ಟ್ರಾಫಿಕ್​ ಪೊಲೀಸರಿಗೆ ಯೋಗ, ಬಾಡಿ ಮಸಾಜ್​; ಬೆಂಗಳೂರು ಸಂಚಾರಿ ಠಾಣೆಗಳಲ್ಲಿ ಉತ್ತಮ ಅಭ್ಯಾಸ

ಹಾಗೆಯೇ ಪಿಸಿಯೋಥೆರಪಿ ಮೂಲಕ ಬಾಡಿ ಮಸಾಜ್ ಕೂಡ ಮಾಡಲಾಗುತ್ತಿದೆ. ಟ್ರಾಫಿಕ್ ಕ್ಲಿಯರ್ ಮಾಡಲು ನಿಂತು ನಿಂತು ಕಾಲು ನೋವು ಬಂದಿರುತ್ತದೆ. ಹೀಗಾಗಿ ನುರಿತ ಡಾಕ್ಟರ್​ಗಳು  ಟ್ರಾಫಿಕ್ ಪೊಲೀಸ್ ಹಾಗೂ ಸಿಬ್ಬಂದಿಗೆ ಪ್ರತಿನಿತ್ಯ ಮಸಾಜ್ ಮಾಡುತ್ತಿದ್ದಾರೆ.

Latha CG | news18-kannada
Updated:November 27, 2019, 11:27 AM IST
ಟ್ರಾಫಿಕ್​ ಪೊಲೀಸರಿಗೆ ಯೋಗ, ಬಾಡಿ ಮಸಾಜ್​; ಬೆಂಗಳೂರು ಸಂಚಾರಿ ಠಾಣೆಗಳಲ್ಲಿ ಉತ್ತಮ ಅಭ್ಯಾಸ
ಯೋಗನಿರತ ಟ್ರಾಫಿಕ್​ ಪೊಲೀಸರು
  • Share this:
ಬೆಂಗಳೂರು(ನ.27): ಈ ಯಾಂತ್ರಿಕ ಬದುಕಿನಲ್ಲಿ ದೇಹ ಎಂಬ ಯಂತ್ರಕ್ಕೆ ವಿಶ್ರಾಂತಿ ಕೊಡಲು ಸಾಧ್ಯವೇ ಆಗುವುದಿಲ್ಲ. ಆರೋಗ್ಯ ಕೈ ಕೊಟ್ಟಾಗ ವೈದ್ಯರ ಬಳಿ ಹೋದರೆ ಅವರು ಹೇಳುವುದು ಒಂದೇ. ದೇಹಕ್ಕೆ ವಿಶ್ರಾಂತಿ ಅಗತ್ಯ ಎಂಬ ಮಾತನ್ನೇ ಹೇಳುತ್ತಾರೆ.  ಯೋಗ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.  ಬೆಂಗಳೂರು ಸಂಚಾರಿ ಪೊಲೀಸರು ದಿನವಿಡೀ ರಸ್ತೆ ಬದಿ ನಿಂತು ಮಲಗುವ ವೇಳೆಗೆ ಬಸವಳಿದಿರುತ್ತಾರೆ. ಟ್ರಾಫಿಕ್​ ಪೊಲೀಸರ ಆಯಾಸ ಕಡಿಮೆ ಮಾಡಲು ಹಾಗೂ ಅವರ ದೇಹ ಪ್ರಫುಲ್ಲತೆಯಿಂದಿರಲು ಒಂದು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಏನದು ಅಂತೀರಾ? ಯೋಗ ಮಾಡುವುದು.

ಹೌದು, ಬೆಂಗಳೂರಿನ ಪ್ರತೀ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪೊಲೀಸರು ದಿನನಿತ್ಯ ಬೆಳಗ್ಗೆ ಯೋಗ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಬನಶಂಕರಿ ಸಂಚಾರಿ ಪೊಲೀಸ್​ ಠಾಣೆ ಸಿಬ್ಬಂದಿ ಖ್ಯಾತ ಯೋಗತಜ್ಞ ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಯೋಗ ಮಾಡುತ್ತಿದ್ಧಾರೆ.

ಬೆಂಗಳೂರು ಗ್ರಾಹಕರಿಗೆ ಕಹಿಯಾದ ಈರುಳ್ಳಿ; ಕತ್ತರಿಸದಿದ್ದರೂ ಕಣ್ಣೀರಿಡಿಸುತ್ತಿದೆ ಈ ತರಕಾರಿ

ಕೆಲಸದಿಂದ ದೇಹಕ್ಕೆ ಒತ್ತಡ ಉಂಟಾಗುವ ಹಿನ್ನಲೆ ಯೋಗಾಭ್ಯಾಸ ಮಾಡುತ್ತಿದ್ದಾರೆ.  ಬನಶಂಕರಿ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಕೃಷ್ಣ ನೇತೃತ್ವದಲ್ಲಿ   ಸಿಬ್ಬಂದಿ ಹಾಗೂ ಅಧಿಕಾರಿಗಳು ಯೋಗಾಭ್ಯಾಸ ಮುಂದುವರೆಸಿದ್ಧಾರೆ.ಹಾಗೆಯೇ ಪಿಸಿಯೋಥೆರಪಿ ಮೂಲಕ ಬಾಡಿ ಮಸಾಜ್ ಕೂಡ ಮಾಡಲಾಗುತ್ತಿದೆ. ಟ್ರಾಫಿಕ್ ಕ್ಲಿಯರ್ ಮಾಡಲು ನಿಂತು ನಿಂತು ಕಾಲು ನೋವು ಬಂದಿರುತ್ತದೆ. ಹೀಗಾಗಿ ನುರಿತ ಡಾಕ್ಟರ್​ಗಳು  ಟ್ರಾಫಿಕ್ ಪೊಲೀಸ್ ಹಾಗೂ ಸಿಬ್ಬಂದಿಗೆ ಪ್ರತಿನಿತ್ಯ ಮಸಾಜ್ ಮಾಡುತ್ತಿದ್ದಾರೆ.

800 ರೂಪಾಯಿ ಡ್ರೆಸ್​ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಬೆಂಗಳೂರು ಯುವತಿ!
First published:November 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ