ಡಿಕೆಶಿಗೆ 8 ಕೋಟಿ ಲೆಕ್ಕ ಕೇಳ್ತೀರಿ; ಕಾಳು ಮೆಣಸು ಆಮದಿನಲ್ಲಿ ನಡೆಯುತ್ತಿರುವ ಹವಾಲ ದಂಧೆ ಬಗ್ಗೆ ಕಣ್ಮುಚ್ಚಿದ್ದೀರಿ: ಇ.ಡಿ.ಗೆ ಬ್ರಿಜೇಶ್ ಕಾಳಪ್ಪ ಪ್ರಶ್ನೆ

ಕಾಣು ಮೆಣಸಿನ ಆಮದಿನ ಹಿಂದಿನ ಹವಾಲ ದಂಧೆ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಜಾರಿ ನಿರ್ದೇಶಾಲಯವು ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸುತ್ತಾರೆ.

news18-kannada
Updated:September 13, 2019, 4:35 PM IST
ಡಿಕೆಶಿಗೆ 8 ಕೋಟಿ ಲೆಕ್ಕ ಕೇಳ್ತೀರಿ; ಕಾಳು ಮೆಣಸು ಆಮದಿನಲ್ಲಿ ನಡೆಯುತ್ತಿರುವ ಹವಾಲ ದಂಧೆ ಬಗ್ಗೆ ಕಣ್ಮುಚ್ಚಿದ್ದೀರಿ: ಇ.ಡಿ.ಗೆ ಬ್ರಿಜೇಶ್ ಕಾಳಪ್ಪ ಪ್ರಶ್ನೆ
ಬ್ರಿಜೇಶ್ ಕಾಳಪ್ಪ
news18-kannada
Updated: September 13, 2019, 4:35 PM IST
ಬೆಂಗಳೂರು(ಸೆ. 13): ಜನರ ಹಿತಕ್ಕಾಗಿ ಇರಬೇಕಾದ ಜಾರಿ ನಿರ್ದೇಶನಾಲಯ ಸಂಸ್ಥೆಯು ಸರ್ಕಾರದ ಕೈಗೊಂಬೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದರು. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಡಿಕೆಶಿ ಅವರನ್ನು 8 ಕೋಟಿ ಲೆಕ್ಕದ ವಿಚಾರದಲ್ಲಿ ಬಂಧಿಸಿ ಒಳಗೆ ಹಾಕಿದ್ದಾರೆ. ಆದರೆ, ಅನೇಕ ಕಡೆ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆಯುತ್ತಿದ್ದರೂ ಇ.ಡಿ. ಸಂಸ್ಥೆ ಕಣ್ಮುಚ್ಚಿ ಕುಳಿತಿದೆ ಎಂದು ಆಪಾದಿಸಿದರು. ಇದಕ್ಕೆ ಅವರು ವಿಯೆಟ್ನಾಮ್ ದೇಶದಿಂದ ಆಮದಾಗುತ್ತಿರುವ ಕಾಳು ಮೆಣಸಿನ ವ್ಯವಹಾರದ ಹವಾಲ ದಂಧೆಯನ್ನ ಪ್ರಸ್ತಾಪಿಸಿದರು.

ವಿಯೆಟ್ನಾಮ್​ನಿಂದ ಸತತ ಎರಡು ವರ್ಷದಿಂದ ಕಾಳು ಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗೆ ಆಮದಾಗುತ್ತಿರುವ ಕಾಳು ಮೆಣಸು ಕಳಪೆ ಗುಣಮಟ್ಟದ್ದೇ ಅಗಿದೆ. ಆದರೂ ಕೂಡ ಇದನ್ನು ಆಮದು ಮಾಡಿಕೊಳ್ಳುವಾಗ ಓವರ್ ಇನ್​ವಾಯ್ಸ್ ಮಾಡಲಾಗುತ್ತಿದೆ. ನಕಲಿ ಬಿಲ್​ಗಳನ್ನು ಸೃಷಷ್ಟಿಸಲಾಗುತ್ತಿದೆ. ಹೆಚ್ಚಿನ ದರಕ್ಕೆ ತಂದು ಭಾರತದಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ 5 ಸಾವಿರ ಕೋಟಿ ರೂ ಹವಾಲ ದಂಧೆ ಇದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.

ಇದನ್ನೂ ಓದಿ: ಹೇಳಿದ ಕೆಲಸ ಮಾಡಿಕೊಡುತ್ತಿಲ್ಲ; ಕೋರ್ಟ್​ನಲ್ಲೂ ಇತ್ಯರ್ಥವಾಗುತ್ತಿಲ್ಲ: ಸಿಎಂ ಬಗ್ಗೆ ಅಸಮಾಧಾನಗೊಂಡಿರುವ ಅನರ್ಹ ಶಾಸಕರಿಂದ ಸಭೆ

ಕಾಳು ಮೆಣಸು ಆಮದಿನ ಅವ್ಯವಹಾರದ ಬಗ್ಗೆ ಭಾರತದ ಕಾಳು ಮೆಣಸು ಬೆಳೆಗಾರರು ಜಾರಿ ನಿರ್ದೇಶನಾಲಯಕ್ಕೆ ಹಲವು ಬಾರಿ ದೂರು ನೀಡಿದ್ದಾರೆ. ಆದರೂ ಕೂಡ ಇಡಿಯಿಂದ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರರು ಹೇಳಿದರು.

ಪಕ್ಷಾತೀತವಾಗಿ ಕೆಲಸ ಮಾಡುವುದನ್ನು ಬಿಟ್ಟು ಇಡಿ ಸಂಸ್ಥೆಯು ರಾಜಕೀಯ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇಡಿ ಈಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಅದು ಕೇವಲ ನಾಲ್ಕೈದು ಜನರ ಬೆನ್ನುಬಿದ್ದಿದೆ ಎಂದು ಬ್ರಿಜೇಶ್ ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...