Kolara: ಯೋಗ ದಿನಾಚರಣೆಗೆ ಸಿದ್ಧತೆ, 60 ಎಕರೆ ಪ್ರದೇಶದಲ್ಲಿ ಯೋಗಾಭ್ಯಾಸ, 200 ಬಸ್ ಪಾರ್ಕಿಂಗ್ ವ್ಯವಸ್ಥೆ

ಜಿಲ್ಲಾಡಳಿತ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಂಸದ ಮುನಿಸ್ವಾಮಿ ಸ್ವಂತ ತಮ್ಮ ಖರ್ಚಿನಲ್ಲಿ ಜೆಸಿಬಿ ಬಳಿಸಿ  ಸ್ವಚ್ಚತಾ ಕಾರ್ಯ  ನಡೆಸುತ್ತಿದ್ದಾರೆ. ಬೆಟ್ಟಗಳ ಮಡಿಲಲ್ಲಿ ಖಾಲಿ ಸ್ಥಳದಲ್ಲಿ ಯೋಗ ದಿನ ಆಚರಿಸಲು 15 ಸಾವಿರಕ್ಕು ಹೆಚ್ಚು ಯೋಗಪಟುಗಳು ಭಾಗಿಯಾಗಲಿದ್ದಾರೆ.

ಯೋಗ ದಿನಾಚರಣೆಗೆ ಸಿದ್ಧತೆ

ಯೋಗ ದಿನಾಚರಣೆಗೆ ಸಿದ್ಧತೆ

  • Share this:
ಕೋಲಾರ(ಜೂ.15): ರಾಷ್ಟ್ರೀಯ ಯೋಗ ಗುರು ದಿವಂಗತ ಬಿ.ಕೆ.ಎಸ್ ಅಯ್ಯಂಗಾರ್ ಅವರ ತವರು, ಕೋಲಾರ (Kolara) ಜಿಲ್ಲೆಯಲ್ಲಿ ಈ ಬಾರಿ ಜೂನ್ 21 ರಂದು ನಡೆಯಲಿರುವ ವಿಶ್ವ ಯೋಗ ದಿನ ಐತಿಹಾಸಿಕ ಪುಟ ಸೇರಲಿದೆ.  ವಿಶ್ವ ಯೋಗ ದಿನಾಚರಣೆ ಪ್ತಯುಕ್ತ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ  ಪ್ರಕೃತಿ ಮಡಿಲಲ್ಲಿ ಬೆಟ್ಟ ಗುಡ್ಡಗಳ ಮಧ್ಯೆ, ಹಸಿರ ವನದ ಮಧ್ಯೆ ಯೋಗ ದಿನ ಆಚರಿಸಲು, ಕೋಲಾರ ಜಿಲ್ಲೆ ಸಜ್ಜಾಗುತ್ತಿದೆ.  ಕೋಲಾರದ (Kolara) ಶತಶೃಂಗ ಪರ್ವತ,  ಅಂತರಗಂಗೆ ಬೆಟ್ಟದಲ್ಲಿ ಈ ಬಾರಿ ಯೋಗ ದಿನಾಚರಣೆ (Yoga Day) ಹಮ್ಮಿಕೊಳ್ಳಲಾಗಿದೆ. ಅಂತರಗಂಗೆ ಬೆಟ್ಟದಲ್ಲಿರುವ ಹೊಸಹಳ್ಳಿ ಸಮೀಪ ಇರುವ  ಬೆಟ್ಟಗುಡ್ಡಗಳ ಮಧ್ಯೆ 60 ಎಕರೆಯ ಜಾಗವನ್ನ ಈಗಾಗಲೇ  ಸಮತಟ್ಟು ಮಾಡಲಾಗಿದ್ದು, ಇದಕ್ಕಾಗಿ ಕಳೆದ 10 ದಿನಗಳಿಂದ  ಹತ್ತಾರು ಜೆಸಿಬಿ (JCB) ವಾಹನ ಬಳಸಿ   ಗಿಡ ಗಂಟೆಗಳನ್ನ ತೆರವು ಮಾಡಲಾಗಿದೆ.

ಜಿಲ್ಲಾಡಳಿತ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಂಸದ ಮುನಿಸ್ವಾಮಿ ಸ್ವಂತ ತಮ್ಮ ಖರ್ಚಿನಲ್ಲಿ ಜೆಸಿಬಿ ಬಳಿಸಿ  ಸ್ವಚ್ಚತಾ ಕಾರ್ಯ  ನಡೆಸುತ್ತಿದ್ದಾರೆ. ಬೆಟ್ಟಗಳ ಮಡಿಲಲ್ಲಿ ಖಾಲಿ ಸ್ಥಳದಲ್ಲಿ ಯೋಗ ದಿನ ಆಚರಿಸಲು 15 ಸಾವಿರಕ್ಕು ಹೆಚ್ಚು ಯೋಗಪಟುಗಳು ಭಾಗಿಯಾಗಲಿದ್ದಾರೆ.

ಜಿಲ್ಲೆಯ  ಅಧಿಕಾರಿಗಳು, ಕಾಲೇಜು ವಿಧ್ಯಾರ್ಥಿಗಳು, ಶಿಕ್ಷಕರು, ಸ್ವಯಂ ಸೇವಕರು, ಬಿಜೆಪಿ ಕಾರ್ಯಕರ್ತರು  ಯೋಗಾಭ್ಯಾಸ ಮಾಡಲಿದ್ದಾರೆ. ಸಾವಿರಾರು ಜನರು ಆಗಮಿಸುವ ಹಿನ್ನಲೆ  ಜೂನ್ 21 ರಂದು ಖಾಸಗಿ ವಾಹನಗಳಿಗೆ ಅಂತರಗಂಗೆ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಅಂತರಗಂಗೆ ಬೆಟ್ಟದಲ್ಲಿ ಸಾಹಸಕ್ಕೆ ಕೈ ಹಾಕಿದ ಸಂಸದ

ಅಂತರಗಂಗೆ ಬೆಟ್ಟದ ಹಿಂಭಾಗದಲ್ಲಿ 7 ಗ್ರಾಮಗಳಿದ್ದು ಸಾವಿರಾರು ಗ್ರಾಮಸ್ಥರು ಇಂದಿಗೂ ಜೀವನ ನಡೆಸುತ್ತಿದ್ದಾರೆ. ಬೆಟ್ಟಗಳ ಮಧ್ಯೆ ಇರುವ ಗ್ರಾಮಗಳಲ್ಲಿ ನೀರು, ವಿದ್ಯುತ್ ಸಂಪರ್ಕ ಇದ್ದರೂ ಗ್ರಾಮಗಳಿಂದ ಕೋಲಾರ ನಗರಕ್ಕೆ ಆಗಮಿಸಲು 15 ಅಡಿ ಅಗಲದ ಡಾಂಬರು ರಸ್ತೆ ಮಾತ್ರ ಇದೆ. ಒಂದು ಸರ್ಕಾರಿ ಬಸ್ ಏಕಮುಖವಾಗಿ ಚಲಿಸಿದರೆ, ಪಕ್ಕದಲ್ಲಿ ಮತ್ತೊಂದು ವಾಹನ ತೆರಳಲು ಸ್ಥಳಾವಕಾಶ ಇರುವುದಿಲ್ಲ, ಹೀಗಾಗಿ ಯೋಗಾಭ್ಯಾಸ ನಡೆಸುವ ಸ್ಥಳ ಕಟ್ಟ ಕಡೆಯ ಗ್ರಾಮವಾದ್ದರಿಂದ ಹಲವು, ಯೋಗ ದಿನಾಚರಣೆ ಯಶಸ್ಸಿಗೆ ಬೆಟ್ಟದಷ್ಟು ಅಡೆತಡೆಗಳು ಎದುರಾಗಬಹುದು.

ಟ್ರಾಫಿಕ್ ಸಮಸ್ಯೆ

ಮೊದಲನೆಯದಾಗಿ ಟ್ರಾಫಿಕ್ ಸಮಸ್ಯೆ, ಸಾವಿರಾರು ಜನರು ಬೆಳಗ್ಗೆ ಯೋಗಾಭ್ಯಾಸದ ಸಮಯಕ್ಕೆ ಹಾಜರಾಗಬೇಕಿದ್ದು, ಒಂದೇ ಸಮನೆ ಎಲ್ಲರು ತೆರಳಲು ಸಾಧ್ಯವಿಲ್ಲ, ಸರ್ಕಾರಿ ಬಸ್, ಕಾಲೇಜು ಬಸ್ ಗಳಲ್ಲಿ ಯೋಗ ಪಟುಗಳನ್ನ ರವಾನಿಸಲು ಬಳಸುತ್ತಿದ್ದು, ಒಮ್ಮೆ ವಾಹನಗಳು ತೆರಳಿದರೆ, ಮತ್ತೊಂದು ಕಡೆ ವಾಹನ ಸಂಚಾರ ನಿಲ್ಲಿಸಬೇಕಿದೆ. ಯೋಗಾಭ್ಯಾಸ ನಡೆಯುವ ಸ್ಥಳದಲ್ಲಿ 200 ಬಸ್ ಗಳು ನಿಲ್ಲುವಷ್ಟು ಪಾರ್ಕಿಂಗ್ ಸ್ಥಳವನ್ನ ಗುರುತಿಸಿದ್ದು, ಟ್ರಾಪಿಕ್ ಕಿರಿ ಕಿರಿ ಎಲ್ಲರಿಗು ತಟ್ಟಲಿದೆ ಎಂದಿದ್ದಾರೆ.

ಸ್ಥಳದ ಸಿದ್ಧತೆ

ಆದರೆ ಕಾರು, ಬೈಕ್ ಸವಾರರು ಪರದಾಟ ಎದುರಿಸುವ ಸಾಧ್ಯತೆಯಿದೆ. ಇನ್ನು ಎರಡನೇಯದಾಗಿ ಕಳೆದ 10 ದಿನಗಳ ಹಿಂದೆ ಮುಳ್ಳು ಬೇಲಿಗಳಿಂದ ಮುಚ್ಚಿಹೋಗಿದ್ದ ಸ್ಥಳವನ್ನ ಈಗಾಗಲೇ ಸ್ವಚ್ಚ ಮಾಡಲಾಗಿದ್ದು, ಗಿಡ ಗಂಟೆಗಳನ್ನ ತೆರವು ಮಾಡಿ, ಜೆ.ಸಿ.ಬಿ ಸಹಾಯದಿಂದ ಸಮತಟ್ಟು ಮಾಡಲಾಗುತ್ತಿದೆ.

ಇದನ್ನೂ ಓದಿ: Mother Statue: ಇಲ್ಲಿ ತಾಯಿಯೇ ದೇವರು, ಪ್ರತಿನಿತ್ಯ ಈ ಮನೆಯಲ್ಲಿ ನಡೆಯುತ್ತೆ ಮಾತೃ ಪೂಜೆ!

ಆದರೆ ಮಳೆಯಾದರೆ ಯೋಗಾಭ್ಯಾಸಕ್ಕೆ ಅಡಚಣೆ ಎದುರಾಗುವ ಸಾಧ್ಯೆಯಿದೆ, ಇನ್ನು ಮೂರನೆಯದಾಗಿ ಯೋಗಾಭ್ಯಾಸದಲ್ಲಿ 15 ಸಾವಿರಕ್ಕು ಅಧಿಕ ಯೋಗಪಟುಗಳು ಭಾಗಿಯಾಗುವ ನಿರೀಕ್ಷೆಯಿದೆ, ಹೀಗಾಗಿ ಎಲ್ಲರರಿಗು ಬೆಳಗಿನ ತಿಂಡಿ ವ್ಯವಸ್ತೆ ಮಾಡಲಾಗಿದೆ, ಆದರೆ ಕಾರ್ಯಕ್ರಮದಲ್ಲಿ ಭಾಗಿಯಾದವರು ಸಂಯಮದಿಂದ ವರ್ತಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ‌.

8 ಲಕ್ಷಕ್ಕು ಅಧಿಕ ವೆಚ್ಚ ಭರಿಸ್ತಿದ್ದಾರೆ ಸಂಸದ ಮುನಿಸ್ವಾಮಿ

ಸಾವಿರಾರು ಯೋಗ ಪಟುಗಳನ್ನ ಸ್ಥಳಕ್ಕೆ  ರವಾನಿಸುವ ಸಾರಿಗೆ ಹಾಗೂ ತಿಂಡಿ ವ್ಯವಸ್ತೆ ಸಂಸದ ಮುನಿಸ್ವಾಮಿ ವಹಿಸಿಕೊಂಡಿದ್ದು, 1 ಸಾವಿರ ಮೀಟರ್ ಉದ್ದ, 600 ಮೀಟರ್ ಅಗಲದಷ್ಟು ಮ್ಯಾಟ್ ವನ್ನ ನೆಲದ ಮೇಲೆ ಹಾಸಲು, 8 ಲಕ್ಷಕ್ಕು ಅಧಿಕ ವೆಚ್ಚವನ್ನ ಸಂಸದ ಮುನಿಸ್ವಾಮಿ ಭರಿಸುತ್ತಿದ್ದಾರೆ, ಒಟ್ಟಿನಲ್ಲಿ ಕೋಲಾರದಲ್ಲಿ ಐತಿಹಾಸಿಕವಾಗಿ ಯೋಗದಿನ ಆಚರಿಸಲು ಸಂಸದ ಮುನಿಸ್ವಾಮಿ ಪಣತೊಟ್ಟಿದ್ದು, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಇಂತಹದೊಂದು ಸಾಹಸಕ್ಕೆ ಮುನಿಸ್ವಾಮಿ ಕೈ ಹಾಕಿದ್ದಾರೆ.

ಇದನ್ನೂ ಓದಿ: Bengaluru: ಮೆಟ್ರೋ ನಿಲ್ದಾಣದಲ್ಲಿ ಓಡಾಡುವಾಗ ಎಚ್ಚರ; ಕಾಲು ಜಾರಿ ಮೂಳೆ ಮುರಿದುಕೊಂಡ ಮಹಿಳೆ

ಈ ಕುರಿತು ಮಾತನಾಡಿರುವ ಸಂಸದ ಮುನಿಸ್ವಾಮಿ, ದೇಶಕ್ಕೆ ಮೊದಲು ಚಿನ್ನ ಕೊಟ್ಟ ಕೋಲಾರ ಜಿಲ್ಲೆ ಎಲ್ಲಾ ಕ್ಷೇತ್ರದಲ್ಲು ಮುಂದಿದೆ, ಉತ್ತಮ ಆರೋಗ್ಯ ರೂಪಿಸಿಕೊಳ್ಳಲು ಯೋಗ ಉತ್ತಮ ವ್ಯಾಯಾಮ ನೀಡುತ್ತದೆ, ಹಾಗಾಗಿ ವಿಶ್ವ ಯೋಗದಿನವನ್ನ ಐತಿಹಾಸಿಕ ದಿನವನ್ನಾಗಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ‌.
Published by:Divya D
First published: