Mobileನಿಂದ ಜೀವ ಉಳಿಸಿಕೊಂಡನಾ ಯುವಕ? ಬ್ರಹ್ಮಗಿರಿಯಲ್ಲಿ ಬಿದ್ದು ಬದುಕಿ ಬಂದವನ ರೋಚಕ ಕಥೆ

"ಮೊಬೈಲ್‌ನಿಂದಾನೇ ಯುವಕರು ಕೆಡ್ತಿದ್ದಾರೆ" ಅಂತ ದೊಡ್ಡವ್ರೆಲ್ಲ ಬೈಯ್ತಾರೆ. ಆದ್ರೆ ಮೊಬೈಲ್ ಇರಲಿ, ಯಾವುದೇ ಇರಲಿ, ನಾವು ಅದನ್ನ ಹೇಗೆ ಯೂಸ್ ಮಾಡ್ತೀವಿ ಅನ್ನುವುದರ ಮೇಲೆ ಎಲ್ಲಾ ಇದೆ. ಇಲ್ಲಿ ಆಳದದ ಪ್ರಪಾತಕ್ಕೆ ಬಿದಿದ್ದ ಯುವಕನ ಪ್ರಾಣ ಉಳಿಸಿದ್ದ ಪುಟ್ಟ ಮೊಬೈಲ್ ಅನ್ನುವುದನ್ನು ನೀವು ನಂಬಲೇ ಬೇಕು. ಈ ರಕ್ಷಣಾ ಕಾರ್ಯಾಚರಣೆಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ...

ಕಂದಕಕ್ಕೆ ಬಿದ್ದು ಸುರಕ್ಷಿತವಾಗಿ ಬಂದ ಯುವಕ

ಕಂದಕಕ್ಕೆ ಬಿದ್ದು ಸುರಕ್ಷಿತವಾಗಿ ಬಂದ ಯುವಕ

  • Share this:
ಚಿಕ್ಕಬಳ್ಳಾಪುರ: ನಿನ್ನೆ ಇಡೀ ರಾಜ್ಯದ ಜನ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಏನ್ ಆಗುತ್ತೋ ಏನೋ ಅಂತ ಟೆನ್ಶನ್ (Tension) ಮಾಡಿಕೊಂಡಿದ್ರು. ಅದು ಯಾಕಪ್ಪ ಅಂತ ಅಂದ್ರೆ 19 ವರ್ಷದ ಯುವಕನೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಾ ಇದ್ದ. ಆತ ಬದುಕಿ ಬರುತ್ತಾನೆ ಎಂಬ ಯಾವ ಒಂದು ಸಣ್ಣ ಭರವಸೆಯೂ ಇರಲಿಲ್ಲ. ಹೀಗಾಗಿ ಅವನು ಸುರಕ್ಷಿತವಾಗಿ (Safe) ವಾಪಸ್ ಬರಲಿ ಅಂತ ಅದೆಷ್ಟೋ ಹೃದಯಗಳು ಪ್ರಾರ್ಥಿಸಿದ್ದವು (Prayer). ದೇವರು (God) ದೊಡ್ಡವನು, ಕೊನೆಗೂ ಎಲ್ಲರ ಪ್ರಾರ್ಥನೆ ಫಲಿಸಿತು . ವಾಯುಪಡೆಯ (Airforce) ವೀರ ಸೈನಿಕರು ದೇವರ ರೂಪದಲ್ಲಿ ಬಂದು ಆತನನ್ನು ರಕ್ಷಿಸಿದ್ದಾರೆ (Rescue). ಇವೆಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆತನ ಜೀವ ಉಳಿಸಲು ಕಾರಣವಾಗಿದ್ದು, ವಾಯುಸೇನೆಗೆ ಸುಳಿವು ಕೊಟ್ಟಿದ್ದು ಮೊಬೈಲ್ (Mobile) ಅಂದರೆ ನಿಮಗೆ ಆಶ್ಚರ್ಯ ಆಗಬಹುದು. ಹೌದು ಇದು ನಿಜ. ಆದ್ರೆ ಅದು ಹೇಗೆ ಅಂತ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ…

ಟ್ರೆಕ್ಕಿಂಗ್‌ಗೆ ಹೋಗಿ 200 ಅಡಿ ಪ್ರಪಾತಕ್ಕೆ ಬಿದ್ದಿದ್ದ ಯುವಕ

 ನಿನ್ನೆ ಚಿಕ್ಕಬಳ್ಳಾಪುರದ ವಿಶ್ವ ಪ್ರಸಿದ್ಧ ನಂದಿ ಗಿರಿಧಾಮದ ಬ್ರಹ್ಮಗಿರಿ ಬೆಟ್ಟದಲ್ಲಿ ಘಟನೆ ನಡೆದಿತ್ತು. ಟ್ರಕ್ಕಿಂಗ್‌ಗೆ ಅಂತ ಬಂದಿದ್ದ ದೆಹಲಿ ಮೂಲದ 19 ವರ್ಷದ ಯುವಕ ನಿಶಾಂಕ್ ಕೌಲ್ ಎಂಬಾತ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದಿದ್ದ. ಅದೂ ಬರೋಬ್ಬರಿ 200 ಅಡಿ ಆಳಕ್ಕೆ ಬಿದ್ದಿದ್ದಾನೆ.

ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಸುಮಾರು 62 ಕಿಲೋ ಮೀಟರ್. ಅಂದರೆ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ. ಬೆಂಗಳೂರಿನಿಂದ ಈ ಯುವಕ ಬೆಳಗ್ಗೆಯೇ ದ್ವಿಚಕ್ರ ವಾಹನದಲ್ಲಿ ಒಬ್ಬನೇ ಬಂದಿದ್ದ ಯುವಕ, ನಂದಿ ಬೆಟ್ಟಕ್ಕೆ ಬಿಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಬೈಕ್ ಅನ್ನು ಬೆಟ್ಟದ ತಪ್ಪಲಿನಲ್ಲಿಯೇ ನಿಲ್ಲಿಸಿ, ಟ್ರಕ್ಕಿಂಗ್‌ಗೆ ಹೊರಟಿದ್ದಾನೆ. ಈ ವೇಳೆ ಬೆಟ್ಟದ ಅರ್ಧ ಭಾಗಕ್ಕೆ ತೆರಳಿ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆತ ಬಿದ್ದ ಜಾಗದಿಂದ ಕೂಗಿಕೊಂಡರೂ, ಕಿರುಚಿಕೊಂಡರೂ ಯಾರಿಗೂ ಕೇಳುವಂತೆ ಇರಲಿಲ್ಲ.

ಜೀವ ಉಳಿಸಿತು ಯುವಕನ ಕೈಯಲ್ಲಿದ್ದ ಮೊಬೈಲ್

ಹೌದು, ನಿಜಕ್ಕೂ ಇದೊಂದು ರೋಚಕ ಕಥೆಯೇ ಸರಿ. ಹೀಗೆ ಪ್ರಪಾತಕ್ಕೆ ಬಿದ್ದಿದ್ದ ಯುವಕನ್ನು ರಕ್ಷಿಸಿದ್ದು ಮೊಬೈಲ್. ಈತ ಪ್ರಪಾತಕ್ಕೆ ಬೀಳುತ್ತಿದ್ದಂತೆಯೇ ಭಯಗೊಂಡಿದ್ದಾನೆ. ಕಿರುಚಿಕೊಂಡರೂ ಯಾರೂ ಸ್ಪಂದಿಸದಿದ್ದಾಗ ಕಂಗಾಲಾಗಿದ್ದಾನೆ. ಮುಂದೇನು ಮಾಡಬೇಕೆಂದು ತಿಳಿಯದೇ ಹತಾಶನಾಗಿದ್ದಾನೆ. ಆಗ ಜೇಬಿನಲ್ಲಿದ್ದ ಮೊಬೈಲ್ ಗಮನಕ್ಕೆ ಬಂದಿದೆ.

ಇದನ್ನೂ ಓದಿ: Bengaluru to Pakistan: ಜೈಲಿನಲ್ಲಿದ್ದ ಮಹಿಳೆಗೆ ಪಾಕ್ ಪೌರತ್ವ! ಆಕೆ ಬೆಂಗಳೂರಿಗೆ ಬಂದಿದ್ದೇ ರೋಚಕ

ಪೊಲೀಸರಿಗೆ ಲೊಕೇಶನ್ ಶೇರ್ ಮಾಡಿದ್ದ ಯುವಕ

ಒಂದು ಕ್ಷಣವೂ ತಡ ಮಾಡದ ಯುವಕ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸಿದ್ದಾನೆ. ಜೊತೆಗೆ ಲೋಕೇನ್ ಅನ್ನು ಹಂಚಿಕೊಂಡಿದ್ದಾನೆ. ಇದೇ ಆತನ ಪ್ರಾಣ ಉಳಿಸಿದೆ.

ತಕ್ಷಣವೇ ನೆರವಿಗೆ ಬಂದ ಜೀವರಕ್ಷಕರು

ಯುವಕನ ಸಂದೇಶ ಬರುತ್ತಿದ್ದಂತೆ ಎಲ್ಲರೂ ಅಲರ್ಟ್ ಆಗಿದ್ದಾರೆ. ಮೊದಲಿಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್‌ನೊಂದಿಗೆ ಪೊಲೀಸ್ ತಂಡವು ರಕ್ಷಣೆಗೆ ಹೋಗಿದೆ.  ಆದರೆ ಸಾಧ್ಯವಾಗಲಿಲ್ಲ. ನಂತರ ಭಾರತೀಯ ವಾಯು ಸೇನೆಯನ್ನು ಸಂಪರ್ಕಿಸಲಾಗಿದೆ.

ಕಾರ್ಯಾಚರಣೆಯ ವಿಡಿಯೋ ನೋಡಿ
ರಕ್ಷಣಾ ಕಾರ್ಯಾಚರಣೆ ನಡೆಯುವ ವೇಳೆಯೇ ಮೊಬೈಲ್ ಸ್ವಿಚ್ ಆಫ್!

ಇಷ್ಟೆಲ್ಲಾ ಆಗುತ್ತಿದ್ದಂತೆ ಯುವಕನ ಕೈಯಲ್ಲಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಸ್ವಲ್ಪ ಅಡ್ಡಿಯಾಗಿದೆ. ಆದರೆ ಆತ ಮೊದಲು ಕಳಿಸಿದ್ದ ಲೋಕೇಶನ್ ಆಧಾರದಿಂದ ಯುವಕ ಇರುವ ಸ್ಥಳವನ್ನು ಪತ್ತೆ ಮಾಡಲಾಯ್ತು. ಬಳಿಕ ಸೇನಾ ಹೆಲಿಕಾಪ್ಟರ್ ಬಳಸಿ, ಯುವಕನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಯ್ತು.

ಇದನ್ನೂ ಓದಿ: Shivamogga: ಹಿಂದೂ ಸಂಘಟನೆಗೆ ಸೇರಿದ 21 ವರ್ಷದ ಯುವಕನ ಬರ್ಬರ ಕೊಲೆ; ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ

ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು

ಯುವಕನನ್ನು ಪ್ರಪಾತದಿಂದ ಸುರಕ್ಷಿತವಾಗಿ ರಕ್ಷಿಸಿದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಚಿಕ್ಕಪುಟ್ಟ ಗಾಯಗಳಾಗಿದ್ದು ಸದ್ಯ ಆತ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Published by:Annappa Achari
First published: