ಹಣ ಕೊಟ್ಟರೆ ನಿಮಗೆ ಅನಾಯಾಸವಾಗಿ ಸಿಗುತ್ತೆ ಡಾಕ್ಟರೇಟ್ ಪದವಿ!; ಕರ್ನಾಟಕದಲ್ಲಿ ಹೊಸ ದಂಧೆ

ಈ ದಂಧೆಯ ಹಿಂದೆ ತಮಿಳುನಾಡು ಖಾಸಗಿ ಮೂಲದ ವಿ.ವಿಯ ಪಾತ್ರವಿದೆ. ಹಣ ನೀಡಿದವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಇನ್ನು, ಗೌರವ ಡಾಕ್ಟರೇಟ್ ಕೊಡಿಸುವ ನೆಪದಲ್ಲಿ ಕೆಲ ಮಧ್ಯವರ್ತಿಗಳಿಂದ ಭಾರೀ ವಂಚನೆ ಕೂಡ ನಡೆಯುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು (ಅ.2): ಸಾಧನೆ ಮಾಡಿದವರಿಗೆ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರಿಗೆ ಹೀಗೆ ನಾನಾ ಕಾರಣಗಳಿಗೆ ಗೌರವ ಡಾಕ್ಟರೇಟ್​ ನೀಡಲಾಗುತ್ತದೆ. ಆದರೆ, ಕೆಲ ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್​ಗೆ ಈ ಮೇಲಿನ ಮಾನದಂಡಗಳು ಬೇಕೆಂದೇ ಇಲ್ಲ. ಕೇವಲ ಹಣ ನೀಡಿದರೆ ಸಾಕು. ನಿಮ್ಮ ಮನೆಗೆ ಬಂದು ಗೌರವ ಡಾಕ್ಟರೇಟ್​ ನೀಡಿ ಹೋಗುತ್ತಾರೆ! ಹೀಗೊಂದು ದಂಧೆ ರಾಜ್ಯದಲ್ಲಿ ಬೆಳಕಿಗೆ ಬಂದಿದೆ.

ಈ ದಂಧೆ ನಡೆಯುತ್ತಿರುವುದು ಸಕ್ಕರೆ ನಾಡು ಮಂಡ್ಯದಲ್ಲಿ. ವರ್ಷದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷ ಬರೋಬ್ಬರಿ 350 ಜನರಿಗೆ ಗೌರವ ಡಾಕ್ಟರೇಟ್​ ಪದವಿ ದೊರೆತಿದೆ! ಅದರಲ್ಲಿ ರಾಜಕಾರಣಿಗಳು, ಕಲ್ಲುಗಣಿ-ಪೆಟ್ರೋಲ್ ಬಂಕ್ ಮಾಲೀಕರು, ಗುತ್ತಿಗೆದಾರರು, ಉದ್ಯಮಿಗಳು, ಶಿಕ್ಷಕರು, ಕಲಾವಿದರು, ಪತ್ರಕರ್ತರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದು ಅಚ್ಚರಿಯ ಸಂಗತಿ.

ಈ ದಂಧೆಯ ಹಿಂದೆ ತಮಿಳುನಾಡು ಖಾಸಗಿ ಮೂಲದ ವಿ.ವಿಯ ಪಾತ್ರವಿದೆ. ಹಣ ನೀಡಿದವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಇನ್ನು, ಗೌರವ ಡಾಕ್ಟರೇಟ್ ಕೊಡಿಸುವ ನೆಪದಲ್ಲಿ ಕೆಲ ಮಧ್ಯವರ್ತಿಗಳಿಂದ ಭಾರೀ ವಂಚನೆ ಕೂಡ ನಡೆಯುತ್ತಿದೆ. ಮಂಡ್ಯದ ಖಾಸಗಿ ವಿವಿಯಲ್ಲಿರುವ ಮಧ್ಯವರ್ತಿಗಳು ಗೌರವ ಡಾಕ್ಟರೇಟ್  ಕೊಡಿಸಲು ಸಾವಿರದಿಂದ ಲಕ್ಷ ರೂಪಾಯಿವರೆಗೆ ಕಮಿಷನ್​ ಕೀಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯ ಕೇಳಿ ಬಂದಿದೆ.

(ವರದಿ: ರಾಘವೇಂದ್ರ ಗಂಜಾಮ್​)

ಇದನ್ನೂ ಓದಿ: ಉದ್ಯಮಿ ಸಿದ್ಧಾರ್ಥ್ ಅನುಮಾನಾಸ್ಪದ ಸಾವು ಪ್ರಕರಣ; ಹೆಜ್ಜೆ ಹೆಜ್ಜೆಗೂ ಹೊಸ ಟ್ವಿಸ್ಟ್

First published: