• Home
  • »
  • News
  • »
  • state
  • »
  • Suicide: ವೀಕೆಂಡ್‌ ಶಾಪಿಂಗ್ ಬಂದಿದ್ದಾಗ ದುರಂತ! ಕಟ್ಟಡದಿಂದ ಬಿದ್ದು ಯುವತಿ ಸಾವು, ಯುವಕನ ಸ್ಥಿತಿ ಗಂಭೀರ

Suicide: ವೀಕೆಂಡ್‌ ಶಾಪಿಂಗ್ ಬಂದಿದ್ದಾಗ ದುರಂತ! ಕಟ್ಟಡದಿಂದ ಬಿದ್ದು ಯುವತಿ ಸಾವು, ಯುವಕನ ಸ್ಥಿತಿ ಗಂಭೀರ

ಯುವಕ, ಯುವತಿ ಬಿದ್ದ ಸ್ಥಳ

ಯುವಕ, ಯುವತಿ ಬಿದ್ದ ಸ್ಥಳ

ಯುವತಿ ಮೇಲಿನಿಂದ ಕೆಳಕ್ಕೆ ಜಿಗಿಯುತ್ತಿದ್ದಂತೆ ತಲೆಗೆ ಗಂಭೀರವಾಗಿ ಗಾಯವಾಗಿದೆ. ಕೂಡಲೇ ಆಕೆಯನ್ನು ನಿಮ್ಹಾನ್ಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ. ಇನ್ನು ಗಾಯಾಳು ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಘೋರ ಘಟನೆಯೊಂದು ನಡೆದು ಹೋಗಿದೆ. ನಗರದ ಬ್ರಿಗೇಡ್ ರಸ್ತೆಯಲ್ಲಿರುವಂತ (Brigade Road) ಶಾಪಿಂಗ್ ಕಾಂಪ್ಲೆಕ್ಸ್  (Shopping Complex) ಒಂದಕ್ಕೆ ಶಾಪಿಂಗ್ ಗಾಗಿ ಬಂದಿದ್ದಂತ ಯುವಕ (Boy) ಹಾಗೂ ಯುವತಿ (Girl), ಶಾಪಿಂಗ್ ಕಾಂಪ್ಲೆಕ್ ಕಟ್ಟಡ ಮೇಲಿನಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ (Suicide) ಯತ್ನಿಸಿರೋ ಘಟನೆ ನಡೆದಿದೆ. ಕಟ್ಟಡದಿಂದ ಬೀಳುತ್ತಿದ್ದಂತೆ ಯುವತಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಇನ್ನು ಗಾಯಾಳು ಯುವಕನನ್ನು ನಿಮ್ಹಾನ್ಸ್ ಆಸ್ಪತ್ರೆಗೆ (NIMHANS Hospital) ದಾಖಲಿಸಿ, ಚಿಕಿತ್ಸೆ (Treatment) ಕೊಡಿಸಲಾಗುತ್ತಿದೆ. ಘಟನೆಯಿಂದ ಬ್ರಿಗೇಡ್ ರಸ್ತೆಯಲ್ಲಿ ವೀಕೆಂಡ್ ಶಾಪಿಂಗ್‌ಗಾಗಿ (Weekend Shopping) ಬಂದಿದ್ದ ಜನ ಭಯ, ಆತಂಕಕ್ಕೆ ಒಳಗಾಗಿದ್ದರು.


ಶಾಪಿಂಗ್ ಕಾಂಪ್ಲೆಕ್ಸ್‌ನಿಂದ ಜಿಗಿದ ಯುವಕ, ಯುವತಿ


ಬೆಂಗಳೂರಿನ ಪ್ರಸಿದ್ಧ ಬ್ರಿಗೇಡ್ ರಸ್ತೆಯಲ್ಲಿರುವಂತ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಘೋರ ದುರಂತವೊಂದು ನಡೆದಿದೆ. ಶಾಪಿಂಗ್ ಗಾಗಿ ಬಂದಿದ್ದ ಇಬ್ಬರು ಯುವಕ ಹಾಗೂ ಯುವತಿ ಬಿಲ್ಡಿಂಗ್ ಮೇಲಿನಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ರಿಗೇಡ್ ರಸ್ತೆಯ ಪಾರ್ಕ್ 5 ಅವೆನ್ಯೂ ಕಾಂಪ್ಲೆಕ್ಸ್‌ನಲ್ಲಿ ಘಟನೆ ನಡೆದಿದೆ.


ಸ್ನೇಹಿತರ ಜೊತೆ ಶಾಪಿಂಗ್‌ಗೆ ಬಂದಿದ್ದ ಯುವಕ, ಯುವತಿ


ಯುವಕ, ಯುವತಿ ಇಬ್ಬರೂ ತಮ್ಮ ಸ್ನೇಹಿತರ ಜೊತೆ ಶಾಪಿಂಗ್‌ಗಾಗಿ ಬ್ರಿಗೇಡ್‌ ರಸ್ತೆಯ ಪಾರ್ಕ್ 5 ಅವೆನ್ಯೂ ಕಾಂಪ್ಲೆಕ್ಸ್‌ಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಏಕಾಏಕಿ ಇಬ್ಬರೂ ಮೇಲಿನಿಂದ ಕೆಳಕ್ಕೆ ಜಿಗಿದಿದ್ದಾರೆ. ಯುವಕ, ಯುವತಿ ಇಬ್ಬರೂ ನಗರದ ಖಾಸಗಿ ಕಾಲೇಜ್‌ನಲ್ಲಿ ಓದುತ್ತಿದ್ದರು ಎನ್ನಲಾಗಿದೆ. ಅವರಿಬ್ಬರ ಹೆಸರು ಕ್ರಿಸ್ ಮತ್ತು ಲಿಯಾ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಬ್ಬರೂ ಬಿಕಾಂ ಓದುತ್ತಿದ್ದು, ಆತ ಆಂಧ್ರ ಮೂಲದವನಾಗಿದ್ದರೆ, ಈಕೆ ಬೆಂಗಳೂರು ಮೂಲದವಳು ಎನ್ನಲಾಗಿದೆ .


ಇದನ್ನೂ ಓದಿ: Dharwad Accident: ಅಪಘಾತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆ, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ!


ಯುವತಿ ಸಾವು, ಯುವಕನ ಸ್ಥಿತಿ ಗಂಭೀರ


ಯುವತಿ ಮೇಲಿನಿಂದ ಕೆಳಕ್ಕೆ ಜಿಗಿಯುತ್ತಿದ್ದಂತೆ ತಲೆಗೆ ಗಂಭೀರವಾಗಿ ಗಾಯವಾಗಿದೆ. ಕೂಡಲೇ ಆಕೆಯನ್ನು ನಿಮ್ಹಾನ್ಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ. ಇನ್ನು ಗಾಯಾಳು ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.


ಈ ಬಗ್ಗೆ ಪೊಲೀಸರು ಹೇಳಿದ್ದೇನು?


ಯುವಕ, ಯುವತಿ ಇಬ್ಬರೂ ಶಾಪಿಂಗ್ ಮಾಡಲು‌ ಪಾರ್ಕ್ 5 ಅವೆನ್ಯೂ ಕಾಂಪ್ಲೆಕ್ಸ್ ಗೆ ಬಂದಿದ್ದರು. ಈ ವೇಳೆ ವಾಶ್ ರೂಂಗೆ ಹೋಗಿ ಬರುವಾಗ ಸ್ಟೇರ್ ಕೇಸ್ ಬಳಿ ವಿಂಡೋ ಓಪನ್ ಇತ್ತು. ಹೀಗಾಗಿ ಇಬ್ಬರು ಕಾಲು ಜಾರಿ ಕೆಳಗೆ ಬಿದ್ದಿರೋ ಹಾಗೆ ಕಾಣ್ತಿದೆ. ಯುವತಿ ತಲೆಗೆ ಪೆಟ್ಟಾಗಿದ್ದು ಸಾವನ್ನಪ್ಪಿದ್ದಾರೆ. ಗಾಯಾಳು ಯುವಕನ ಸ್ಥಿತಿ ಬಹಳ ಗಂಭೀರವಾಗಿ ಇದೆ. ಆತ ಶಾಕ್ ನಲ್ಲಿ ಇದ್ದಾನೆ. ಮುಂದಿನ ತನಿಖೆ ನಡೆಯುತ್ತಾ ಇದೆ ಅಂತ ಕೇಂದ್ರ ವಿಭಾಗ‌ ಪ್ರಭಾರ ಡಿಸಿಪಿ ಶರಣಪ್ಪ ಹೇಳಿದ್ದಾರೆ.


ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ತನಿಖೆ ಆರಂಭ


ಇನ್ನು ಘಟನೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Accident: ಮದುವೆಗೆ ಹೊರಟವರಿಗೆ ಮರದ ರೂಪದಲ್ಲಿ ಕಾದಿತ್ತು ಸಾವು! ಕ್ರೂಸರ್‌ ಡಿಕ್ಕಿಗೆ 7 ಮಂದಿ ಬಲಿ


ಮನೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ


ಅತ್ತ ಕೋಲಾರದಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜಯನಗರ ಬಡಾವಣೆಯಲ್ಲಿ ನಡೆದಿದೆ. ಯಶವಂತ್ (21) ಮೃತ ದುರ್ದೈವಿ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮೊದಲ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಮೃತ ಯಶವಂತ್ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೋಲಾರ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Published by:Annappa Achari
First published: