• Home
  • »
  • News
  • »
  • state
  • »
  • Davanagere: ಬೇರೆ ಯುವತಿ ಜೊತೆ ಮಾತು; ಕೋಪಗೊಂಡ ಸಲಿಂಗಕಾಮಿ ಗೆಳತಿಯಿಂದ ಹಲ್ಲೆ

Davanagere: ಬೇರೆ ಯುವತಿ ಜೊತೆ ಮಾತು; ಕೋಪಗೊಂಡ ಸಲಿಂಗಕಾಮಿ ಗೆಳತಿಯಿಂದ ಹಲ್ಲೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುರುವಾರ ಸಂಜೆ ಕೋಕಿಲಾ ಎಂಬ ಯುವತಿ ಮೇಲೆ ಸುಶೀಲಾ ಎಂಬಾಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಹಲ್ಲೆಗೆ ಸಲಿಂಗ ಕಾಮ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಸ್‍ಪಿ ರಿಷ್ಯಂತ್ ಹೇಳಿದ್ದಾರೆ.

  • News18 Kannada
  • Last Updated :
  • Davanagere (Davangere), India
  • Share this:

ಅವರಿಬ್ಬರು ಬಹು ವರ್ಷಗಳ ಸ್ನೇಹಿತೆಯರು (Friends). ಇಬ್ಬರ ಸ್ನೇಹ ಪ್ರೀತಿಯಾಗಿ (love) ಬದಲಾಗಿತ್ತು. ಆದ್ರೆ ಇತ್ತೀಚೆಗೆ ಒಬ್ಬ ಯುವತಿ ಗೆಳತಿಯಿಂದ ಅಂತರ ಕಾಯ್ದುಕೊಂಡಿದ್ದಳು. ಬೇರೆ ಯುವತಿಯರ ಜೊತೆ ಹೆಚ್ಚು ಮಾತನಾಡುತ್ತಿದ್ದಳು. ಇದರಿಂದ ಕೋಪಗೊಂಡ ಯುವತಿ ಸ್ನೇಹಿತೆಯ ಮನೆಗೆ ನುಗ್ಗಿ ರೇಡಿಯಂ ಕಟರ್​​ನಿಂದ (Radium Cutter) ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸಿದ ಬಳಿಕ ತಾನೂ ಅದೇ ಕಟರ್​​ನಿಂದ ಕೈ ಕುಯ್ದುಕೊಂಡಿದ್ದಾಳೆ. ಸದ್ಯ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು (Doctor) ಮಾಹಿತಿ ನೀಡಿದ್ದಾರೆ. ಈ ಘಟನೆ ದಾವಣಗೆರೆಯ (Davanegere news) ಶಾಂತಿನಗರದಲ್ಲಿ ನಡೆದಿದೆ.


ಕೋಕಿಲಾ ಮತ್ತು ಸುಶೀಲಾ (ಹೆಸರು ಬದಲಾಯಿಸಲಾಗಿದೆ) ದಾವಣಗೆರೆಯ ಪದವಿ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರಿಗೂ ಬಹಳ ವರ್ಷದ ಸ್ನೇಹ. ಈ ಸ್ನೇಹ ಇತ್ತೀಚೆಗೆ ಸಲಿಂಗಕಾಮಕ್ಕೆ ತಿರುಗಿತ್ತು. ಕೋಕಿಲಾ ಬೇರೆ ಯುವತಿಯ ಜೊತೆ ಮಾತನಾಡಿದ್ದಕ್ಕೆ ಸುಶೀಲಾ ರೇಡಿಯಂ ಕಟರ್​ನಿಂದ ಹಲ್ಲೆ ನಡೆಸಿದ್ದಾಳೆ.


ಸುಶೀಲಾ ಮನೆಗೆ ನುಗ್ಗಿ ಹಲ್ಲೆ


ಗುರುವಾರ ಸುಶೀಲಾ ಮನೆಗೆ ನುಗ್ಗಿದ ಕೋಕಿಲಾ ರೇಡಿಯಂ ಕಟರ್​ನಿಂದ ಮನಬಂದಂತೆ ಕುತ್ತಿಗೆ, ಕೆನ್ನೆ ಹಾಗೂ ಕೈಗೆ ಕುಯ್ದಿದ್ದಾಳೆ. ನಂತರ ತಾನು ಸಹ ಕೈ ಕುಯ್ದುಕೊಂಡಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಸುಶೀಲಾ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕಾಗಮಿಸಿದ ಪೊಲೀಸರು ವೈದ್ಯರು ಮತ್ತು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


young girl attack on her female friend in davanagere
ಸಾಂದರ್ಭಿಕ ಚಿತ್ರ


ಹಲ್ಲೆ ಸಂಬಂಧ ಎಸ್​ಪಿ ಹೇಳಿಕೆ


ಗುರುವಾರ ಸಂಜೆ ಕೋಕಿಲಾ ಎಂಬ ಯುವತಿ ಮೇಲೆ ಸುಶೀಲಾ ಎಂಬಾಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಹಲ್ಲೆಗೆ ಸಲಿಂಗ ಕಾಮ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಸ್‍ಪಿ ರಿಷ್ಯಂತ್ ಹೇಳಿದ್ದಾರೆ.


ಆತ್ಮಹತ್ಯೆಗೆ ಶರಣಾದ 14ರ ಪೋರ


ಶಾಲೆಗೆ (School) ಚಕ್ಕರ್ ಹಾಕಿದ್ದಕ್ಕೆ ತಾಯಿ (mother) ಬೈದು, ಒಂದೆರಡು ಏಟು ಕೊಟ್ಟಿದ್ದಕ್ಕೆ 14 ವರ್ಷದ ಬಾಲಕನೋರ್ವ (Boy Death) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೃಥ್ವಿರಾಜ್ ನೇಣಿಗೆ ಕೊರಳೊಡ್ಡಿದ ಬಾಲಕ.


ಇದನ್ನೂ ಓದಿ:  HD Devegowda: ಅವರ ಬಗ್ಗೆ ಕೊಂಕು ಮಾತಾಡಿದ್ರೆ ಸಹಿಸಲ್ಲ; ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

 ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ (Kadabagere) ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಪೃಥ್ವಿರಾಜ್ ಶಾಲೆಗೆ ಗೈರಾಗುತ್ತಿದ್ದನು. ಕಡಬಗೆರೆ ನಿವಾಸಿ ವಿಜಯ್ ಕುಮಾರ್ ಮತ್ತು ಸವಿತಾ ದಂಪತಿಯ ಮಗ. ಈ ಹಿನ್ನೆಲೆ ತಾಯಿ ಸವಿತಾ ಬೈದು, ಒಂದೆರಡು ಏಟು ನೀಡಿ ತಿಳಿ ಹೇಳಿದ್ದರು. ಪೃಥ್ವಿರಾಜ್ ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.


ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ


ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು‌ ಪೃಥ್ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಶವ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


ಇದನ್ನೂ ಓದಿ;  Murugha Swamy Case: ಮನೆಗೆ ಹೋದ ಕೇವಲ ಅರ್ಧ ಗಂಟೆಯಲ್ಲಿ ಹಿಂದಿರುಗಿದ ಸಂತ್ರಸ್ತ ಬಾಲಕಿ


ಟಂಟಂ ವಾಹನ ಪಲ್ಟಿ, ಐವರಿಗೆ ಗಾಯ


ಕೊಪ್ಪಳದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟಂಟಂ ಪಲ್ಟಿ ಹೊಡೆದು, ಐವರು ಗಾಯಗೊಂಡಿದ್ದಾರೆ. ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಘಟನೆ ನಡೆದಿದೆ.




young girl attack on her female friend in davanagere
ಸಾಂದರ್ಭಿಕ ಚಿತ್ರ


 



ಗ್ರಾಮದ ಹೊರ ವಲಯದ ಕೊರವಮ್ಮನ ಹಳ್ಳದ ಹತ್ತಿರ ಟಂಟಂ ಪಲ್ಟಿಯಾಗಿದೆ. ಕೂಲಿ ಕೆಲಸ ಮುಗಿಸಿಕೊಂಡು ಟಂಟಂನಲ್ಲಿ 12 ಜನ ಪ್ರಯಾಣಿಸುತ್ತಿದ್ದರು. ಗಾಯಳುಗಳನ್ನ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ‌ ಮಾಡಲಾಗಿದೆ.

Published by:Mahmadrafik K
First published: