ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ರಾಜಾಹುಲಿ ಘರ್ಜನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಚುನಾವಣಾ (Election) ರಾಜಕೀಯಕ್ಕೆ ವಿದಾಯ ಕೂಡ ಹೇಳಿದ್ದಾರೆ. ಈಗ ಹೈಕಮಾಂಡ್ ಪರ್ಯಾಯವಾಗಿ ಸ್ವಾಮೀಜಿಗಳನ್ನೇ ಎಲೆಕ್ಷನ್ಗೆ ಇಳಿಸುವ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ. ಹೌದು, ಥೇಟ್ ಉತ್ತರಪ್ರದೇಶ (Uttar Pradesh) ಮಾದರಿಯಲ್ಲಿ. ಬಿಜೆಪಿ ಪಾಲಿಗೆ ಬಿರುದಿನಂತೆ ರಾಜಾಹುಲಿಯೇ (Raja Huli) ಆಗಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಅರ್ಧ ಶತಮಾನದ ಹೋರಾಟ, ಘರ್ಜನೆ ವಯಸ್ಸಿನ ಕಾರಣದಿಂದ ಕಡಿಮೆಯಾಗುತ್ತಿದೆ. ಇದು ಬಿಜೆಪಿ ಪಾಲಿಗೆ ರಾಜ್ಯದಲ್ಲಿ ಅತಿದೊಡ್ಡ ಹಿನ್ನಡೆ ಅನ್ನೋದು ಸುಳ್ಳಲ್ಲ. ಬಿಎಸ್ ಯಡಿಯೂರಪ್ಪ ಬೆನ್ನಹಿಂದೆ ಒಂದು ಸಮುದಾಯ ಮಾತ್ರವಲ್ಲ, ಅಭಿಮಾನದ ಸುನಾಮಿಯೇ ಇತ್ತು. ಇದು ಪ್ರತಿ ಎಲೆಕ್ಷನ್‌ನಲ್ಲೂ ಮತ ತಂದುಕೊಡುತಿತ್ತು. ಇನ್ಮುಂದೆ ಈ ಮತಗಳು (Vote) ವಿಭಜನೆ ಮುನ್ಸೂಚನೆ ಸಿಕ್ಕಂತಿದೆ. ಹೀಗಾಗಿಯೇ ಬಿಜೆಪಿ ಹೈಕಮಾಂಡ್ ತಲೆಯಲ್ಲಿ ಹೊಸ ಐಡಿಯಾ ಮೊಳಕೆಯೊಡೆದಿದೆ. ಅದೇ ಉತ್ತರ ಪ್ರದೇಶದ ಮಾಡೆಲ್.
ಬಿಜೆಪಿ ರಾಜ್ಯಾಧ್ಯಕ್ಷರಿಂದ ಮಠದ ಮಂತ್ರ!
2021ರಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದ ಪ್ರಮುಖ ಸ್ವಾಮೀಜಿಯೊಬ್ಬರಿಗೆ ನಾಯಕತ್ವ ನೀಡಲಾಗುತ್ತೆ ಅನ್ನುವ ಗುಸು ಗುಸು ಶುರುವಾಗಿತ್ತು. ಇದೀಗ ಅದರ ಮುಂದುವರಿದ ಭಾಗದ ಚರ್ಚೆ ಎಲ್ಲೆಡೆ ವ್ಯಾಪಿಸಲು ಶುರುವಾಗಿದೆ.
ವೋಟ್‌ಬ್ಯಾಂಕ್‌ಗಾಗಿ ದೊಡ್ಡ ಸಮುದಾಯಗಳ ಮಠಾಧಿಪತಿಗಳನ್ನು ಮುಂಚೂಣಿಯಲ್ಲಿ ಇಟ್ಟುಕೊಳ್ಳಲು ಬಿಜೆಪಿ ಮುಂದಾಗಿದೆ. ಇದರ ಭಾಗವಾಗಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಕೆಲ ತಿಂಗಳಿನಿಂದ ರಾಜ್ಯಕ್ಕೆ ಬಂದಾಗೆಲ್ಲಾ ರಾಜ್ಯದ ವಿವಿಧ ಮಠಗಳಿಗೆ ಎಡತಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Sumalatha Ambareesh: ಪ್ರಧಾನಿ ಮೋದಿ ಸಮ್ಮುಖದಲ್ಲಿ ಕಮಲ ಬಾವುಟ ಹಿಡಿತಾರಾ ಸುಮಲತಾ ಅಂಬರೀಶ್?
ಏನಿದು ಕೇಸರಿ ಹೈಕಮಾಂಡ್ ಮಠ ಮಂತ್ರ?
ಉತ್ತರದಂತೆ ದಕ್ಷಿಣದಲ್ಲಿ ಹಿಂದುತ್ವ ಅಜೆಂಜಾ ಇಲ್ಲ ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ಮನವರಿಕೆಯಾಗಿದೆ. ಅಲ್ಲದೆ ಧರ್ಮಸಮೀಕರಣ ಕೂಡ ಈ ಭಾಗದಲ್ಲಿ ಅಸಾಧ್ಯ. ಹೀಗಾಗಿ ಹಿಂದುತ್ವಕ್ಕಿಂತ ಜಾತಿ ಸಮೀಕರಣದ ಮೇಲೆ ಗಮನ ಹರಿಸಲಾಗುತ್ತಿದೆ. ಮಠಾಧೀಶರನ್ನ ಮುಂಚೂಣಿಗೆ ತರಲು ಚಿಂತನೆ ನಡೆದಿದೆಯಂತೆ.
ಹೀಗಾಗಿಯೇ ದೊಡ್ಡ ಸಮುದಾಯಗಳ ಮಠಾಧೀಶರ ಮೇಲೆ ಗಮನ ಹರಿಸಲಾಗಿದ್ದು, ಕುರುಬ, ಪಂಚಮಸಾಲಿ, ಭೋವಿ, ವಾಲ್ಮೀಕಿ ಸಮಾಜದತ್ತ ಕಣ್ಣಿಡಲಾಗಿದೆಯಂತೆ. ಇವರಲ್ಲಿ ಒಬ್ಬರನ್ನು ಭವಿಷ್ಯದ ನಾಯಕನಾಗಿ ತಯಾರಿಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಸಕ್ರಿಯ ರಾಜಕಾರಣ ಒಲವು ತೋರಿದರೆ ಈ ಬಾರಿಯೇ ಸ್ಪರ್ಧೆಗೆ ಅವಕಾಶ ನೀಡಿ ಯೋಗಿ ಆದಿತ್ಯನಾಥ್ ಮಾದರಿಯಲ್ಲೇ ಬೆಳೆಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಧಾರವಾಡದಲ್ಲಿ ಮಾತನಾಡಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮೊನ್ನೆ 7-8 ಸ್ವಾಮೀಜಿಗಳನ್ನು ವಿಧಾನಸೌಧದಲ್ಲಿ ನೋಡಿದ್ದೇ, ಸ್ವಾಮೀಜಿಗಳು ವಿಧಾನಸೌಧಕ್ಕೆ ಬರಬಾರದು, ಆದರೆ ಸ್ವಾಮೀಜಿಗಳು ಹಾಗೆ ಇದ್ದಾರೆ. ಹೀಗಾಗಿ ಸಹಜವಾಗಿ ಅವರು ಹೇಳಿರಬಹುದು. ಅದೇ ಕಾರಣದಿಂದ ನಡ್ಡಾ ಹಾಗೆ ಹೇಳಿರಬಹುದು.
भाजपा ने अपनी नीतियों में भारत की समृद्ध संस्कृति और स्थानीय भाषाओं को बढ़ाने पर बहुत महत्व दिया है।
ಬಿಜೆಪಿಯು ತನ್ನ ನೀತಿಗಳಲ್ಲಿ ಭಾರತದ ಸಮೃದ್ಧ ಸಂಸ್ಕೃತಿ ಮತ್ತು ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕೆ ಮಹತ್ವ ನೀಡಿದೆ. pic.twitter.com/zVqLfPlWVi
— Amit Shah (@AmitShah) February 23, 2023
ಜೆಪಿ ನಡ್ಡಾ ಮಠಾಧೀಶರನ್ನು ರಾಜಕೀಯಕ್ಕೆ ಆಹ್ವಾನಿರುವ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಮಾಧ್ಯ ಮಗಳಿಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಅವರು, ಬಿಜೆಪಿ ಹಿಂದುತ್ವದ ಮೇಲೆ ದೊಡ್ಡ ಆಶಯಗಳನ್ನು ಇಟ್ಟುಕೊಂಡಿರುವ ಪಕ್ಷ.
ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಠಮಾನ್ಯರಿಗೆ ಸ್ಥಾನಮಾನ ಕೊಟ್ಟಿದ್ದಾರೆ. ಮಠ ಮಾನ್ಯರು ಬಂದಾಗ ಆಶೀರ್ವಚನ ತೆಗೆದುಕೊಳ್ಳುವುದು ಸಹಜ. ರಾಷ್ಟ್ರೀಯ ನಾಯಕರು ನಾಯಕರು ಬಂದಾಗ ಸಹಜವಾಗಿ ಹೋಗುತ್ತಿದ್ದಾರೆ. ಹೋಗಿದ್ದ ಕಡೆ ಇರುವ ಮಠಗಳ ಕಡೆ ಹೋಗುವುದು ಸರ್ವೇ ಸಾಮಾನ್ಯ, ಎಲ್ಲವನ್ನು ರಾಜಕೀಯವಾಗಿ ನೋಡುವುದು ತಪ್ಪು ಎಂದು ಹೇಳಿದರು.
35 ನಾಯಕರಿಗೆ ಅಮಿತ್ ಶಾ ಸ್ಪೆಷಲ್ ಟಾಸ್ಕ್
ಸ್ವಾಮೀಜಿಗಳ ಬಗ್ಗೆ ಚರ್ಚೆ ಒಂದೆಡೆಯಾದರೆ, ಮತ್ತೊಂದೆಡೆ ಅಮಿತ್ ಶಾ ಚಾಣಕ್ಯ ಸೂತ್ರ ಮುಂದುವರಿಸಿದ್ದಾರೆ. ವಲಸಿಗ ಶಾಸಕ, ಸಚಿವರು ಸೇರಿ 35 ಬಿಜೆಪಿ ನಾಯಕರಿಗೆ ಭರ್ಜರಿ ಟಾಸ್ಕ್ ನೀಡಿದ್ದು, ತಮ್ಮ ಜೂತೆಗೆ ತಮ್ಮ ಕ್ಷೇತ್ರದ ಸುತ್ತ ಮುತ್ತಲಿನ ಕ್ಷೇತ್ರಗಳನ್ನ ಗೆಲ್ಲಿಸುವ ಜಬಾವ್ದಾರಿ ನೀಡಿದ್ದಾರೆ.
ಇದನ್ನೂ ಓದಿ: Karwar: ಪರ ಸ್ತ್ರೀಯರ ಜೊತೆ ಗಂಡನ ಸಲುಗೆ; ಪ್ರಶ್ನಿಸಿದ್ದ ಪತ್ನಿಯನ್ನ ಕೊಂದು ಬ್ಯಾರೆಲ್ನಲ್ಲಿ ಬಚ್ಚಿಟ್ಟ!
ಸ್ವಕ್ಷೇತ್ರ ಗೆಲ್ಲಬೇಕು, ಜೊತೆಗೆ ಇನ್ನೊಂದು ಕ್ಷೇತ್ರ ಗೆಲ್ಲಿಸಬೇಕು. ಅಲ್ಲದೆ ತಾವೇ ಅದು ಯಾವ ಕ್ಷೇತ್ರ ಅನ್ನೋದನ್ನ ಆರಿಸಿಕೊಳ್ಳಬೇಕು, ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಕಳೆದಬಾರಿ ಬಿಜೆಪಿ ಸೋತಿರುವ ಕ್ಷೇತ್ರವಾಗಿರಬೇಕು, ಆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ಹೊರಬೇಕು.
ನಿಮ್ಮದೇ ಕ್ಷೇತ್ರ ಅಂತ ಕೆಲಸ ಮಾಡಬೇಕು, ನೀವೇ ಅಭ್ಯರ್ಥಿ ಎಂದುಕೊಂಡು ಚುನಾವಣೆ ನಡೆಸಬೇಕು. ಗೆಲ್ಲಿಸುವ ಮೂಲಕ ನಿಮ್ಮ ನಾಯಕತ್ವ ಸಾಬೀತುಪಡಿಸಬೇಕು ಎನ್ನವು ಎಚ್ಚರಿಕೆ ನೀಡಿದ್ದಾರೆ. ಕೇಸರಿ ವಲಯದಲ್ಲಿ ದಿನೇ ದಿನೇ ಭಿನ್ನ ವಿಭಿನ್ನ ಪ್ರಯೋಗ, ಸ್ಪರ್ಧೆ ನಡೆಯುತ್ತಿದ್ದು, ಇದೆಲ್ಲ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಅಂತ ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ