ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಆಧ್ಯಾತ್ಮದ ಪುಸ್ತಕ ನೀಡಿದ ಹೆಂಡತಿ..!

ಬೇಲ್ ಅರ್ಜಿ ಮುಂದೆ ಹೋಗುತ್ತಲೇ ಇದ್ದು, ಬೇಸರದಲ್ಲಿ ಇರುವ ಕುಲಕರ್ಣಿ ಮಾನಸಿಕ ಆರೋಗ್ಯದ ದೃಷ್ಟಿಯಿಂದ ‌ಆಧ್ಯಾತ್ಮದ ಮೊರೆ‌ ಹೋಗಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿ

ಮಾಜಿ ಸಚಿವ ವಿನಯ್ ಕುಲಕರ್ಣಿ

  • Share this:
ಬೆಳಗಾವಿ(ಡಿ.11): ಧಾರವಾಡ ಜಿ.ಪಂ. ಸದಸ್ಯ ಯೋಗೇಶ್​​ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧಿಸಿದೆ. ಕಳೆದ 32 ದಿನಗಳಿಂದ‌ ಕುಲಕರ್ಣಿ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇಡಲಾಗಿದೆ. ಜೈಲಿನಲ್ಲಿ ಏಕಾಂಗಿಯಾಗಿರುವ‌ ಕುಲಕರ್ಣಿಗೆ‌ ಮಾನಸಿಕ ಧೈರ್ಯ ತುಂಬಲು ಪತ್ನಿ ಸಹಕಾರಿಯಾಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಪತಿಯನ್ನು ಭೇಟಿ ಮಾಡಿದ ಪತ್ನಿ, ಪತಿಗೆ ಭಗವದ್ಗೀತೆ ಸೇರಿ ಅನೇಕ ಆಧ್ಯಾತ್ಮಿಕ ಪುಸ್ತಕ ಕೊಟ್ಟು ಬಂದಿದ್ದಾರೆ. ನಿನ್ನೆ ಸಂಜೆ 4ರಿಂದ 5ಗಂಟೆಯವರೆಗೆ ಒಂದು ಗಂಟೆ ಕಾಲ ವಿನಯ್ ಕುಲಕರ್ಣಿ ಭೇಟಿಗೆ ಕುಟುಂಬಸ್ಥರಿಗೆ ಅನುಮತಿ ನೀಡಲಾಗಿತ್ತು. ಧಾರವಾಡ ಕೋರ್ಟ್ ನಿಂದ ಅನುಮತಿ ಪಡೆದು ಕುಟುಂಬಸ್ಥರು ಭೇಟಿ ಮಾಡಿದರು.

ಈ ವೇಳೆ ಪತ್ನಿ ಶಿವಲೀಲಾ, ಮಕ್ಕಳಾದ ಹೇಮಂತ, ದೀಪಾಲಿ, ವೈಶಾಲಿ ಹಾಗೂ ಓರ್ವ ಸಂಬ‌ಂಧಿ ಹಾಜರು ಇದ್ದರು. ಪತ್ನಿ ಮುಂದೆ ಏಕಾಂಗಿತನ ಬಗ್ಗೆ ಕುಲಕರ್ಣಿ ಬೇಸರ ವ್ಯಕ್ತಪಡಿಸಿದ್ದಾರೆ. ಪತಿಯನ್ನು ನೋಡಿ ಪತ್ನಿ ಶಿವಲೀಲಾ ಸಹ ಕಣ್ಣೀರು ಹಾಕಿದ್ದಾರೆ.

ಕುಮಾರಸ್ವಾಮಿ ಸರ್ಕಾರಕ್ಕೆ ಸ್ಕೆಚ್ ಹಾಕಿ ತೆಗೆದಿದ್ದು ನಾನೇ..!; ಎಂಎಲ್​ಸಿ ಸಿ.ಪಿ.ಯೋಗೇಶ್ವರ್

ಜೈಲಿನಲ್ಲಿ ಏಕಾಂಗಿಯಾಗಿರೋ ಕುಲಕರ್ಣಿ ಬೇಸರ ದೂರ ಮಾಡಲು ಪತ್ನಿ ಅನೇಕ ಪುಸ್ತಕಗಳನ್ನು ನೀಡಿದ್ದಾರೆ. ಭಗವದ್ಗೀತೆ ಸೇರಿ ಅನೇಕ ಪುಸ್ತಕಗಳನ್ನು ಕೊಟ್ಟು ಬಂದಿದ್ದಾರೆ. ಕುಲಕರ್ಣಿ ಸಹ ಕೆಲ ದಿನಗಳಿಂದ ಜೈಲಿನ ಗ್ರಂಥಾಲಯದಿಂದ ಪುಸ್ತಕ ತಂದು ಓದುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಬೇಲ್ ಅರ್ಜಿ ಮುಂದೆ ಹೋಗುತ್ತಲೇ ಇದ್ದು, ಬೇಸರದಲ್ಲಿ ಇರುವ ಕುಲಕರ್ಣಿ ಮಾನಸಿಕ ಆರೋಗ್ಯದ ದೃಷ್ಟಿಯಿಂದ ‌ಆಧ್ಯಾತ್ಮದ ಮೊರೆ‌ ಹೋಗಿದ್ದಾರೆ.ಕುಟುಂಬಸ್ಥರೇನೋ ಕುಲಕರ್ಣಿಯವರನ್ನು ಭೇಟಿ ಮಾಡಿದ್ದಾರೆ. ಆದರೆ ಸಾಕು ನಾಯಿಗೆ ಭೇಟಿ ಅವಕಾಶ ಸಿಗಲಿಲ್ಲ. ನಿನ್ನೆ ಕುಟುಂಬಸ್ಥರ ಜತೆಗೆ ಕುಲಕರ್ಣಿ ಸಾಕು‌ ನಾಯಿ ಸಹ ಹಿಂಡಲಗಾ ಜೈಲಿಗೆ ಆಗಮಿಸಿತ್ತು. ಆಧರೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ನಾಯಿಯನ್ನು ವಾಹನ ಚಾಲಕನ ಜತೆಗೆ ಬಿಟ್ಟು ಹೋಗಿದ್ದರು. ಜಾಮೀನು ಪಡೆಯಲು ಕುಲಕರ್ಣಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಫಲವಾಗದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Published by:Latha CG
First published: