್ ಶಾಪ್ ನಡೆಸುತ್ತಿದ್ದ. ಆತ್ಮಹತ್ಯಗೆ ಕಾರಣ ತಿಳಿದುಬಂದಿಲ್ಲ.

ಬೆಳಗ್ಗೆ 11.20 ಕ್ಕೆ ಮೆಟ್ರೋ ಟ್ರ್ಯಾಕ್ ಮೇಲಕ್ಕೆ ವೇಣು ಜಿಗಿದಿದ್ದಾನೆ. ಅದೃಷ್ಟವಶಾತ್ ಹೈ ವೋಲ್ಟೇಜ್ ಲೈನ್ ಗೆ ಆತನ ದೇಹ ಟಚ್ ಆಗಿಲ್ಲ. ಹೀಗಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ರೈಲು ಕೂಡಲೇ ಬಂದಿದ್ದರಿಂದ ಆತನನ್ನು ರೈಲು ಉಜ್ಜಿಕೊಂಡು  ಹೋಗಿದ್ದು, ತಲೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಪೆಟ್ಟಾಗಿದೆ. ಸದ್ಯ ಯುವಕನಿಗೆ ಪ್ರಜ್ಞೆ ಬಂದಿದ್ದು, ನಿಮ್ಹಾನ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

ಇದನ್ನು ಓದಿ: Exclusive Story | ಮೊದಲ ಹಂತದ ಮೆಟ್ರೋ ಕಾಮಗಾರಿ ಗುಣಮಟ್ಟದ ಬಗ್ಗೆ 2009ರಲ್ಲೇ ಸಂದೇಹ ವ್ಯಕ್ತಪಡಿಸಿದ್ದ ತಜ್ಞರ ತಂಡ

ಘಟನೆ ಸ್ಥಳಕ್ಕೆ ಆಗಮಿಸಿದ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಟ್ ಮಾತನಾಡಿ, ಆತ ದಿಢೀರನೆ ಟ್ರ್ಯಾಕ್ ಮೇಲೆ ನೆಗೆದಿದ್ದಾನೆ. ಘಟನೆ ನಡೆದ ಕೂಡಲೇ ಪವರ್ ಸಪ್ಲೈ ನಿಲ್ಲಿಸಿದ್ದೇವೆ. ಆತ ಸೇಫ್ಟಿ ಲೈನ್ ಮೀರಿ ಹೋಗಿದ್ದ. ಅದೃಷ್ಟವಶಾತ್ ಬದುಕಿದ್ದಾನೆ. ಕೂಡಲೇ ನಿಮ್ಹಾನ್ಸ್​ಗೆ ಶಿಫ್ಟ್ ಮಾಡಿದ್ದೀವಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಘಟನೆ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಯವರೆಗೂ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
Loading...

 

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...