Mysore: ಮೈಸೂರಿನ ಪ್ರವಾಸಿ ತಾಣಗಳಲ್ಲಿ ಟಿಕೆಟ್ ಪಡೆಯಲು ಇನ್ಮುಂದೆ ಸಾಲಿನಲ್ಲಿ ನಿಲ್ಲಬೇಕಿಲ್ಲ; ಮತ್ತೇನು? ಇದನ್ನೊಮ್ಮೆ ಓದಿ

ವಾರಾಂತ್ಯದಲ್ಲಿ ಮತ್ತು ರಜೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ ಅಂತ ಹೇಳಬಹುದು. ಈ ವರ್ಷದ ದಸರಾ ಹಬ್ಬದಿಂದ ಮೈಸೂರು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ವಿವಿಧ ಪ್ರವಾಸಿ ತಾಣಗಳಲ್ಲಿ ಟಿಕೆಟ್ ಖರೀದಿಸಲು ಉದ್ದನೆಯ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲವಂತೆ.

ಟಿಕೇಟಿಗಾಗಿ ಸಾಲುಗಟ್ಟಿ ನಿಂತಿರುವ ಜನ

ಟಿಕೇಟಿಗಾಗಿ ಸಾಲುಗಟ್ಟಿ ನಿಂತಿರುವ ಜನ

  • Share this:
ನೀವು ಮೈಸೂರಿನಲ್ಲಿ (Mysore) ಇರುವವರಾಗಿದ್ದರೆ, ಪ್ರತಿ ವಾರದ ಅಂತ್ಯದಲ್ಲಿ ಮತ್ತು ಸರ್ಕಾರಿ ರಜೆಯ ದಿನಗಳಲ್ಲಿ (Holiday) ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಸರೋವರ, ಸೇಂಟ್ ಫಿಲೋಮಿನಾ ಚರ್ಚ್, ಲಲಿತ ಮಹಲ್ ಅರಮನೆ, ರೈಲ್ವೆ ಮ್ಯೂಸಿಯಂ ಮತ್ತು ವ್ಯಾಕ್ಸ್ ಮ್ಯೂಸಿಯಂ ಸೇರಿದಂತೆ ಅನೇಕ ಸ್ಥಳಗಳನ್ನು ನೋಡಲು ಜನರು ಬೇರೆ ಬೇರೆ ಕಡೆಗಳಿಂದ ಬಂದು ಟಿಕೆಟ್ (Ticket) ಪಡೆಯಲು ದೊಡ್ಡ ದೊಡ್ಡ ಸರತಿ ಸಾಲುಗಳಲ್ಲಿ ಗಂಟೆ ಗಟ್ಟಲೆ ಕಾಯುತ್ತಾ ನಿಂತಿರುವುದನ್ನು ನೀವು ನೋಡಿಯೇ ಇರುತ್ತಿರಿ. ಈ ದೊಡ್ಡ ಜನರ ಸಾಲುಗಳನ್ನು ನೋಡಿ ‘ಅಬ್ಬಬ್ಬಾ.. ಎಂತಹ ದೊಡ್ಡ ಸಾಲು ಇದೆ’ ಅಂತ ನೀವು ಅಂದು ಕೊಂಡಿರುತ್ತೀರಿ.

ಹೌದು..ಮೈಸೂರು ನಗರವೇ ಹಾಗೆ, ಅಲ್ಲಿ ಅನೇಕ ಪ್ರವಾಸಿ ತಾಣಗಳಿವೆ ಮತ್ತು ಬೆಂಗಳೂರಿನಿಂದ ಕೊಡಗು, ಮಡಿಕೇರಿ ಮತ್ತು ಹತ್ತಿರದ ಪ್ರವಾಸಿ ತಾಣಗಳನ್ನು ನೋಡಲು ಹೋಗುವ ಜನರು ಸಾಮಾನ್ಯವಾಗಿ ಮೈಸೂರಿನಲ್ಲಿರುವ ಮನ ತಣಿಸುವ ಜಾಗಗಳಿಗೆ ಬಂದು ನೋಡಿಯೇ ಹೋಗುತ್ತಾರೆ, ಯಾರೂ ಈ ಸ್ಥಳಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ.

ಇದನ್ನೂ ಓದಿ:  Fake Police: ಪೊಲೀಸ್ ಕೆಲಸ ಕೊಡಿಸೋದಾಗಿ ಬಂದ ಫೇಕ್ ಆಫೀಸರ್; ಯುವಕರಿಗೆ ಹಾಕಿದ ಪಂಗನಾಮ!

ಹಾಗಾಗಿ ವಾರಾಂತ್ಯದಲ್ಲಿ ಮತ್ತು ರಜೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ ಅಂತ ಹೇಳಬಹುದು. ಈ ವರ್ಷದ ದಸರಾ ಹಬ್ಬದಿಂದ ಮೈಸೂರು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ವಿವಿಧ ಪ್ರವಾಸಿ ತಾಣಗಳಲ್ಲಿ ಟಿಕೆಟ್ ಖರೀದಿಸಲು ಉದ್ದನೆಯ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲವಂತೆ.

ಎಲ್ಲಾ ಪ್ರವಾಸಿ ತಾಣಗಳಿಗೆ ಒಂದೇ ಟಿಕೆಟ್


ಮೈಸೂರಿನಲ್ಲಿರುವಂತಹ ಅನೇಕ ಪ್ರವಾಸಿ ತಾಣಗಳಿಗೆ ಒಂದೇ ಟಿಕೆಟ್ ಅನ್ನು ಪರಿಚಯಿಸಲು ಮೈಸೂರು ಜಿಲ್ಲಾಡಳಿತವು ಯೋಜಿಸಿದೆ. ಪ್ರಸ್ತುತ, ಆಯಾ ಪ್ರವಾಸಿ ತಾಣಗಳ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ಗಳನ್ನು ನೀಡಲಾಗುತ್ತದೆ. ನೀವು ಅಲ್ಲಿಗೆ ಬಂದರೆ ಅಲ್ಲಿರುವ ಟಿಕೆಟ್ ಕೌಂಟರ್ ಗಳಲ್ಲಿ ಇರುವ ಸಾಲಿನಲ್ಲಿ ನಿಂತುಕೊಂಡು ಟಿಕೆಟ್ ಪಡೆಯಬೇಕು.

ಪ್ರವಾಸಿಗರ ಸಮಯವನ್ನು ಉಳಿಸಲು ಅಧಿಕಾರಿಗಳು ಒಂದೇ ಟಿಕೆಟ್ ಅನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ. ಈ ಉಪಕ್ರಮವು ಕೆಲವು ವರ್ಷಗಳ ಹಿಂದೆ ಜಾರಿಯಲ್ಲಿತ್ತಂತೆ, ಹೊಸದೇನಲ್ಲ.

2014 ರಲ್ಲಿ, ಅಧಿಕಾರಿಗಳು ಏಕ ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸಿದ್ದರು ಮತ್ತು ಅದಕ್ಕೆ ಅಭೂತ ಪೂರ್ವವಾದ ಪ್ರತಿಕ್ರಿಯೆ ಸಿಕ್ಕಿತ್ತು. ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಧಿಸಲಾದ ಲಾಕ್ಡೌನ್ ನಂತಹ ಕಾರಣಗಳಿಂದಾಗಿ ಅದನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ:  Suicide: ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ ತಾನು ಸೂಸೈಡ್ ಮಾಡಿಕೊಂಡ ತಾಯಿ! ಸಾವಿನ ಹಿಂದೆ ಹಲವು ಅನುಮಾನ

ಈಗ ಮತ್ತೆ ಮೈಸೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಚುರುಕುಗೊಳ್ಳುತ್ತಿರುವುದರಿಂದ, ಅಧಿಕಾರಿಗಳು ಸಿಂಗಲ್ ಟಿಕೆಟ್ ವ್ಯವಸ್ಥೆಯನ್ನು ಮತ್ತೆ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಅಧಿಕಾರಿಗಳು ಹಿಂದಿನ ವ್ಯವಸ್ಥೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಸುಧಾರಿತ ಆವೃತ್ತಿಯನ್ನು ಜಾರಿಗೆ ತರಲಿದ್ದಾರೆ ಎಂದು ಹೇಳಿದರು.

ಪ್ರವಾಸಿಗರ ಬಳಿ ತುಂಬಾನೇ ಕಡಿಮೆ ಸಮಯವಿದ್ದು, ಮೈಸೂರಿನಲ್ಲಿರುವ ಎಲ್ಲಾ ಸ್ಥಳಗಳನ್ನು ನೋಡಿ ಹೋಗಬೇಕು ಅಂತ ಆಸೆಯನ್ನು ಹೊತ್ತಿಕೊಂಡು ಬರುವವರಿಗೆ ಇದು ತುಂಬಾನೇ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು. ಜನ ಪ್ರತಿನಿಧಿಗಳು, ಜಿಲ್ಲಾಡಳಿತವು ಈ ಉಪಕ್ರಮವನ್ನು ಬೇಗನೆ ತೆಗೆದುಕೊಳ್ಳಬೇಕು ಮತ್ತು ಈಗಾಗಲೇ ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಟಿಕೆಟ್ ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಿ

ನಿಯಮಿತವಾಗಿ ನಗರಕ್ಕೆ ಭೇಟಿ ನೀಡುವ ಬೆಂಗಳೂರು ನಿವಾಸಿ ಎಚ್.ಕೆ.ಮನೋಜ್ "ನಾವು ವರ್ಷಕ್ಕೊಮ್ಮೆ ಮೈಸೂರಿಗೆ ಭೇಟಿ ನೀಡುತ್ತೇವೆ. ಚಾಮುಂಡಿ ಬೆಟ್ಟ, ಮೃಗಾಲಯ ಮತ್ತು ಅರಮನೆಗಳು ನಾವು ಭೇಟಿ ನೀಡಲೇಬೇಕಾದ ಸ್ಥಳಗಳಾಗಿವೆ. ನಾವು ಈಗ ಸರದಿಯಲ್ಲಿ ನಿಂತು ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ. ಈ ಟಿಕೆಟ್ ಗಳನ್ನು ಆನ್‌ಲೈನ್ ನಲ್ಲಿಯೂ ಸಹ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಶಿಫಾರಸು ಮಾಡಿದರು.
Published by:Ashwini Prabhu
First published: