ಬಾಗಲಕೋಟೆ: ಬಸವರಾಜ್ ಬೊಮ್ಮಾಯಿ (CM Basavaraj Bommai) ವೀಕ್ ಲೀಡರ್ಎಂದು ಪದೇ ಪದೇ ಹೇಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನಂತಹ (Former CM Siddaramaiah) ದ್ರೋಹಿಯನ್ನು ಹಿಂದೆ ನೋಡಿಲ್ಲ, ಮುಂದೆಯೂ ನೋಡಲ್ಲ. ಸಿದ್ದರಾಮಯ್ಯ ಜಾತಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನೀನು ಎಲ್ಲ ಜನಾಂಗದ ನಾಯಕನಾಗಲು ಆಗಲ್ಲ. ಕುರುಬರ (Kuruba Community) ನಾಯಕನೂ ಆಗುವುಲ್ಲ. ನಿಮಗೆ ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ಗೊತ್ತಿಲ್ಲ. ನಿಮ್ಮ ಕ್ಷೇತ್ರವೇ ಗೊತ್ತಿಲ್ಲ. ನೀವೇ ವೀಕ್ ಲೀಡರ್ ಎಂದು ಟಕ್ಕರ್ ನೀಡಿದ್ದಾರೆ.
ಸಿದ್ದರಾಮಯ್ಯ ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು?
ಬಸವರಾಜ್ ಬೊಮ್ಮಾಯಿ ವೀಕ್ ಲೀಡರ್ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಸೋತಿದ್ದು. ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು? ಅವರು ಸ್ಟ್ರಾಂಗ್ ಸಿಎಂ ಆಗಿದ್ದರೆ, ಕಾಂಗ್ರೆಸ್ ಯಾಕೆ ಸೋಲುತ್ತಿತ್ತು? ಯಾವಾಗಲೂ ನೀನು ವೀಕ್ ಅಂತ ಹೇಳುವವರು ಯಾರು? ಯಾರೂ ತಾನು ವೀಕ್ ಇರುತ್ತಾರೋ ಅವರೇ. ಬೊಮ್ಮಾಯಿ ವೀಕ್ ಅಂತ ಹೇಳಿ ಇವರು ಸ್ಟ್ರಾಂಗ್ ಅಂತಿದ್ದಾರೆ ಇರಲಿ. ನೀನು(ಸಿದ್ದರಾಮಯ್ಯ) ಬಹಳ ಸ್ಟ್ರಾಂಗ್ ಆಗಿದ್ದೀಯಾ ಬಿಡಪ್ಪ ಎಂದು ಟಾಂಗ್ ನೀಡಿದರು.
ನಿಮಗೆ ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ಗೊತ್ತಿಲ್ಲ
ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ನೀವು ಹೇಳುತ್ತಿಲ್ಲ. ಒಂದು ಸಾರಿ ಬಾದಾಮಿ, ಒಂದು ಸಾರಿ ಕೊಪ್ಪಳ, ಇನ್ನೊಂದು ಸಾರಿ ಕೋಲಾರ, ಈಗ ವರುಣಾ ಅಂತಿದ್ದೀರಾ. ನಿಮಗೆ ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ಗೊತ್ತಿಲ್ಲ. ನಿಮ್ಮ ಕ್ಷೇತ್ರವೇ ಗೊತ್ತಿಲ್ಲ. ಬಿಜೆಪಿಯಲ್ಲಿ ಅಭಿವೃದ್ಧಿ ನೋಡಿ ನೀವೇ ನಿಲ್ಲಿ ಎನ್ನುವ ಪರಿಸ್ಥಿತಿ ಇದೆ. ಕ್ಯಾಪ್ಟನ್ ಗೆ ಪ್ಲೇಸ್ ಇಲ್ಲ, ಇನ್ನೂ ಪಾಪ ಫಾಲೋವರ್ಸ್ ಗತಿಯೇನು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಆಡುವ ಆಟ ಬಿಜೆಪಿ ಮೇಲೆ ಅಲ್ಲ. ಅವರ ಆಟ ಬಿಜೆಪಿ ಮೇಲೆ ನಡೆಯಲ್ಲ. ರಾಜ್ಯದ ಜನರ ಮೇಲೂ ನಡೆಯಲ್ಲ, ಕಾಂಗ್ರೆಸ್ ನಲ್ಲಿ ಮಾತ್ರ ನಡೆಯುತ್ತದೆ. ಬಿಜೆಪಿ, ಕೆಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆದರು. ಈಗ ಬಿಜೆಪಿ ಒಡೆಯಲು ಆಗುತ್ತಿಲ್ಲ. ಹೀಗಾಗಿ ಬೊಮ್ಮಾಯಿ ನಾಯಕತ್ವ ಸರಿಯಿಲ್ಲ ಅಂತಿದ್ದಾರೆ ಎಂದು ಕಿಡಿಕಾರಿದರು.
ನೀವು ಕುರುಬರ ನಾಯಕನೂ ಆಗುವುಲ್ಲ
ಸಿದ್ದರಾಮಯ್ಯ ಜಾತಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕುರುಬರ, ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ ನಾನು ಅಂತಿದ್ದಾರೆ. ನಾನು ಎಲ್ಲ ಜನಾಂಗದ ನಾಯಕ ಅಂತ ಬಾಯಿ ಮಾತಿಗಾದರೂ ಹೇಳುತ್ತಿದ್ದಾರಾ? ನೀನು ಎಲ್ಲ ಜನಾಂಗದ ನಾಯಕನಾಗಲು ಆಗಲ್ಲ. ಕುರುಬರ ನಾಯಕನೂ ಆಗುವುಲ್ಲ ಎಂದು ತಿರುಗೇಟು ನೀಡಿದರು.
ಇಡೀ ರಾಜ್ಯದ ತುಂಬ ಅಭಿವೃದ್ಧಿ ಮತ್ತು ಕಟೀಲ್ ನೇತೃತ್ವದಲ್ಲಿ ಸಂಘಟನೆ ಆಗುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಇದೆ.
ಕರ್ನಾಟಕದ ರಾಜಕಾರಣದಲ್ಲಿ ಇಂಥ ದ್ರೋಹಿ ಯಾರೂ ನೋಡಿಲ್ಲ
ನೇತೃತ್ವ, ಅಭಿವೃದ್ದಿ, ಸಂಘಟನೆ ಮೇಲೆ ಬಿಜೆಪಿಯವರು ಗೆಲ್ಲುತ್ತೇವೆ. ಆದರೆ ಕಾಂಗ್ರೆಸ್ ನಲ್ಲಿ ಯಾರ ನೇತೃತ್ವ? ಕ್ಷೇತ್ರ ಗೊತ್ತಿಲ್ಲ, ಜನರು ವೋಟ್ ಕೊಟ್ಟು ಗೆಲ್ಲಿಸಿಲ್ಲ. ಆಗಲೇ ನಾನೇ ಮುಖ್ಯಮಂತ್ರಿ ಅಂತಿದ್ದೀರಾ. ಕರ್ನಾಟಕದ ರಾಜಕಾರಣದಲ್ಲಿ ಇಂಥ ದ್ರೋಹಿ ಯಾರೂ ನೋಡಿಲ್ಲ, ಮುಂದೆ ನೋಡಲ್ಲ ಎಂದು ಹರಿಹಾಯ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ