ಒಂದು ವೇಳೆ ಈ ಯೋಜನೆ ಆದ್ರೆ ನಾನು ನೇಣು ಹಾಕಿಕೊಳ್ತೀನಿ: ಸಚಿವರಿಗೆ MLC Bojegowda ಸವಾಲ್

22 ಸಾವಿರ ಕೋಟಿ ಖರ್ಚಾದ್ರು ಈ ಯೋಜನೆ ಮುಗಿಸಲು ಸಾಧ್ಯವಿಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದ್ರು ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಇದು ನನ್ನ ಚಾಲೆಂಜ್.

ವಿಧಾನ ಪರಿಷತ್

ವಿಧಾನ ಪರಿಷತ್

 • Share this:
  ಬಜೆಟ್ ಅಧಿವೇಶನ (Budget Session) ವೇಳೆ ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರಿನ ಎತ್ತಿನ ಹೊಳೆ ಯೋಜನೆ (Ettina Hole Project) ಸ್ಥಗಿತ ಆಗಿರುವ ಬಗ್ಗೆ ಕಾಂಗ್ರೆಸ್ MLC ರಾಜೇಂದ್ರ ರಾಜಣ್ಣ (MLA Rajendra Rajanna) ಪ್ರಸ್ತಾಪ ಮಾಡಿದರು. ರಾಜೇಂದ್ರ ರಾಜಣ್ಣ ಅವರ ಪ್ರಶ್ನೆಗೆ ಸಚಿವ ಗೋವಿಂದ ಕಾರಜೋಳ (Minister Govind Karjol) ಉತ್ತರ ನೀಡಿದರು. 24.1 ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆ ಇದಾಗಿದೆ. ಶೇ‌.70 ರಷ್ಡು ಕಾಮಗಾರಿ ಪೂರ್ಣವಾಗಿದೆ. ಕೊರಟಗೆರೆ (Koratagere) ಮತ್ತು ದೊಡ್ಡಬಳ್ಳಾಪುರ (Doddaballapur) ಎರಡು ತಾಲೂಕು ನಡುವಿನ ಭೂಮಿಯ ಬೆಲೆ (Land Value) ಬಗ್ಗೆ ವ್ಯತ್ಯಾಸ ಇದೆ. ಇದರಿಂದ ಸಮಸ್ಯೆ ಆಗ್ತಿದೆ ಎಂದು ಕಾರಜೋಳ ಉತ್ತರಿಸುತ್ತಿದ್ದಂತೆ ರಾಜೇಂದ್ರ ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಭೂ ಸ್ವಾಧೀನಪಡಿಸಿಕೊಂಡರೂ ರೈತರಿಗೆ (Farmers) ಅನುದಾನ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

  ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ MLC ಬೋಜೇಗೌಡ, ಎತ್ತಿನಹೊಳೆ ಯೋಜನೆ ಆದ್ರೆ ನಾನು ನೇಣು ಹಾಕಿಕೊಳ್ತೀನಿ ಅಂತ ಹೇಳಿದರು. 22 ಸಾವಿರ ಕೋಟಿ ಖರ್ಚಾದ್ರು ಈ ಯೋಜನೆ ಮುಗಿಸಲು ಸಾಧ್ಯವಿಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದ್ರು ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಇದು ನನ್ನ ಚಾಲೆಂಜ್

  ಎತ್ತಿನಹೊಳೆ ಯೋಜನೆ ಕೆಲವರಿಗೆ ಕಾಮಧೇನು!

  ಎತ್ತಿನಹೊಳೆ ಕೆಲವರಿಗೆ ಕಾಮಧೇನು. ಯಾರ್ ಯಾರಿಗೆ ಇದು ಕಾಮಧೇನು ಅಂತ ನಮಗೆ ಗೊತ್ತಿದೆ. 50 ಸಾವಿರ ಕೋಟಿ ಖರ್ಚು ಮಾಡಿದ್ರು ಈ ಯೋಜನೆ ಪೂರ್ಣ ಆಗಲ್ಲ. ಒಂದು ವೇಳೆ ಈ ಯೋಜನೆ ಆದ್ರೆ ನಾನು ನೇಣು ಹಾಕಿಕೊಳ್ತೀನಿ ಎಂದು ಸಚಿವರಿಗೆ ಬೋಜೇಗೌಡರು ಸವಾಲು ಹಾಕಿದರು.

  ಇದನ್ನೂ ಓದಿ:  ಹೌದು, ನೀವು ಹಿಂದೆ ಕುಳಿತಿದ್ದೀರಲ್ಲ, ಗಮನಿಸುತ್ತಿರುತ್ತೀರಿ: BSY ಬಗ್ಗೆ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

  ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕ

  ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕ ವಿಚಾರವನ್ನು ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದರು.ಕನ್ನಡ ಶಿಕ್ಷಕರ ನೇಮಕ ಮಾಡುವಂತೆ ಕೇರಳ ಹೈಕೋರ್ಟ್ ಆದೇಶವಿದೆ. ಹೀಗಿದ್ದರೂ ಅಲ್ಲಿ ಮಲಯಾಳಂ ಶಿಕ್ಷಕರ ನೇಮಕ ಮಾಡಲಾಗಿದೆ. ಮಕ್ಕಳ ಶಿಕ್ಷಣಕ್ಕೆ ಕನ್ನಡ ಶಿಕ್ಷಕರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಬೇಕು. ಗಡಿನಾಡ ಭಾಗದ ವಿಧ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೇರಳ ಸರ್ಕಾರಕ್ಕೆ ಒತ್ತಡ ಹಾಕಿ ಎಂದು ಆಗ್ರಹಿಸಿದರು.

  ಸಲೀಂ ಅಹ್ಮದ್ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಉತ್ತರ ನೀಡಿದರು. ಇವತ್ತೇ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಇದನ್ನು ಕೇರಳ ಸರ್ಕಾರದ ಗಮನಕ್ಕೆ ತಂದು ಒತ್ತಡ ತರುತ್ತೇವೆ. ಅಲ್ಲಿನ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಉತ್ತರಿಸಿದರು.

  ವಿಧಾನಸಭೆಯಲ್ಲಿ ಸ್ಪೀಕರ್ ಹಾಸ್ಯ ಚಟಾಕಿ

  ಪ್ರಶ್ನೋತ್ತರ ವೇಳೆಯಲ್ಲಿ ದೇವಾಲಯಗಳಿಗೆ ಅನುದಾನ ಬೇಡಿಕೆಗೆ ಸಂಬಂಧಿಸಿದಂತೆ ಶಾಸಕ ಆನಂದ್ ನ್ಯಾಮಗೌಡ ಪ್ರಶ್ನೆ ಮಾಡಿದರು. ನನ್ನ ಕ್ಷೇತ್ರಗಳ ದೇವಾಲಯಗಳ ಅನುದಾನ ಕೊಟ್ಟರೆ ಆ ದೇವರುಗಳು ಸಚಿವರಿಗೆ ಒಳ್ಳೆಯದಯ ಮಾಡಲಿವೆ ಎಂದು ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೇರಿ, ಓಹೋ.. ದೇವರು ಸಚಿವರಿಗೆ ಮಾತ್ರ ಆಶೀರ್ವಾದ ಮಾಡೋದೋ ಅಥವಾ ಎಲ್ಲರಿಗೂ ಆಶೀರ್ವಾದನೋ ಎಂದರು.

  ಇದನ್ನೂ ಓದಿ:  Ukraineನಿಂದ ಬಂದಿರುವ Students ಭವಿಷ್ಯ ಏನು? ಮಕ್ಕಳ ಕನಸುಗಳ ಜೊತೆ ವ್ಯಾಪಾರೀಕರಣ ಬೇಡ: HD Kumaraswamy

  ಅನುದಾನ ಕೊಟ್ಟರೇ ಆಶೀರ್ವಾದನಾ?

  ಸಚಿವರು ಅನುದಾನ ಬಿಡುಗಡೆ ಮಾಡಿದ್ರೆ ಸಚಿವರಿಗೆ ಒಳ್ಳೆಯದು ಮಾಡ್ತಾನೆ ದೇವರು ಎಂದು ಆನಂದ್ ನ್ಯಾಮಗೌಡ ಉತ್ತರ ನೀಡಿದರು. ಹಾಗಾದ್ರೆ ಅನುದಾನ ಕೊಟ್ಟರೆ ಆಶೀರ್ವಾದ ಎಂದು ಹೇಳಿ ಸ್ಪೀಕರ್ ನಕ್ಕರು. ಅನುದಾನ ಬಿಡುಗಡೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.
  Published by:Mahmadrafik K
  First published: