Fraud Case: ಬ್ಯುಸಿನೆಸ್‌ ಹೆಸರಲ್ಲಿ 60 ಲಕ್ಷ ಪಡೆದ, ಜನರಿಗೆ ಬಿಸ್ಕೆಟ್ ತಿನ್ನಿಸಿ ಎಸ್ಕೇಪ್ ಆದ! ಮೋಸಗಾರ ಸಿಕ್ಕಿಬಿದ್ದಿದ್ದು ಹೇಗೆ?

ಈ ಪರ್ಫೆಕ್ಟ್ ಹ್ಯಾಂಡ್ಸಮ್ ಹುಡುಗ ಮೋಸ ಮಾಡಿರೋದು ಲಕ್ಷಗಟ್ಟಲೆ ಹಣವನ್ನು. ಬಿಸಿನೆಸ್ ಮಾಡ್ತೀನಿ ಅಂತಿದ್ದವ ಒಂದೆರಡಲ್ಲ ಬರೋಬ್ಬರಿ 60 ಲಕ್ಷ ಪಡೆದುಕೊಂಡು ಎಸ್ಕೇಪ್ ಆಗಿದ್ದ.

ಆರೋಪಿ ಮನೋಜ್

ಆರೋಪಿ ಮನೋಜ್

  • Share this:
ಬೆಂಗಳೂರು: “ಮುಖ (Face) ನೋಡಿ ಮಣೆ ಹಾಕಬಾರದು” ಅನ್ನೋ‌ ಮಾತಿದೆ. ಅಂದ್ರೆ ನಾವು ಯಾರನ್ನು ಮುಖ‌ ನೋಡಿ, ಅವರು ಕೆಟ್ಟವರಾ ಅಥವಾ ಒಳ್ಳೆಯವರಾ ಎನ್ನುವುದನ್ನು ನಿರ್ಧರಿಸಬಾರದು (Decide) ಅಂತ. ಅವರು ಒಳ್ಳೆಯವರಾಗಿರಬಹುದು ಅಥವಾ ಕೆಟ್ಟವರೇ ಆಗಿರಬಹುದು ಅವರ ಮುಖ ನೋಡಿ ನಿರ್ಧಾರ ಮಾಡಬಾರದು. ಯಾಕಂದ್ರೆ ನಾವು ಒಳ್ಳೆ ಯವರು (good) ಅಂದುಕೊಂಡವರು ಕೆಟ್ಟವರಾಗಿರಬಹುದು. ಅಥವಾ ನಾವು ಕೆಟ್ಟವರು (Bad) ಅಂದುಕೊಂಡವರು ಸಿಕ್ಕಾಪಟ್ಟೆ ಒಳ್ಳೆಯವರೂ ಆಗಿರಬಹುದು. ನಾವು ಯಾಕೆಲ್ಲಾ ಇಷ್ಟೊಂದು ಪೀಠಿಕೆ ಹಾಕ್ತೀದ್ದೀವಿ ಅಂದ್ರೆ ಈತ ನೋಡೋದಕ್ಕೆ ಸುರಸುಂದರಾಂಗ. ಎಂತವರಾದ್ರೂ ಒಂದು ಸಾರಿ‌ ನೋಡೋ ಹೈಟ್ (Height), ಹೈಟಿಗೆ ತಕ್ಕಂತೆ ವೈಟ್ (Weight), ಸ್ಟೈಲ್ (Style) ಎಲ್ಲಾ ಒಂಥರಾ ಪರ್ಫೆಕ್ಟ್ (Perfect) ಹ್ಯಾಂಡ್ ಸಮ್ ಹುಡುಗ (Handsome Boy).. ಹುಡುಗಿಯರೂ ಈತನಿಗೆ ಕ್ಲೀನ್ ಬೋಲ್ಡ್.. ಅದೂ ಇಂಜಿನಿಯರ್ (Engineer) ಬೇರೆ. ಇಷ್ಟೆಲ್ಲಾ ಕ್ವಾಲಿಫಿಕೇಷನ್ (Qualification) ಹೊಂದಿರೋನು ಮಾಡಿರೋ‌ ಕೆಲಸ ಕೇಳಿದ್ರೆ ಮಾತ್ರ ನಾವು ಮೇಲೆ ಹೇಳಿರೋ ಎಲ್ಲಾ ಮಾತು ಸರಿ ಅಂತ ನಿಮಗೆ ಅನಿಸದೇ ಇರಲ್ಲ.

ಹಾಗಂತ ಒಂದು ಸಾರಿ ಇವನೇನಾ ಈ ಕೆಲಸ ಮಾಡಿರೋದು ಅಂತ ಮತ್ತೊಂದು ಸಾರಿ ನೀವು ಅಂದುಕೊಳ್ಳಲೂಬಹುದು ಆದ್ರೂ ನಾವು ಹೇಳ್ತಿರೋದು ಪಕ್ಕಾ ಸ್ಟೋರಿನೇ.. ಈತನಿಗೆ ಈತನ ರೂಪನೇ ಬಂಡವಾಳ.. ಮಾತುಗಳೇ ಅಸ್ತ್ರ. ಈ ಎರಡನ್ನು ಸರಿಯಾಗಿನೇ ಬಳಸಿಕೊಂಡಿದ್ದಾನೆ. ತನ್ನ ನಯವಿನಯವಾದ ಮಾತು, ನಡವಳಿಕೆ‌ ಎಲ್ಲಾ ಫಸ್ಟ್ ಕ್ಲಾಸ್. ಎಲ್ಲಾ  ನೋಡಿದ್ರೆ ಎಲ್ಲರೂ ಒಂದು ಸಾರಿ ಮರುಳು ಆಗದೇ ಇರೋರಿಲ್ಲ.. ಹಾಗೇ ಎಲ್ಲರೂ ಕ್ಲೀನ್ ಬೋಲ್ಡ್ ಆಗಿ ಕಳೆದುಕೊಂಡಿದ್ದು ಒಂದೆರಡಲ್ಲ ಬರೋಬ್ಬರಿ 60 ಲಕ್ಷ..

ಇದನ್ನೂ ಓದಿ: Target Bengaluru: 'ಉಗ್ರರ ರಾಜಧಾನಿ' ಆಗಲಿದೆಯಾ ಬೆಂಗಳೂರು? NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ

60 ಲಕ್ಷ ಪಡೆದು ಎಸ್ಕೇಪ್ ಆದ ಖದೀಮ

ಹೌದು ಈ ಪರ್ಫೆಕ್ಟ್ ಹ್ಯಾಂಡ್ಸಮ್ ಹುಡುಗ ಮೋಸ ಮಾಡಿರೋದು ಲಕ್ಷಗಟ್ಟಲೆ ಹಣವನ್ನು. ಬಿಸಿನೆಸ್ ಮಾಡ್ತೀನಿ ಅಂತಿದ್ದವ ಒಂದೆರಡಲ್ಲ ಬರೋಬ್ಬರಿ 60 ಲಕ್ಷ ಪಡೆದುಕೊಂಡು ಎಸ್ಕೇಪ್ ಆಗಿದ್ದಾನೆ. ಮಾಡಿದ್ದುಣ್ಣೋ ಮಾರಾಯ ಅನ್ನೋ ತರ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಂದ ಹಾಗೆ ಈ ಸುಂದರನ ಹೆಸರು ಮನೋಜ್..

ಬೆಂಗಳೂರಿನ ನಂಜಾಂಬ ಅಗ್ರಹಾರ ಬಡಾವಣೆ ನಿವಾಸಿ. ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ. ಅಲ್ಲದೆ ಸೈಡ್ ಬಿಸಿನೆಸ್ ಆಗಿ ಬಿಸ್ಕೆಟ್ ಬಿಸಿನೆಸ್ ಕೂಡಾ ಆರಂಭಿಸಿದ್ದ ಮನೋಜ್. ಆದ್ರೆ ಬಂಡವಾಳದ ಕೊರತೆಯಿತ್ತು.. ಆದ್ರೆ ಹೇಗಾದ್ರು ಮಾಡಿ ಬಿಜಿನೆಸ್ ಮಾಡಬೇಕಲ್ಲ‌‌ ಅಂದುಕೊಂಡಿದ್ದವ ಪರಿಚಯಸ್ಥರು, ಅಕ್ಕಪಕ್ಕದವರಿಂದ ಲಕ್ಷಾಂತರ ಹಣ ಪಡೆದುಕೊಂಡಿದ್ದ.

ಕೊಟ್ಟ ಹಣ ವಾಪಸ್ ಕೇಳಿದ್ರೆ ಧಮ್ಕಿ ಹಾಕ್ತಾನೆ

ಇವನು ಇರೋ ಸ್ಟೈಲ್‌ಗೆ, ಮಾತಿಗೆ ಕೆಲಸ ನೋಡಿ ನಂಬಿ ಎಲ್ಲರೂ ಲಕ್ಷಾಂತರ ರೂಪಾಯಿ ನೀಡಿದ್ರು. ಹಣ ಪಡೆದುಕೊಂಡ ಮೇಲೆನೆ ಈತನ ಅಸಲಿಯತ್ತು ಬಯಲಾಗಿದ್ದು. ಹಣ ವಾಪಾಸು ಕೇಳೋಕೆ ಹೋದ್ರೆ ಎಲ್ಲರಿಗೂ ಧಮ್ಕಿ ಹಾಕ್ತಿದ್ದ.ಅಷ್ಟೇ ಅಲ್ಲ ಆಗಸ್ಟ್ ನಲ್ಲಿ ಮನೆಯಿಂದ‌ ಎಸ್ಕೇಪ್ ಕೂಡಾ ಆಗಿದ್ದ.

ಇದನ್ನೂ ಓದಿ: BMTC ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ಮೇಲೆ ಯಾವ ದಿನಾಂಕಕ್ಕೆ ಬೇಕಿದ್ರೂ ಪಾಸ್ ಕೊಳ್ಳಬಹುದು!

ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದವ ಅರೆಸ್ಟ್

ಎಲ್ಲರ ಹಣ ಪಡೆದುಕೊಂಡಾತ ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದ. ತಿರುಪತಿ ಸೇರಿದಂತೆ ಚಿತ್ತೂರು ಅದರ ಸುತ್ತಮುತ್ತ ಓಡಾಡಿಕೊಂಡಿದ್ದ. 9 ತಿಂಗಳಿನಿಂದ ಆರಾಮವಾಗಿ ಸುತ್ತಾಡಿಕೊಂಡಿದ್ದಾತನ ಖಚಿತ ಮಾಹಿತಿ ಪಡೆದಿದ್ದ ಕೆಂಪೇಗೌಡ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಮಾಡಿದುಣ್ಣೋ‌ ಮಾರಾಯ ಅನ್ನೋ ತರಹ ಮಾಡಿದ ತಪ್ಪಿಗೆ ಜೈಲು‌ ಪಾಲಾಗಿದ್ದಾನೆ.
Published by:Annappa Achari
First published: