ಮುಂದಿನ ಪೀಳಿಗೆಗೆ ಸ್ಮಾರ್ಟ್ ಸಿಟಿಗಿಂತ ಗ್ರೀನ್ ಸಿಟಿ ಮುಖ್ಯ; ಯುವ ಪರಿಸರ ತಜ್ಞ ಧ್ರುವ ಪಾಟೀಲ

ಜೇನು ನೊಣಗಳು ಸರ್ವನಾಶವಾದರೆ ಜಗತ್ತಿನಲ್ಲಿ ಮನುಷ್ಯ ಕೇವಲ ನಾಲ್ಕು ವರ್ಷ ಮಾತ್ರ ಬದುಕಬಲ್ಲ.  ಆದರೆ, ಬಹುತೇಕ ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ

ಯುವ ಪರಿಸರ ತಜ್ಞ ಧ್ರುವ ಪಾಟೀಲ

ಯುವ ಪರಿಸರ ತಜ್ಞ ಧ್ರುವ ಪಾಟೀಲ

  • Share this:
ವಿಜಯಪುರ (ಮಾ. 17):  ಮುಂದಿನ ಪೀಳಿಗೆಗೆ ಸ್ಮಾರ್ಟ್ ಸಿಟಿಗಿಂತ ಗ್ರೀನ್ ಸಿಟಿ ಮುಖ್ಯವಾಗಿದೆ ಎಂದು ಯುವ ಪರಿಸರ ತಜ್ಞ ಧ್ರುವ ಪಾಟೀಲ ಹೇಳಿದ್ದಾರೆ. ಇಲ್ಲಿನ  ಇಂಟ್ಯಾಕ್, ಬಿ ಎಲ್ ಡಿ ಇ ಸಂಸ್ಥೆ, ಎಸ್‌ ಪಿ ಪಿ ಎ ಮತ್ತು ಕೋಟಿ ವೃಕ್ಷ ಅಭಿಯಾನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಪಾಯದಲ್ಲಿ ಪರಿಸರ ಕುರಿತು 7 ರಿಂದ 9ನೇ ತರಗತಿಯ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪರಿಸರ ಅಪಾಯದಲ್ಲಿದೆ.  ಇಂದಿನ ವಿದ್ಯಾರ್ಥಿಗಳು ಈಗಿನಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಭವಿಷ್ಯದಲ್ಲಿ 50 ವರ್ಷಗಳು ಪರಿಸರಕ್ಕೆ ಪೂರಕವಾಗಿರಲಿವೆ.  ವಿದ್ಯಾರ್ಥಿಗಳಿಂದಲೇ ಸಾಮೂಹಿಕ ವಿಚಾರಗಳು ಹೊರಬಂದಾಗ ಪರಿಸರ ಮತ್ತಷ್ಟು ಸುಂದರವಾಗಿರಲಿದೆ ಎಂದರು. ಪ್ರಾಣಿಗಳ ಸಂರಕ್ಷಣೆ ನನ್ನ ಗುರಿ. ಇಂಟ್ಯಾಕ್ ಸಂಘಟನೆ ಈ ನಿಟ್ಟಿನಲ್ಲಿ ನಾನಾ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ.  ಈ ಸ್ಪರ್ಧೆಗಳಲ್ಲಿ  ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕು.  ಇಲ್ಲಿನ ವಿದ್ಯಾರ್ಥಿಗಳೇ ಪ್ರಥಮ ಸ್ಥಾನ ಪಡೆಯಬೇಕು ಎಂಬುದು ತಮ್ಮ ಬಯಕೆಯಾಗಿದೆ ಎಂದು ತಿಳಿಸಿದರು

10 ವರ್ಷದವನಿದ್ದಾಗ ಪ್ರಾಣಿ, ಪಕ್ಷಿಗಳ ಕಡೆಗೆ ಆಕರ್ಷಿತನಾದೆ.  ಚಿಕ್ಕವನಿದ್ದಾಗ ಗಾಯಗೊಂಡಿದ್ದ ನಾಯಿಯೊಂದಕ್ಕೆ ಚಿಕಿತ್ಸೆ ಕೊಡಿಸಿದೆ.  ಅಂದಿನಿಂದ SPPA ಸಂಘಟನೆ ಆರಂಭಿಸಿದ್ದೇನೆ.  ಈವರೆಗೆ 30 ಸಾವಿರ ನಾಯಿಗಳು, ಮಂಗಗಳು, ದನಗಳನ್ನು ಸಂಘಟನೆಯ ಮೂಲಕ ಸಂರಕ್ಷಿಸಿದ್ದೇವೆ.  30 ಸಾವಿರ ಜನರನ್ನು ಸಂಸ್ಥೆಗೆ ಸೇರಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ಅವಶ್ಯಕತೆ ಇರುತ್ತದೆ.  ಈ ಭಾಗದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಪಕ್ಷಿಗಳಿಗೆ ನೆರವಾಗಲು ಅವಕಾಶವಿದೆ.  ಹೀಗಾಗಿ ತಂತಮ ಮನೆಯ ಮೇಲ್ಛಾವಣಿಯಲ್ಲಿ ನಾನಾ ಪಾತ್ರೆ, ನಿರುಪಯುಕ್ತ ಮತ್ತು ನೀರು ಸಂಗ್ರಹಿಸಲು ಯೋಗ್ಯವಾದ ವಸ್ತುಗಳಲ್ಲಿ ನೀರನ್ನು ಇಟ್ಟರೆ ಪಕ್ಷಿಗಳ ದಾಹ ತೀರಿಸಬಹುದಾಗಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಹೊಸ ಹೊಸ ಆಲೋಚನೆಗಳನ್ನು ರೂಪಿಸಬಹುದು.  ಮಳೆ ನೀರು ಸುಗ್ಗಿಯನ್ನು ಮಾಡುವ ಮೂಲಕ ಭವಿಷ್ಯದಲ್ಲಿ ಜಲಮೂಲವನ್ನು ಸಂರಕ್ಷಿಸಬಹುದು.

ಇದನ್ನು ಓದಿ: ಕೋವಿಡ್​ ಲಸಿಕೆ ಪಡೆದ ಚಂದನವನದ ಹಿರಿಯ ತಾರೆಯರು ಇವರು..!

ಜೇನು ನೊಣಗಳು ಸರ್ವನಾಶವಾದರೆ ಜಗತ್ತಿನಲ್ಲಿ ಮನುಷ್ಯ ಕೇವಲ ನಾಲ್ಕು ವರ್ಷ ಮಾತ್ರ ಬದುಕಬಲ್ಲ.  ಆದರೆ, ಬಹುತೇಕ ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ.  ಜೇನು ನೊಣಗಳು ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.  ಎಲ್ಲ ಜೇನು ಹುಳುಗಳನ್ನು ಮಾನವ ಸಾಯಿಸಿದರೆ ಮುಂದಿನ ನಾಲ್ಕು ವರ್ಷಗಳಲ್ಲಿ ಯಾವುದೇ ಗಿಡಗಳು ಇರುವುದಿಲ್ಲ.  ಮನುಷ್ಯ ಬದುಕುವುದೇ ನಾಲ್ಕು ವರ್ಷ.  ಜೇನು ಹುಳುಗಳು ಪರಾಗ ಸ್ಪರ್ಶ ಮಾಡುವುದರಿಂದಲೇ ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ.  ಆಮ್ಲಜನಕ ಉತ್ದಾನೆಯಾಗುತ್ತದೆ.  ಜೇನು ಹುಳುಗಳು ನಾಶವಾದರೆ ಮನಷ್ಯನಿಗೆ ಬದುಕಲು ಆಮ್ಲಜನಕವೇ ಇರುವುದಿಲ್ಲ.  ಗಿಡಮರಗಳ ಉಳಿವಿಗೆ, ಬೆಳೆಯುವುದಕ್ಕೆ ಕಾರಣವಾಗಿವೆ ಎಂದು ಕುತೂಹಲಕಾರಿ ಸಂಗತಿಗಳನ್ನು ಅವರು ಬಹಿರಂಗ ಪಡಿಸಿದರು.

ಪರಿಸರ ಉಳಿಸಲು ಬೇಕಾದ ಯೋಜನೆ ರೂಪಿಸಿ.  ಮಳೆ ನೀರು ಸುಗ್ಗಿಯನ್ನೂ ಮಾಡಬಹುದು.  ಮಳೆ ನೀರು ಕೋಯ್ಲಿನ ಬಗ್ಗೆಯೂ ಅರಿವು ಮೂಡಿಸಿದರು.  ಪಕ್ಷಿಗಳು ಬೇಸಿಗೆಯಲ್ಲಿ ನೀರಿಲ್ಲದೆ ಸಂಕಟ ಪಡುತ್ತವೆ ಎಂದರು

ಈ ಸಂದರ್ಭದಲ್ಲಿ ಮಾತನಾಡಿದ ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಪ್ರೊ. ಮುರುಗೇಶ ಪಟ್ಟಣಶೆಟ್ಟಿ, ವನ್ಯಜೀವಿಗಳ ಸಮತೋಲಿತ ಸಂರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ.  ಇಲ್ಲದಿದ್ದರೆ ಪರಿಸರ ಅಸಮತೋಲನದಿಂದ ಕೂಡಿ ಮನುಕುಲಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಇಂಟ್ಯಾಕ ಕರ್ನಾಟಕ ಮುಕ್ಯಸ್ಥ ಮತ್ತು ಹಿರಿಯ ಸಾರಿತಿ ಕೃಷ್ಣ ಕೊಲ್ಹಾರ ಕುಲಕರ್ಣಿ, ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಮುಖ್ಯಸ್ಥರಾದ ಮಧಭಾವಿ, ಐಹೊಳ್ಳಿ, ಸಂಜಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
Published by:Seema R
First published: