• Home
  • »
  • News
  • »
  • state
  • »
  • Birthday Celebration: ಎಸ್​ ಆರ್​ ವಿಶ್ವನಾಥ್​ ಅದ್ಧೂರಿ ಹುಟ್ಟುಹಬ್ಬ; ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ

Birthday Celebration: ಎಸ್​ ಆರ್​ ವಿಶ್ವನಾಥ್​ ಅದ್ಧೂರಿ ಹುಟ್ಟುಹಬ್ಬ; ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ

ಎಸ್​ ಆರ್​ ವಿಶ್ವನಾಥ್​

ಎಸ್​ ಆರ್​ ವಿಶ್ವನಾಥ್​

ಯಲಹಂಕದ ಖಾಸಗಿ ರೆಸಾರ್ಟ್​ನಲ್ಲಿ ಶಾಸಕ ಎಸ್. ಆರ್​ ವಿಶ್ವನಾಥ್ ಹುಟ್ಟುಹಬ್ಬ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ವಿ. ಸೋಮಣ್ಣ, ಕೆ. ಗೋಪಾಲಯ್ಯ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗಿಯಾಗಿ ಎಸ್​. ಆರ್ ವಿಶ್ವನಾಥ್​ಗೆ ಶುಭಕೋರಿದ್ರು

ಮುಂದೆ ಓದಿ ...
  • Share this:

ಬೆಂಗಳೂರು (ಜು. 24): ಯಲಹಂಕ ಶಾಸಕ (Yalahanka MLA) ಮತ್ತು ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್  (S.R Vishwanath) ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಯಲಹಂಕದ ಖಾಸಗಿ ರೆಸಾರ್ಟ್​ನಲ್ಲಿ (Private Resort)  ಅದ್ಧೂರಿ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Yediyurappa), ಸಚಿವರಾದ ವಿ. ಸೋಮಣ್ಣ, ಕೆ. ಗೋಪಾಲಯ್ಯ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗಿಯಾಗಿ ಎಸ್​. ಆರ್ ವಿಶ್ವನಾಥ್​ಗೆ ಶುಭಕೋರಿದ್ರು. ಮಾಜಿ ಸಿಎಂ ಯಡಿಯೂರಪ್ಪ ನಿವೃತ್ತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಸ್ ಆರ್ ವಿಶ್ವನಾಥ್, ಬಿಎಸ್​ವೈ ಅವರು ರಾಜಕೀಯ ನಿವೃತ್ತಿ ಘೋಷಣೆ ವಾಪಸ್ಸು ಪಡೆಯುವಂತೆ ಆಗ್ರಹಿಸಿದ್ರು.


ಯಡಿಯೂರಪ್ಪ  ನಿವೃತ್ತಿ ಘೋಷಣೆ ವಾಪಸ್​ ಪಡೆಯಲಿ


ರಾಜಕೀಯ ನಿವೃತ್ತಿಯನ್ನು ಯಡಿಯೂರಪ್ಪನವರು ವಾಪಸ್ ಪಡೆಯಬೇಕು. ಅವರ ಆಶೀರ್ವಾದ ನಮಗೆ ಯಾವತ್ತೂ ಇರಬೇಕು. ಶಿಕಾರಿಪುರ ಕ್ಷೇತ್ರವನ್ನು ವಿಜಯೇಂದ್ರಗೆ ಬಿಟ್ಟು ಕೊಟ್ಟರೂ ತೊಂದರೆ ಇಲ್ಲ. ಆದರೆ ನಾವು ರಾಜ್ಯದ ಯಾವುದೇ ಕ್ಷೇತ್ರವನ್ನು ಬೇಕಾದರೂ ಯಡಿಯೂರಪ್ಪ ಅವರಿಗಾಗಿ ಬಿಟ್ಟು ಕೊಡುತ್ತೇವೆ. ನಮ್ಮ ಪ್ರಾಣ ಒತ್ತೆ ಇಟ್ಟಾದರೂ ಗೆಲ್ಲಿಸಿಕೊಂಡು ಬರುತ್ತೇವೆ .ಹೀಗಾಗಿ ಯಡಿಯೂರಪ್ಪ ತಮ್ಮ ನಿವೃತ್ತಿ ಘೋಷಣೆ ವಾಪಸ್ ಪಡೆಯುವಂತೆ ಒತ್ತಾಯಿಸಿದ ವಿಶ್ವನಾಥ್.


ಅದೇ ನನಗೆ BSY ಕೊಡುವ ಗಿಫ್ಟ್​


ಯಡಿಯೂರಪ್ಪನವರ ರಾಜಕೀಯ ನಿವೃತ್ತಿ ಘೋಷಣೆಯಿಂದ ನನಗೆ ಅರ್ಧ ಉತ್ಸಾಹ ಕಡಿಮೆಯಾಗಿದೆ. ಅವರು ಶ್ರೀ ಕೃಷ್ಣನ ರೀತಿ,‌ ಭೀಷ್ಮನ ರೀತಿ ನಮ್ಮ ಜೊತೆ ಇರಬೇಕು. ನೀವು ಇರುವವರೆಗೂ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಬಾರದು. ನನ್ನ ಬರ್ತ್ ಡೇ ಗೆ ಯಡಿಯೂರಪ್ಪನವರು ಈ ಗಿಫ್ಟ್ ಕೊಡಬೇಕು ಎಂದು ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Basavaraj Bommai: ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ


ವಿಶ್ವನಾಥ್ ಶೀಘ್ರ ಸಚಿವ ಸಂಪುಟ ಸೇರಬೇಕು


ಇನ್ನು ಈ ಬಗ್ಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ವಿಶ್ವನಾಥ್ ಶೀಘ್ರ ಸಚಿವ ಸಂಪುಟ ಸೇರಬೇಕು, ಈ ಬಗ್ಗೆ ಸಿಎಂಗೆ ನಾನು ಒತ್ತಾಯ ಮಾಡುವವನಿದ್ದೇನೆ. ವಿಶ್ವನಾಥ್ ಅವರಿಗೆ ಮುಂದೆ ಒಳ್ಳೆಯ ಕಾಲ ಬರಲಿ ಎಂದ್ರು. ರಾಜ್ಯದಲ್ಲಿ ನೂರೈವತ್ತಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ನಲ್ಲಿ ಈಗಾಗಲೇ ಸಿಎಂ ಸ್ಥಾನಕ್ಕೆ ಕಚ್ಚಾಟ ಶುರುವಾಗಿದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ. ಯಾವುದೇ ಕಾರಣಕ್ಕೂ ಅವರಿಗೆ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ರು.


ಶಾಸಕ ವಿಶ್ವನಾಥ್ ನಿವಾಸಕ್ಕೆ ಸಿಎಂ ಭೇಟಿ


ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಇಂದು 60ನೇ ಹುಟ್ಟುಹಬ್ಬದ ಸಂಭ್ರಮ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ವಿಶ್ವನಾಥ್ ಅವರಿಗೆ ಶುಭ ಕೋರಿದ್ದಾರೆ. ದೆಹಲಿ ಪ್ರವಾಸಕ್ಕೂ ಮುನ್ನ ಯಲಹಂಕ ಹೋಬಳಿಯ ಸಿಂಗನಾಯಕನ ಹಳ್ಳಿಯ ಶಾಸಕ ವಿಶ್ವನಾಥ್ ನಿವಾಸಕ್ಕೆ ಭೇಟಿ ನೀಡಿದರು


ಇದನ್ನೂ ಓದಿ:  Vijayanand Kashapanavar: ನಟಿ ಜೊತೆಗಿನ ಫೋಟೋ ವೈರಲ್; 2ನೇ ಮದ್ವೆಯಾದ್ರಾ ಕಾಶಪ್ಪನವರ್?


ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ


ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್  ಬರ್ತ್​ ಡೇ ಹಿನ್ನೆಲೆ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಜನರರು ಭರ್ಜರಿ ಬಾಡೂಟ ಸವಿದರು. ಬಾಡೂಟದ ಮೂಲಕ ಮತಗಳ ಸೆಳೆಯಲು ಮುಂದಾದಂತಿದೆ. ಮೊನ್ನೆ ಕೆ ಆರ್ ಪೇಟೆ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಸಿಎಂ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಕ್ಷೇತ್ರದ ಜನರಿಗೆಲ್ಲಾ ಬಾಡೂಟ ಏರ್ಪಡಿಸಿದ್ರು.


ಅಂದೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು, ಬಾಡೂಟ ಹಾಕಿಸಿದ್ದ ನಾರಾಯಣಗೌಡ, ಇದೀಗ ಶಾಸಕ ಎಸ್ ಆರ್ ವಿಶ್ವನಾಥ್ ರಿಂದಲೂ ಇದೇ ರೀತಿ ಕ್ಷೇತ್ರದ ಜನರಿಗೆ ಬಾಡೂಟ ಹಾಕಿಸಿದ್ದಾರೆ. ಈ ಮೂಲಕ ಮುಂದಿನ ಚುನಾವಣಗೆ ಮತ ಕ್ರೂಢೀಕರಣಕ್ಕೆ ಶಾಸಕರು, ಸಚಿವರು ಮುಂದಾಗಿದ್ದಾರೆ

Published by:Pavana HS
First published: