ಚಿಕ್ಕಬಳ್ಳಾಪುರ: ಆತನಿಗೆ ಎಂಗೇಜ್‌ಮೆಂಟ್ (Engagement) ಆಗಿತ್ತು. ಆತ ಕೂಡ ಖುಷಿಯಿಂದಲೇ ಹೋಗಿ ಆ ಹುಡುಗಿ (Girl) ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಬಂದಿದ್ದ. ಮನೆಯಲ್ಲೂ ಮಗನ (Son) ಮದುವೆಯ (Marriage) ಸಂಭ್ರಮ ಮನೆಮಾಡಿತ್ತು. ಆದರೆ ಆತನಿಗೆ ಏನಾಗಿತ್ತೋ ಏನೋ.. ಸೂಸೈಡ್ (Suicide) ಮಾಡಿಕೊಂಡು ಬಿಟ್ಟ. ಮಗ ಯಾಕ್ ಹಿಂಗೆ ಮಾಡಿಕೊಂಡ ಅಂತ ತಲೆ ಕೆಡಿಸಿಕೊಂಡ ಮನೆಯವರು, ಅವನ ಮೊಬೈಲ್ (Mobile) ಜಾಲಾಡಿದರು. ಆಗ ಅಲ್ಲಿತ್ತು ಆ ವಿವಾಹಿತ ಮಹಿಳೆಯ ಬ್ಲ್ಯಾಕ್ ಮೇಲ್ (Blackmail) ಸಾಕ್ಷ್ಯ! ರಕ್ತದಲ್ಲೂ (Blood) ಪತ್ರ (Letter) ಬರೆದು ಸಾರಿ ಕೇಳಿದ್ದ ಆತ, ಕೊನೆಗೆ ಆಕೆ ಕಾಟ ತಾಳಲಾರದೇ ಸೂಸೈಡ್ ಮಾಡಿಕೊಂಡು ಬಿಟ್ಟಿದ್ದ!
ಶಿಡ್ಲಘಟ್ಟದಲ್ಲಿ ಸೂಸೈಡ್ ಮಾಡಿಕೊಂಡಿದ್ದ ಯುವಕ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಮುನಿಕೃಷ್ಣ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದ. ಈತನಿಗೆ ಗುಡಿಬಂಡೆ ತಾಲೂಕಿನ ಹುಡುಗಿ ಜೊತೆ ವಿವಾಹ ನಿಶ್ಚಿತಾರ್ಥ ಆಗಿತ್ತು. ಇದಾಗಿ ಮೂರೇ ದಿನಕ್ಕೆ ಮುನಿಕೃಷ್ಣ ಸೂಸೈಡ್ ಮಾಡಿಕೊಂಡಿದ್ದ.
ರಕ್ತದಲ್ಲಿ ಪ್ರೇಮ ಪತ್ರ ಬರೆದಿದ್ದ ಮುನಿಕೃಷ್ಣ
ಮುನಿಕೃಷ್ಣ ಸಾಯುವ ಮುನ್ನ ತನ್ನ ರಕ್ತದಲ್ಲಿ ಪ್ರೇಮಪತ್ರ ಬರೆದಿದ್ದ ಎನ್ನಲಾಗಿದೆ. ಪತ್ರದಲ್ಲಿ ಐ ಆ್ಯಮ್ ಸಾರಿ, ಕ್ಷಮಿಸು ಅಂತ ಕೋರಿಕೊಂಡಿದ್ದ. ಕೊನೆಗೆ ಸೆಲ್ಫಿ ವಿಡಿಯೋ ಮಾಡಿ, ಅಳುತ್ತಲೇ ಸೂಸೈಡ್ ಮಾಡಿಕೊಂಡಿದ್ದ.
ಇದನ್ನೂ ಓದಿ: Murder Case: ಗುರಾಯಿಸಿದ ಎಂಬ ಕಾರಣಕ್ಕೆ ಯುವಕನನ್ನೇ ಕೊಂದಿದ್ದ ಪಾಪಿಗಳು! ಹಂತಕರಿಗೆ ಈಗ ಜೀವಾವಧಿ ಶಿಕ್ಷೆ
ಸೆಲ್ಫಿ ವಿಡಿಯೋ ಮಾಡಿಕೊಂಡು, ವಿಷ ಕುಡಿದ!
ಮುನಿಕೃಷ್ಣ ಅಳುತ್ತಲೇ ಸೆಲ್ಫಿ ವಿಡಿಯೋ ಮಾಡಿದ್ದಾನೆ. ತನ್ನ ಕೆನ್ನೆ ಮೇಲೆಲ್ಲಾ ತಾನೇ ಪಟಪಟನೆ ಹೊಡೆದುಕೊಂಡು, ಅತ್ತಿದ್ದಾನೆ. ಬಳಿಕ ತಲೆ ತಲೆ ಚಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಇದಾದ ಮೇಲೆ ಸೆಲ್ಫಿ ವಿಡಿಯೋದಲ್ಲಿ ವಿಷ ಕುಡಿದು, ಒದ್ದಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುನಿರತ್ನ ಸಾವಿನ ಹಿಂದೆ ವಿವಾಹಿತೆಯ ನೆರಳು
ಬಿಎಸ್ಸಿ ಪದವೀಧರನಾಗಿದ್ದ ಮುನಿಕೃಷ್ಣ, ಚಿಂತಾಮಣಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಈತ ತಮ್ಮ ಸಂಬಂಧಿಯೇ ಆದ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಸಾವಿಗೂ ಮುನ್ನ ಸಾರಿ ಅಂತ ರಕ್ತದಲ್ಲಿ ಬರೆದಿದ್ದು ಆಕೆಗೇ ಎನ್ನಲಾಗಿದೆ.
ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳಾ ಆ ಮಹಿಳೆ?
ಮುನಿಕೃಷ್ಣ ಬೇರೆ ಹುಡುಗಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಬಳಿಕ ಈ ವಿವಾಹಿತ ಮಹಿಳೆ ಕೋಪಗೊಂಡಿದ್ದಳು ಎನ್ನಲಾಗಿದೆ. ಹೀಗಾಗಿ ಆತನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಮನನೊಂದು ಮುನಿಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುತ್ತಿದ್ದಾರೆ.
ಮೊಬೈಲ್‌ನಲ್ಲಿ ಸಿಕ್ಕಿತು ಸಾಕ್ಷ್ಯ
ಇನ್ನು ಸೂಸೈಡ್ ಮಾಡಿಕೊಂಡ ಮುನಿಕೃಷ್ಣ ಮೊಬೈಲ್‌ನಲ್ಲಿ ಸಾಕಷ್ಟು ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ. ವಿವಾಹಿತ ಮಹಿಳೆಯ ಜೊತೆ ಚಾಟಿಂಗ್ ಮಾಡಿದ್ದು, ವಿಡಿಯೋ ಕಾಲ್ ಮಾಡಿದ್ದು, ಮೆಸೇಜ್ ಮಾಡಿದ್ದು ಬಯಲಾಗಿದೆ.
ಪೊಲೀಸರಿಂದ ಮುಂದುವರೆದ ತನಿಖೆ
ಮುನಿಕೃಷ್ಣ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಆತ್ಮಹತ್ಯೆಗೂ ಮೊದಲು ಏನೆಲ್ಲಾ ಆಯ್ತು? ಮಹಿಳೆ ಮತ್ತು ಮುನಿಕೃಷ್ಣ ಮಧ್ಯೆ ನಡೆದ ಚಾಟಿಂಗ್ ಏನು? ಮಹಿಳೆ ಬ್ಲ್ಯಾಕ್ಮೇಲ್ ಮಾಡಿದ್ದು ನಿಜಾನಾ ಅನ್ನೋ ಬಗ್ಗೆ ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ: Tumakuru: ಆತ್ಮಹತ್ಯೆಗೆ ಶರಣಾದ ಶಂಕರಣ್ಣನ ಪತ್ನಿ ಮೇಘನಾ ಗರ್ಭಿಣಿ
ಇತ್ತ ಮುನಿಕೃಷ್ಣನ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮದುವೆ ನಡೆಯಬೇಕಿದ್ದ ಸ್ಥಳ ಸ್ಮಶಾನದಂತಾಗಿದೆ. ಮಗನ ಮದುವೆ ಅಂತ ಕನಸು ಕಂಡಿದ್ದ ಹೆತ್ತವರು, ಕುಟುಂಬಸ್ಥರು, ಸ್ನೇಹಿತರೆಲ್ಲ ಕಣ್ಣೀರು ಹಾಕುತ್ತಿದ್ದಾರೆ. ಮುನಿಕೃಷ್ಣ ಸಾವಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ