• Home
  • »
  • News
  • »
  • state
  • »
  • ಯಲಹಂಕದಲ್ಲಿ 500 ಕೋಟಿ ಮೌಲ್ಯದ ಭೂ ಕಬಳಿಕೆಗೆ ಯತ್ನ; 28 ಆರೋಪಿಗಳ ವಿರುದ್ಧ ಕೇಸ್ ದಾಖಲು

ಯಲಹಂಕದಲ್ಲಿ 500 ಕೋಟಿ ಮೌಲ್ಯದ ಭೂ ಕಬಳಿಕೆಗೆ ಯತ್ನ; 28 ಆರೋಪಿಗಳ ವಿರುದ್ಧ ಕೇಸ್ ದಾಖಲು

ಯಲಹಂಕದಲ್ಲಿ ಒತ್ತುವರಿಯಾದ ಸರ್ಕಾರಿ ಭೂಮಿಯ ತೆರವು ಕಾರ್ಯಾಚರಣೆ

ಯಲಹಂಕದಲ್ಲಿ ಒತ್ತುವರಿಯಾದ ಸರ್ಕಾರಿ ಭೂಮಿಯ ತೆರವು ಕಾರ್ಯಾಚರಣೆ

ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಸೇರಿ ಹಲವರು ನಖಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವಾಗ ತಹಶಿಲ್ದಾರ್ ರಘು ಮೂರ್ತಿ ಗಮನಕ್ಕೆ ಬಂದಿ‌ತ್ತು. ಹಾಗೂ ಈ ಬಗ್ಗೆ ನ್ಯೂಸ್18 ಕನ್ನಡದ ವರದಿ ಆಧರಿಸಿ ತನಿಖೆ ನಡೆಸಿದ ಜಿಲ್ಲಾಡಳಿತ ಬೇರೊಬ್ಬರಿ 28 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಗಳು ತಲೆಮರೆಸಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಯಲಹಂಕ: ನಕಲಿ ದಾಖಲೆ ಸೃಷ್ಟಿಸಿ ಸುಮಾರು 500 ಕೋಟಿ ರೂ. ಮೌಲ್ಯದ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದ 28 ಭೂಗಳ್ಳರ ಮೇಲೆ ಯಲಹಂಕ ತಹಶೀಲ್ದಾರ್ ಎನ್. ರಘುಮೂರ್ತಿ ಸಂಪಿಗೆಹಳ್ಳಿ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ. ಯಲಹಂಕ ತಾಲೂಕಿನ ಚೊಕ್ಕನಹಳ್ಳಿ ಸರ್ವೆ ನಂ.75/4, 6ರಲ್ಲಿ 21 ಎಕರೆ 19 ಗುಂಟೆ ಸರ್ಕಾರಿ ಜಮೀನಿದೆ. ಅದರಲ್ಲಿ 17ಎಕರೆ 22 ಗುಂಟೆ ಪ್ರದೇಶವನ್ನು ರಾಜಾರೆಡ್ಡಿ, ಅಶ್ವಥ್ ವೈ,ಕಧೀರ್ ಲಕ್ಕಪ್ಪ, ಮುನಿರೆಡ್ಡಿ, ಸೇರಿದಂತೆ ಇತರೆ 28 ಜನ ಈ ಜಮೀನು ನಮಗೆ ಮಂಜೂರಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಖಾತೆ ಮಾಡಿಸಿ ಜಮೀನು‌ ಕಬಳಿಸಲು ಕಳೆದ ಹತ್ತು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಸದರಿ ಜಮೀನಿಗೆ ಆರೋಪಿಗಳು ಸಲ್ಲಿಸಿದ್ದ ದಾಖಲೆಗಳು ನಕಲಿ ಎಂದು ಅನುಮಾನ ಬಂದ ಹಿನ್ನೆಲೆಯಲ್ಲಿ ಜಮೀನನ್ನು ಒತ್ತುವರಿ ತೆರವುಗೊಳಿಸಿ, ದಾಖಲೆಗಳನ್ನು ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಲ್ಲಿಂದ ನಗರ ಎಡಿಸಿಗೆ ಪರಿಶೀಲಿಸಿ ವರದಿ ನೀಡಬೇಕೆಂದು ವರದಿ ಬಂದಿತ್ತು. ಅದರನ್ವಯ ಪರಿಶೀಲನೆ ಬಳಿಕ ನಕಲಿ ದಾಖಲೆಗಳು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿತ್ತು. ನಂತರ ಜಿಲ್ಲಾಧಿಕಾರಿಗಳು ಪ್ರಕರಣ ವಿಲೇವಾರಿ ಮಾಡಿದ್ದರು. ಅದರ ಆದೇಶದಂತೆ 28 ಜನರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜಮೀನನ್ನು ವಶಕ್ಕೆ ಪಡೆಯಬೇಕೆಂದು ವರದಿ ನೀಡಿದ್ದರು. ಅದರ ಹಿನ್ನೆಲೆಯಲ್ಲಿ 28 ಆರೋಪಿಗಳ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ನ್ಯೂಸ್18ಗೆ ಮಾಹಿತಿ ನೀಡಿದ್ದಾರೆ.


ಇದೇ ಮಾರ್ಚ್ 9‌ನೇ ತಾರೀಖು ಇದೇ ಜಮೀನಿನ ಪೈಕಿ 10 ಎಕರೆ ಜಮೀನನ್ನು ಕೇವಲ 40‌ ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಇದರಲ್ಲಿ ಸಬ್ ರಿಜಿಸ್ಟ್ರಾರ್ ಸೇರಿ ಹತ್ತು ಜನರ ವಿರುದ್ದ ಪ್ರಕರಣ ದಾಖಲಿಸಿದ್ದ ತಹಶೀಲ್ದಾರ್ ರಘುಮೂರ್ತಿ ನ್ಯೂಸ್18 ಕನ್ನಡಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದರು. ಅದರ ಅನ್ವಯ ನ್ಯೂಸ್18 ಕನ್ನಡದಲ್ಲಿ ವಿಸ್ತೃತ ವರದಿ ಬಿತ್ತರಿಸಿದ್ದ ನಂತರ ಸಂಪೂರ್ಣ ಜಮೀನಿಗೆ ಬೇಲಿ ಹಾಕಿ ತನಿಖೆಗೆ ಆದೇಶ ನೀಡಲಾಯಿತು.


ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಸೇರಿ ಹಲವರು ನಖಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವಾಗ ತಹಶಿಲ್ದಾರ್ ರಘು ಮೂರ್ತಿ ಗಮನಕ್ಕೆ ಬಂದಿ‌ತ್ತು. ಹಾಗೂ ಈ ಬಗ್ಗೆ ನ್ಯೂಸ್18 ಕನ್ನಡದ ವರದಿ ಆಧರಿಸಿ ತನಿಖೆ ನಡೆಸಿದ ಜಿಲ್ಲಾಡಳಿತ ಬೇರೊಬ್ಬರಿ 28 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ  ಎರಡು ತಂಡ ರಚಿಸಲಾಗಿದ್ದು, ಸರ್ಕಾರಿ ಆಸ್ತಿಗೆ ಬೇಲಿ ಹಾಕಲಾಗಿದೆ.

Published by:Sushma Chakre
First published: