ಡಿಕೆ ರವಿ ಮನೆಯಲ್ಲಿ ಬಂಗಾರ, ನಗದು ದೋಚಿದ ಕಳ್ಳರು

ರಾತ್ರಿ ಡಿ ಕೆ ರವಿಯವರ ತಾಯಿ ಗೌರಮ್ಮ ತಂದೆ ಕರಿಯಪ್ಪ ದಂಪತಿ ಮಲಗಿದ್ದ ಸಂದರ್ಭದಲ್ಲಿ ಮನೆ ಕಳ್ಳತನವಾಗಿದೆ. ಮನೆಯಲ್ಲಿದ್ದವರು ಎಚ್ಚರಗೊಳ್ಳದಂತೆ ಹಿಂಭಾಗಿಲು ಮುರಿದು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ಡಿ ಕೆ ರವಿ

ಡಿ ಕೆ ರವಿ

 • Share this:
  ತುಮಕೂರು(ಮಾ. 20):  ಡಿ ಕೆ ರವಿಯವರ ಕುಣಿಗಲ್ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿರುವ ಮನೆಯಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ಬಂಗಾರ ಹಾಗೂ ನಗದು ಹಣವನ್ನು ದೊಚಿದ್ದಾರೆ.

  ರಾತ್ರಿ ಡಿಕೆ ರವಿಯವರ ತಾಯಿ ಗೌರಮ್ಮ ತಂದೆ ಕರಿಯಪ್ಪ ದಂಪತಿ ಮಲಗಿದ್ದ ಸಂದರ್ಭದಲ್ಲಿ ಮನೆ ಕಳ್ಳತನವಾಗಿದೆ. ಮನೆಯಲ್ಲಿದ್ದವರು ಎಚ್ಚರಗೊಳ್ಳದಂತೆ ಹಿಂಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

  ಬೀರುವಿನ ಲಾಕರ್ ಒಡೆದು ಕಳ್ಳರು 130 ಗ್ರಾಂ ಚಿನ್ನ ಹಾಗೂ 20 ಸಾವಿರ ನಗದನ್ನು ದೋಚಿ ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಡಿಕೆ ರವಿಯವರ ಅಣ್ಣ ಬೇರೆ  ಮನೆಯಲ್ಲಿದ್ದಾರೆ. ಈ ಮನೆಯಲ್ಲಿ ಡಿಕೆ ರವಿಯವರ ತಾಯಿ ತಂದೆ ಮಾತ್ರ ವಾಸ ಮಾಡುತ್ತಿದ್ದಾರೆ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಇದನ್ನೂ ಓದಿ : ಕೊರೋನಾ ಭೀತಿ: ಬಾದಾಮಿಯಲ್ಲಿ ಪ್ರವಾಸಿಗರಿಲ್ಲದೆ ಆಹಾರಕ್ಕಾಗಿ ಪರದಾಡುತ್ತಿರುವ ಮಂಗಗಳು

  2015 ಮಾರ್ಚ್ 16ರಂದು ಬೆಂಗಳೂರಿನ ಮಡಿವಾಳದಲ್ಲಿರುವ ಅವರ ಫ್ಲ್ಯಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸೇವೆಯಲ್ಲಿರುವಾಗಲೇ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.

   
  First published: