Karnataka Weather Report: ಬೆಂಗಳೂರಿಗೆ ಯೆಲ್ಲೋ ಅಲರ್ಟ್, 22 ವರ್ಷದ ಬಳಿಕ ಕೋಡಿ ಬಿದ್ದ ಕೆರೆ

ರಾತ್ರಿ ಸುಮಾರು 1 ಗಂಟೆ ವೇಳೆಗೆ ಮನೆಯೊಳಗೆ ನೀರು ನುಗ್ಗಿತು. ನೋಡ ನೋಡುತ್ತಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಲು ಆರಂಭಿಸಿದ್ದರಿಂದ ಮಕ್ಕಳ ಜೊತೆ ಹೊರಗೆ ಬಂದೆವು. ಆದರೆ ಮನೆಯಲ್ಲಿರುವ ಭತ್ತ, ರಾಗಿ, ಉಪ್ಪು ಸೇರಿದಂತೆ ಎಲ್ಲಾ ಅಡುಗೆ ಸಾಮಾಗ್ರಿಗಳು ನೀರುಪಾಲಾಗಿವೆ ಎಂದು ಸ್ಥಳೀಯ ಮಹಿಳೆ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ (Bengaluru Rains) ಇಂದಿನಿಂದ ಮುಂದಿನ ನಾಲ್ಕು ದಿನ ಯೆಲ್ಲೋ ಅಲರ್ಟ್ (Yellow Alert)​ ಪ್ರಕಟಿಸಲಾಗಿದೆ. ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ವ್ಯಾಪಾರವಿಲ್ಲದೇ ರಸ್ತೆ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲಸಕ್ಕೆ ತೆರಳುವ ಮತ್ತು ಹಿಂದಿರುಗುವ ವೇಳೆ ಟ್ರಾಫಿಕ್​ನಲ್ಲಿ (Bengaluru Traffic) ಸಿಲುಕುತ್ತಿದ್ದಾರೆ.  ಇನ್ನುಳಿದಂತೆ ಬೀದರ್, ರಾಯಚೂರು, ಗದಗ, ಬೆಳಗಾವಿಯಲ್ಲಿಂದು ಮಳೆಯಾಗಲಿದೆ. ದಕ್ಷಿಣ ಒಳನಾಡು, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಇಂದು ಬೆಂಗಳೂರಿನಲ್ಲಿ (Bengalurun Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 27-19,  ಮೈಸೂರು 28-21, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 26-19, ಕೋಲಾರ 27-21, ಹಾಸನ 27-19, ಚಿತ್ರದುರ್ಗ 27-21, ಚಿಕ್ಕಮಗಳೂರು 26-18, ದಾವಣಗೆರೆ 28-21, ಶಿವಮೊಗ್ಗ 29-21, ಕೊಡಗು 24-18, ತುಮಕೂರು 27-20, ಉಡುಪಿ 29-24

ಮಂಗಳೂರು 28-24, ಉತ್ತರ ಕನ್ನಡ 29-21, ಧಾರವಾಡ 28-20, ಹಾವೇರಿ 29-21, ಹುಬ್ಬಳ್ಳಿ 29-21, ಬೆಳಗಾವಿ 28-19, ಗದಗ 29-21, ಕೊಪ್ಪಳ 29-22, ವಿಜಯಪುರ 31-22, ಬಾಗಲಕೋಟ 31-22 , ಕಲಬುರಗಿ 31-23, ಬೀದರ್ 29-22, ಯಾದಗಿರಿ 32-24, ರಾಯಚೂರ 31-23 ಮತ್ತು ಬಳ್ಳಾರಿ 30-23

Yellow alert in bengaluru Karnataka Weather Report 28 August 2022 mrq
ರಸ್ತೆ ಜಲಾವೃತ


ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರೇ ಗಮನಿಸಿ

ರಾಮನಗರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಕೆರೆಕಟ್ಟೆಗಳು ತುಂಬಿ ಕೋಡಿ ಹರಿದಿವೆ.  ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಲವೆಡೆ ದುಸ್ಥಿತಿ ಉಂಟಾಗಿದೆ. ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರು - ಮೈಸೂರು ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು, ಬೆಂಗಳೂರು - ಕನಕಪುರ - ಮೈಸೂರು ಮಾರ್ಗವಾಗಿ ಅಥವಾ ಬೆಂಗಳೂರು- ಕುಣಿಗಲ್- ಮೈಸೂರು ಮಾರ್ಗವಾಗಿ ಪ್ರಯಾಣ ಮಾಡುವಂತೆ ರಾಮನಗರ ಜಿಲ್ಲಾ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  Bengaluru Rains: ತಡರಾತ್ರಿ ಮಳೆ, ಕೆರೆಗಳಂತಾದ ರಸ್ತೆಗಳು; ಜೀವ ಕೈಯಲ್ಲಿ ಹಿಡಿದು ವಾಹನ ಸವಾರರ ಸಂಚಾರ

ನೋಡ ನೋಡುತ್ತಿದ್ದಂತೆ ಮನೆಯೊಳಗೆ ನುಗ್ಗಿದ ನೀರು

ರಾತ್ರಿ ಸುಮಾರು 1 ಗಂಟೆ ವೇಳೆಗೆ ಮನೆಯೊಳಗೆ ನೀರು ನುಗ್ಗಿತು. ನೋಡ ನೋಡುತ್ತಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಲು ಆರಂಭಿಸಿದ್ದರಿಂದ ಮಕ್ಕಳ ಜೊತೆ ಹೊರಗೆ ಬಂದೆವು. ಆದರೆ ಮನೆಯಲ್ಲಿರುವ ಭತ್ತ, ರಾಗಿ, ಉಪ್ಪು ಸೇರಿದಂತೆ ಎಲ್ಲಾ ಅಡುಗೆ ಸಾಮಾಗ್ರಿಗಳು ನೀರುಪಾಲಾಗಿವೆ ಎಂದು ಸ್ಥಳೀಯ ಮಹಿಳೆ ಹೇಳಿದ್ದಾರೆ.

22 ವರ್ಷಗಳ ಬಳಿಕ ಕೋಡಿ ಬಿದ್ದ ಕೆರೆ

ಚಾಮರಾಜ‌ನಗರ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. 22 ವರ್ಷಗಳ ಬಳಿಕ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದ ಕಥಾನಾಯಕನ ಕೆರೆ‌ಯ ಕೋಡಿ ಬಿದ್ದಿದೆ. ಕೆರೆಯ ಕೋಡಿ ಬಿದ್ದ ಪರಿಣಾಮ ನೂರಾರು ಎಕರೆ ಬಾಳೆ, ಅರಿಶಿಣ, ಜೋಳದ ಬೆಳೆ ಜಲಾವೃತಗೊಂಡಿದೆ. ಮತ್ತೆ ಮಳೆ ಹೆಚ್ಚಾದರೆ ಕೆರೆ ಒಡೆಯುವ ಆತಂಕ ಎದುರಾಗಿದೆ.

ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಮರಾಜನಗರ ಸುತ್ತುಮುತ್ತ ಹಲವು ಕೆರೆಗಳು ಕೋಡಿ ಬಿದ್ದಿವೆ.  ಬೆಳೆ ಹಾನಿಯಾಗಿದೆ. ಸಂಬಂಧಪಟ್ಟ ಸಚಿವರು ತಕ್ಷಣ ಭೇಟಿ ನೀಡಿ ಪರಿಶೀಲಿಸಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಪುಟ್ಟರಂಗಶೆಟ್ಟಿ ಆಗ್ರಹಿಸಿದ್ದಾರೆ.

ಕೋಲಾರ: ದೇವಸ್ಥಾನ ಜಲಾವೃತ

ಕೋಲಾರರದಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ಕೋಲಾರಮ್ಮ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.  ರಾಜಕಾಲುವೆ ಅಕ್ಕ ಪಕ್ಕ ತೋಟಗಳಿಗೆ ಮಳೆ ನೀರು ನುಗ್ಗಿದೆ.

ಇದನ್ನೂ ಓದಿ:  Karnataka Rains: ತಡರಾತ್ರಿ ಮಳೆಗೆ ಜನರು ಹೈರಾಣು, ಯಾದಗಿರಿಯಲ್ಲಿ ಲಾರಿ ಚಾಲಕನ ಹುಚ್ಚಾಟ

ರೈಲ್ವೆ ಸ್ಟೇಷನ್ ಪಕ್ಕದ ನಾರಾಯಣಪ್ಪ ಎಂಬವರಿಗೆ  ಸೇರಿದ ಕೊತ್ತಂಬರಿ, ಬಿಟ್ರೂಟ್ ಬೆಳೆ ನಾಶವಾಗಿದೆ. ನಗರದ ಆರ್.ಟಿ.ಒ ಕಚೇರಿ ಸುತ್ತಲೂ ಮಳೆ ನೀರು ನಿಂತಿದೆ. ಆರ್.ಟಿ.ಒ ಕಚೇರಿ ಪಕ್ಕದ ಗಣೇಶ ದೇಗುಲ ಜಲಾವೃತಗೊಂಡಿದ್ದು, ನೀರಿನಲ್ಲಿ ನಡೆದುಕೊಂಡೇ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಕೋಲಾರಮ್ಮ ಕೆರೆ ಕೋಡಿ ಹರಿದು ನೀರು ಹರಿದು ಹೋಗುತ್ತಿದೆ.
Published by:Mahmadrafik K
First published: