News18 India World Cup 2019

ಏ.17ರಂದು ರಾಜ್ಯದಲ್ಲಿ ಬಿಜೆಪಿ ಆಯೋಜಿಸಿರುವ ಪ್ರಚಾರ ಸಮಾವೇಶಕ್ಕೆ ಪಕ್ಷದ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ ಬರುವಂತಿಲ್ಲ!

ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಧಾರವಾಡದಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಯೋಗಿ ಆದಿತ್ಯನಾಥ ಬರುವವರಿದ್ದರು.

Sushma Chakre | news18
Updated:April 15, 2019, 5:15 PM IST
ಏ.17ರಂದು ರಾಜ್ಯದಲ್ಲಿ ಬಿಜೆಪಿ ಆಯೋಜಿಸಿರುವ ಪ್ರಚಾರ ಸಮಾವೇಶಕ್ಕೆ ಪಕ್ಷದ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ ಬರುವಂತಿಲ್ಲ!
ಯೋಗಿ ಆದಿತ್ಯನಾಥ
Sushma Chakre | news18
Updated: April 15, 2019, 5:15 PM IST
ನವದೆಹಲಿ (ಏ. 15): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಏ. 17ರಂದು ಚುನಾವಣಾ ಪ್ರಚಾರಕ್ಕೆ ಕರ್ನಾಟಕಕ್ಕೆ ಆಗಮಿಸುವವರಿದ್ದರು. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬೀದರ್, ಕಲ್ಬುರ್ಗಿ, ಧಾರವಾಡದಲ್ಲಿ ಚುನಾವಣಾ ಪ್ರಚಾರ ನಡೆಸುವವರಿದ್ದರು. ಆದರೆ, ನಾಳೆ ಬೆಳಗ್ಗೆಯಿಂದ 3 ದಿನಗಳ ಕಾಲ ಯೋಗಿ ಆದಿತ್ಯನಾಥ್ ಪ್ರಚಾರದಲ್ಲಿ ಭಾಗಿಯಾಗುವಂತಿಲ್ಲ ಎಂದು ಚುನಾವಣಾ ಆಯೋಗ ನಿಷೇಧ ಹೇರಿದೆ. ಹೀಗಾಗಿ, ಅವರು ಕರ್ನಾಟಕಕ್ಕೆ ಆಗಮಿಸುವಂತಿಲ್ಲ.

ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಧಾರವಾಡದಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಯೋಗಿ ಆದಿತ್ಯನಾಥ ಬರುವವರಿದ್ದರು. ಅದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಕೂಡ ಉತ್ತರ ಕರ್ನಾಟಕದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಏಪ್ರಿಲ್​ 18ರಂದು ಎರಡನೇ ಹಂತದ ಮತದಾನದಲ್ಲಿ ರಾಜ್ಯ 14 ಜಿಲ್ಲೆಗಳಿಗೆ (ದಕ್ಷಿಣ ಕರ್ನಾಟಕ) ಚುನಾವಣೆ ನಡೆಯಲಿದೆ. ಉಳಿದ 14 ಜಿಲ್ಲೆಗಳಿಗೆ ಏಪ್ರಿಲ್ 23ರಂದು ಮತದಾನವಾಗಲಿದೆ. ನಾಳೆ ಎರಡನೇ ಹಂತದ ಚುನಾವಣೆಯ ಪ್ರಚಾರಕ್ಕೆ ತೆರೆಬೀಳಲಿದೆ. ಮೂರನೇ ಹಂತದ ಮತದಾನ ನಡೆಯುವ ಜಿಲ್ಲೆಗಳಲ್ಲಿ ಅಷ್ಟೇ ಪ್ರಚಾರ ಕೈಗೊಳ್ಳಬಹುದು. ಏ.17ರಂದು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಮಾಡುವುದಿರಿಂದ ಅದರ ಮರುದಿನ ನಡೆಯುವ ಮತದಾನದ ಮೇಲೂ ಪರಿಣಾಮ ಬೀರಲು ಆ ದಿನದಂದು ಪಕ್ಷ ರಾಷ್ಟ್ರೀಯ ನಾಯಕರನ್ನು ಕರೆಸುವ ತಂತ್ರವನ್ನೂ ಕೂಡ ಮಾಡಿತ್ತು ಎನ್ನಲಾಗಿದೆ.

ಯೋಗಿ ಆದಿತ್ಯನಾಥ್​ 72 ಗಂಟೆ, ಮಾಯಾವತಿ 48 ಗಂಟೆ ಪ್ರಚಾರದಲ್ಲಿ ಭಾಗಿಯಾಗದಂತೆ ನಿಷೇಧ ಹೇರಿದ ಚುನಾವಣಾ ಆಯೋಗ

ಕಲ್ಬುರ್ಗಿಯಲ್ಲಿ ಬಿಜೆಪಿ ಅಭ್ಯರ್ಥಿಉಮೇಶ್​ ಜಾಧವ್​ ಗೆ ಎದುರಾಳಿಯಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದಾರೆ. ಧಾರವಾಡದಲ್ಲಿ ಪ್ರಲ್ಹಾದ್​ ಜೋಷಿ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ವಿನಯ್ ಕುಲಕರ್ಣಿ ಸ್ಪರ್ಧಿಸಿದ್ದಾರೆ. ಹಾಗೇ, ಬೀದರ್​ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ವಿರುದ್ಧ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಕಣಕ್ಕೆ ಇಳಿದಿದ್ದಾರೆ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಭಾವೀ ನಾಯಕರನ್ನೇ ಮೈತ್ರಿ ಪಕ್ಷ ಕಣಕ್ಕೆ ಇಳಿಸಿರುವುದರಿಂದ ಬಿಜೆಪಿಯ ಸ್ಟಾರ್​ ಪ್ರಚಾರಕರಲ್ಲಿ ಒಬ್ಬರಾದ ಯೋಗಿ ಆದಿತ್ಯನಾಥ್​ ಕರ್ನಾಟಕಕ್ಕೆ ಆಗಮಿಸಲಿದ್ದರು. ಆದರೆ, ಚುನಾವಣಾ ಆಯೋಗದ ನಿರ್ಬಂಧದ ಹಿನ್ನೆಲೆಯಲ್ಲಿ ಅವರು ಆಗಮಿಸುವಂತಿಲ್ಲ.

'ಚೌಕಿದಾರ್ ಚೋರ್​ ಹೈ' ಎಂದು ಸುಪ್ರೀಂಕೋರ್ಟೇ ಹೇಳಿದೆ ಎಂದ ರಾಹುಲ್ ಗಾಂಧಿಯಿಂದ ವಿವರಣೆ ಕೇಳಿದ ಸರ್ವೊಚ್ಚ ನ್ಯಾಯಾಲಯ

ಚುನಾವಣಾ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್ ಅವರು ಭಾರತೀಯ ಸೇನೆ ಮೋದಿ ಸೇನೆ ಎಂದು ಕರೆದು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅಲ್ಲದೇ, ತಮ್ಮ ಪಕ್ಷದ ಪರ ಪ್ರಚಾರಕ್ಕಾಗಿ ದೇಶದ ಸೇನೆಯ ಹೆಸರನ್ನು ಉಲ್ಲೇಖಿಸುತ್ತಿದ್ದರು. ಈ ಹೇಳಿಕೆ ಸಂಬಂಧ ಚುನಾವಣಾ ಆಯೋಗ ಯೋಗಿ ಆದಿತ್ಯನಾಥ್ ಅವರಿಗೆ ಎಚ್ಚರಿಕೆಯನ್ನೂ ನೀಡಿತ್ತು. ದ್ವೇಷ ಭಾಷಣಕ್ಕೆ ಕಡಿವಾಣ ಹಾಕದ ಆಯೋಗದ ಮೇಲೆ ಇಂದು ಸುಪ್ರೀಂಕೋರ್ಟ್​ ಚಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ ಅವರು 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ನಿರ್ಬಂಧ ಹೇರಿ, ಆದೇಶ ಹೊರಡಿಸಿದೆ.
Loading...

 

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...