Yogi Adityanath: ನಾಳೆ ಕರುನಾಡಿಗೆ ಯೋಗಿ ಆದಿತ್ಯನಾಥ್, ನಾಡಿದ್ದು ಪ್ರಧಾನಿ ಮೋದಿ! ಏನಿದರ ವಿಶೇಷ?

ನಾಳೆ-ನಾಡಿದ್ದು ಕರ್ನಾಟಕಕ್ಕೆ ಕಮಲ ನಾಯಕರು ಆಗಮಿಸ್ತಿದ್ದಾರೆ. ಒಬ್ಬರಲ್ಲ, ಇಬ್ಬಿಬ್ಬರು ನಾಯಕರು ಕರ್ನಾಟಕಕ್ಕೆ ಬರ್ತಿದ್ದಾರೆ. ನಾಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದೆ.

ನಾಳೆ ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್

ನಾಳೆ ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್

  • Share this:
ಕರ್ನಾಟಕದಲ್ಲಿ ಎಲೆಕ್ಷನ್​ಗಿನ್ನು (Assembly Election) ಏಳೆಂಟು ತಿಂಗಳಿದೆ. ಆದರೂ ಪಕ್ಷಗಳು ಅದರದ್ದೇ ಆದ ತಯಾರಿಯಲ್ಲಿ ತೊಡಗಿದೆ. ಹೀಗಿರೋವಾಗ ಕರ್ನಾಟಕಕ್ಕೆ (Karnataka) ದೊಡ್ಡ ದೊಡ್ಡ ನಾಯಕರು ಆಗಮಿಸ್ತಿದ್ದಾರೆ. ಒಬ್ಬರಲ್ಲ, ಇಬ್ಬಿಬ್ಬರು ನಾಯಕರು ಕರ್ನಾಟಕಕ್ಕೆ ಬರ್ತಿದ್ದಾರೆ. ನಾಳೆ ಕರುನಾಡಿಗೆ ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) , ನಾಡಿದ್ದು ಪ್ರಧಾನಿ ನರೇಂದ್ರ ಮೋದಿ (PM Modi) ಬರ್ತಿದ್ದಾರೆ. ಯಸ್.. ಪ್ರಧಾನಿ ಮೋದಿ ಬರ್ತಿರೋದು ನಾಡಿದ್ದು ಮಂಗಳೂರಿನಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ಭಾಗಿಯಾಗಲು. ನಾಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬರ್ತಿರೋದು ನೆಲಮಂಗಲದಲ್ಲಿ ಕ್ಷೇಮವನ ಉದ್ಘಾಟನೆಗಾಗಿ. ಶ್ರೀಕ್ಷೇತ್ರ ಧರ್ಮಸ್ಥಳ (Dharmasthala) ಯೋಜನೆಯಿಂದ ನಿರ್ಮಿಸಿರೋ ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನೆಗಾಗಿ ಯೋಗಿ ಅದಿತ್ಯನಾಥ್ ನಾಳೆ ನೆಲಮಂಗಲಕ್ಕೆ ಆಗಮಿಸ್ತಿದ್ದಾರೆ.

ನಾಳೆ-ನಾಡಿದ್ದು ಕರ್ನಾಟಕಕ್ಕೆ ಕಮಲ ನಾಯಕರು ಆಗಮಿಸ್ತಿದ್ದಾರೆ. ಒಬ್ಬರಲ್ಲ, ಇಬ್ಬಿಬ್ಬರು ನಾಯಕರು ಕರ್ನಾಟಕಕ್ಕೆ ಬರ್ತಿದ್ದಾರೆ. ನಾಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದೆ.

ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನ ಉದ್ಘಾಟನೆಗೆ ಯೋಗಿ ಆಗಮನ
ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ನಿರ್ಮಾಣವಾಗಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನೆಗೆ ಯುಪಿ ಸಿಎಂ ಯೋಗಿ ಅದಿತ್ಯನಾಥ್ ಆಗಮಿಸ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಹದೇವಪುರದಲ್ಲಿ ಈ ಕ್ಷೇಮವನವನ್ನು ನಿರ್ಮಾಣ ಮಾಡಲಾಗಿದೆ. ನಾಳೆ ಬೆಳಗ್ಗೆ 11:30 ಕ್ಷೇಮವನ ಲೋಕಾರ್ಪಣೆ ಆಗಲಿದೆ.

ಇದನ್ನೂ ಓದಿ: ಕಾಂಗ್ರೆಸ್​ ಕೈ ಬಿಟ್ಟಿದ್ದೇಕೆ ಆಜಾದ್? ಬಯಲಾಯ್ತು ಒಳಗಿನ ಗುಟ್ಟು, ಇಲ್ಲಿದೆ Exclusive ಇನ್​ಸೈಡ್​ ಸ್ಟೋರಿ!

ನಾಳೆ ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ, ಡಾ.ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಸಂಸ್ಥಾನದ ಡಾ. ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಸಚಿವರಾದ ಕೆ.ಸುಧಾಕರ್, ಆನಂದ್ ಸಿಂಗ್, ಸಂಸದ ಬಿ.ಎನ್ ಬಚ್ಚೆಗೌಡ, ಶಾಸಕ ಶ್ರೀನಿವಾಸ ಮೂರ್ತಿ ಉಪಸ್ಥಿತಿಯಲ್ಲಿ ಕ್ಷೇಮವನದ ಉದ್ಘಾಟನೆ ನಡೆಯಲಿದೆ.

ಯೋಗಿ ಆಗಮನ ಹಿನ್ನೆಲೆ ಭಾರೀ ಭದ್ರತೆ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗಮನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 9 ಡಿವೈಎಸ್ಪಿ, 28 ಇನ್ಸ್ಪೆಕ್ಟರ್, 68 ಎಸ್ಐ, 111 ಎಎಸ್ಐ ಸೇರಿದಂತೆ 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.

3000 ಜನ ಭಾಗಿಯಾಗೋ ಸಾಧ್ಯತೆ
ಯೋಗಿ ಆದಿತ್ಯನಾಥ್ ಭಾಗಿಯಾಗೋ ಈ ಕಾರ್ಯಕ್ರಮದಲ್ಲಿ 3000 ಜನ ಭಾಗಿಯಾಗೋ ಸಾಧ್ಯತೆ ಇದೆ. 1 ಸಾವಿರ ವಿಐಪಿ ಪಾಸ್ ನೀಡಲಾಗಿದೆ. 600 ಜನ ಸಿಬ್ಬಂದಿ, 1500 ಸಾವಿರ ಸಾರ್ವಜನಿಕರಿಗೆ ಎಂಟ್ರಿ ಪಾಸ್ ವಿತರಣೆ ಮಾಡಲಾಗಿದೆ.

ನಾಳೆ ಬೆಳಗ್ಗೆ ಬೆಂಗಳೂರಿನ ಹೆಚ್ಎಎಲ್ಗೆ ಆಗಮಿಸಲಿರುವ ಸಿಎಂ ಯೋಗಿ ಆದಿತ್ಯನಾಥ್ ನಂತರ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ನೆಲಮಂಗಲಕ್ಕೆ ಆಗಮಿಸಲಿದ್ದಾರೆ. ಬಾವಿಕೆರೆಯಲ್ಲಿರುವ ಹೆಲಿಪ್ಯಾಡ್ಗೆ ಆಗಮಿಸಲಿರುವ ಯೋಗಿ ಆದಿತ್ಯನಾಥ್ ಅಲ್ಲಿಂದ ರಸ್ತೆ ಮೂಲಕ ಕ್ಷೇಮವನಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಮೋದಿ ಕಾರ್ಯಕ್ರಮದಲ್ಲಿ ನಳಿನ್ ಕಟೀಲ್ ವಿರುದ್ಧ ಆಕ್ರೋಶಕ್ಕೆ ಸಿದ್ಧತೆ!

ಬೆಂಗಳೂರು-ಹಾಸನ ಪ್ರಯಾಣಿಕರೇ ಬೀ ಅಲರ್ಟ್
ಯೋಗಿ ಆದಿತ್ಯನಾಥ್ ಆಗಮನ ಹಿನ್ನೆಲೆ ನಾಳೆ ಬೆಂಗಳೂರಿಗರಿಗೆ ಟ್ರಾಫಿಕ್ ತಟ್ಟಬಹುದು ಎನ್ನಲಾಗಿದೆ. ನಾಳೆ ಬೆಂಗಳೂರು ನೆಲಮಂಗಲ ಹಾಸನ ಹೆದ್ದಾರಿ ಬಳಸುವವರು ಮಾರ್ಗ ಬದಲಾಯಿಸುವುದು ಉತ್ತಮ. ಹಾಸನ ಮಾರ್ಗದಿಂದ ಬೆಂಗಳೂರಿಗೆ ಬರುವವರಿಗೆ ಮಾರ್ಗಸೂಚಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಹಾಸನ ರಸ್ತೆ - ಕುಣಿಗಲ್ ಜಾನ್ಸ್ಸನ್ ಫ್ಯಾಕ್ಟರಿ (ಕೆಎಸ್ ರೋಡ್) - ಮಾಗಡಿ - ತಾವರೆಕೆರೆ - ಮಾಗಡಿ ರೋಡ್ (ನೈಸ್ ರೋಡ್) ಬೆಂಗಳೂರು
ಹಾಹೆಯೇ ಬೆಂಗಳೂರಿನಿಂದ ಬರುವವರು: ಮಾಗಡಿ ರಸ್ತೆ - ತಾವರೆಕೆರೆ - ಮಾಗಡಿ ಜಂಕ್ಷನ್ - ಕುಣಿಗಲ್ ಜಾನ್ಸ್ಸನ್ ಫ್ಯಾಕ್ಟರಿ - ಹಾಸನ್ ರಸ್ತೆ ಮೂಲಕ ಬರಬಹುದು.
Published by:Thara Kemmara
First published: