Karnataka Politics: ರಾಹುಲ್​ರನ್ನ ಜೈಲಿಗೆ ಹಾಕಲು ಸಾಧ್ಯವಿಲ್ಲ ಎಂದ್ರು ಡಿಕೆಶಿ; ಉಪ್ಪು ತಿಂದವ ನೀರು ಕುಡೀಬೇಕು- C T ರವಿ

ನೀವು ಸೋನಿಯಾ ಹಾಗೂ ರಾಹುಲ್‌ ಗಾಂಧಿಗೆ ಕಿರುಕುಳ ಕೊಡಲು ಹೊರಟಿದ್ದೀರಲ್ವಾ? ಜೈಲಿಗೆ ಹಾಕಲು ಹೊರಟಿದ್ದೀರಲ್ವಾ? ಅದು ನಿಮ್ಮಿಂದ ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ರು.

ಡಿ ಕೆ ಶಿವಕುಮಾರ್​, ಸಿ ಟಿ ರವಿ

ಡಿ ಕೆ ಶಿವಕುಮಾರ್​, ಸಿ ಟಿ ರವಿ

  • Share this:
ಬೆಂಗಳೂರು (ಜೂ 13): ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ (Rahul Gandhi) ಇಡಿ ನೋಟಿಸ್​ ನೀಡಿದ್ದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ರೊಚ್ಚಿಗೆದ್ದಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar)​ ಗುಡುಗಿದ್ದಾರೆ. ಇ.ಡಿ ನೋಟಿಸ್ (E D Notices) ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ‌ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಜೈಲಿಗೆ ಕಳಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗಿದರು. ಪ್ರತಿಭಟನೆ ವೇಳೆ ಮಾತಾಡಿದ ಡಿ.ಕೆ ಶಿವಕುಮಾರ್​, ಇದೊಂದು ಐತಿಹಾಸಿಕ ಹೋರಾಟವಾಗಿದೆ. ನೆಹರೂ, ವಲ್ಲಭಭಾಯಿ ಪಟೇಲ್ ನ್ಯಾಷನಲ್ ಹೆರಾಲ್ಡ್‌ ಪತ್ರಿಕೆ (National Herald Newspaper) ಆರಂಭಿಸಿದರು. ಆ ಪತ್ರಿಕೆ ಸ್ವಾತಂತ್ರ್ಯ ಹೋರಾಟಗಾರರ ಧ್ವನಿಯಾಗಿ ಕೆಲಸ ಮಾಡಿತ್ತು. ಇವಾಗ ಅದರ ಮುಂದಾಳತ್ವವನ್ನು ಗಾಂಧಿ ಕುಟುಂಬ ಹಾಗೂ ಇತರ ಮುಖಂಡರು ವಹಿಸಿದ್ದಾರೆ. ಪತ್ರಿಕೆಗಾಗಿ ಕಾರ್ಯಕರ್ತರು, (Activist) ಶಾಸಕರು ಧನ ಸಹಾಯ ನೀಡಿದ್ದಾರೆ.

90 ಕೋಟಿಯಷ್ಟು ಹಣ ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಗೆ ನೀಡಿದ್ದಾರೆ. ಇವಾಗ ಬಿಜೆಪಿ ಸರ್ಕಾರ ಹಣ ವರ್ಗಾವಣೆ ಆರೋಪದ ಅಡಿಯಲ್ಲಿ ನೋಟಿಸ್ ನೀಡಿದೆ. ಯಾವ ದುಡ್ಡು ವರ್ಗಾವಣೆ ಆಗಿದೆ? ಯಾರಾದರೂ ಲಂಚ ಪಡೆದುಕೊಂಡಿದ್ದಾರಾ? ಯಾರಾದರೂ ತನಿಖಾ ಆಯೋಗಗಳು ಅಕ್ರಮ ಆಗಿದೆ ಎಂದು ತಿಳಿಸಿದ್ದಾರಾ? ಪಕ್ಷದ ಮುಖಂಡರ ದೂರಿನ ಅನ್ವಯ ಇಡಿ ವಿಚಾರಣೆ ನಡೆಸುತ್ತಿದೆ ಎಂದು ಕಿಡಿಕಾರಿದರು.

ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವ್ರು ನಮ್ಮ ನಾಯಕರು

ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಆಗಲು ಅವಕಾಶ ಇದ್ದರೂ ಅದನ್ನು ತ್ಯಾಗ ಮಾಡಿದ್ದವರು. ಪಂಚಾಯತ್ ಸ್ಥಾನನೇ ಯಾರು ಬಿಟ್ಟುಕೊಡಲ್ಲ ಈ‌ ದಿನದಲ್ಲಿ. ರಾಹುಲ್ ಗಾಂಧಿಯೂ ದೇಶಕ್ಕೆ ಪ್ರಧಾನಿ, ಮಂತ್ರಿ ಆಗಬಹುದುದಿತ್ತು. ಆದರೆ ಅವರು ಪಕ್ಷಕ್ಕೆ, ದೇಶಕ್ಕಾಗಿ ತ್ಯಾಗ ಮಾಡಿದರು. ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಡಿಕೆಶಿ ನೆನಪಿಸಿದರು.

ಇದನ್ನೂ ಓದಿ: Congress Protest: ಇಡಿ ಮುಂದೆ ಹಾಜರಾದ ರಾಹುಲ್ ಗಾಂಧಿ; ಇತ್ತ ಕಾಂಗ್ರೆಸ್ ಪ್ರತಿಭಟನೆ

ಸೋನಿಯಾ, ರಾಹುಲ್‌ ಅವರಿಗೆ ಕಿರುಕುಳ ಕೊಡಲು ಹೊರಟಿದ್ದೀರಾ?

ಇವತ್ತು ನೀವು ಸೋನಿಯಾ ಹಾಗೂ ರಾಹುಲ್‌ ಗಾಂಧಿಗೆ ಕಿರುಕುಳ ಕೊಡಲು ಹೊರಟಿದ್ದೀರಲ್ವಾ? ಜೈಲಿಗೆ ಹಾಕಲು ಹೊರಟಿದ್ದೀರಲ್ವಾ? ಅದು ನಿಮ್ಮಿಂದ ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ರು. ದೇಶದ ಸ್ವಾತಂತ್ರ್ಯಕ್ಕೆ ಗಾಂಧಿ ಕುಟುಂಬದವರು ಆಸ್ತಿ ಪಾಸ್ತಿ ನೀಡಿದ್ದಾರೆ. ಹೀಗಿದ್ದಾಗ ಇವಾಗ ಅಕ್ರಮ ಹಣ ವರ್ಗಾವಣೆ ಮಾಡ್ತಾರಾ ಎಂದು ಪ್ರಶ್ನಿಸಿದರು.

ಉಪ್ಪು ತಿಂದವರು ನೀರು ಕುಡೀಬೇಕು

ಕಾಂಗ್ರೆಸ್​ ಪ್ರತಿಭಟನೆ ಬಗ್ಗೆ ಮಾತಾಡಿದ ಸಿ.ಟಿ ರವಿ  ಇವ್ರು ಮೇಲ್ನೋಟಕ್ಕೆ ತಪ್ಪು ಮಾಡಿರೋದು ಗೊತ್ತಾಗಿದೆ. ತಪ್ಪು ಮಾಡಿರೋರು ಶಿಕ್ಷೆ ಅನುಭವಿಸಬೇಕು. ಉಪ್ಪು ತಿಂದವರು ನೀರು ಕುಡೀಬೇಕು. ಇವ್ರು ತನಿಖೆಯಿಂದ ತಪ್ಪಿಸಿಕೊಳ್ಳಲು ಬೀದಿ ನಾಟಕ ಮಾಡ್ತಿದ್ದಾರೆ. ಇವ್ರು ಒಂದು ಕುಟುಂಬದ ಗುಲಾಮರಾಗಿದ್ದಾರೆ. ಹೀಗಾಗಿ ಆ ಕುಟುಂಬವನ್ನು ಬಚಾಚ್ ಮಾಡಲು ಬೀದಿಗೆ ಇಳಿದಿದ್ದಾರೆ ಎಂದು ಕಿಡಿಕಾರಿದ್ರು.

ಇದನ್ನೂ ಓದಿ: BMRCL: ಮೆಟ್ರೋ ನಿಲ್ದಾಣದಲ್ಲೇ ಸಿಗುತ್ತೆ ಪ್ರವಾಸಿ ತಾಣಗಳ ಕಂಪ್ಲೀಟ್ ಮಾಹಿತಿ; ಅದು ಹೇಗೆ ಗೊತ್ತಾ?

ಡಿಕೆಶಿ, ಸಿದ್ದುಗೆ ಸಿ ಟಿ ರವಿ ಗುದ್ದು

ರಾಹುಲ್, ಸೋನಿಯಾ ಕಾನೂನಿಗಂತ ಅತೀಥರಾ ಎಂದು ಕಾಂಗ್ರೆಸ್ ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ವಿರುದ್ದ ಸಿಟಿ ರವಿ ವಾಗ್ದಾಳಿ ನಡೆಸಿದ್ರು. ನೀವು ಸಿವಿಲ್ ಮತ್ತೆ ಕ್ರಿಮಿನಲ್ ಲಾಯರ್ ಎಂದು ಗೊತ್ತಿದೆ. ಆದರೆ ನೀವು ಲಾಯರ್ ಪ್ರಾಕ್ಟೀಸ್ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದ್ಯೋ ಇಲ್ವೋ ಹೇಳಿ ಕ್ರಿಮಿನಲ್ ಹಾಗೂ ಸಿವಿಲ್‌ ಲಾಯರ್ ಸಿದ್ದರಾಮಯ್ಯನವ್ರೇ? ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ. ಹಾಗಲಕಾಯಿಗೆ ಬೇವಿನ ಸಾಕ್ಷಿ ಎಂಬಂತೆ‌, ಭ್ರಷ್ಟಾಚಾರಿಗಳಿಗೆ ಭ್ರಷ್ಟರೇ ಬೆಂಬಲ ಕೊಡ್ತಿದ್ದಾರೆ. ಇವರಿಂದ ಜನರಿಗೆ ಇನ್ನೇನು ಸಂದೇಶ ಹೋಗಲು ಸಾಧ್ಯ, ಪರೋಕ್ಷವಾಗಿ ಡಿಕೆಶಿಗೆ ಸಿಟಿ ರವಿ ಟಾಂಗ್ ಕೊಟ್ರು
Published by:Pavana HS
First published: