• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • JDS: ಎಲೆಕ್ಷನ್ ಗೆಲ್ಲೋಕೆ ಖತರ್ನಾಕ್ ಪ್ಲಾನ್; ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಸಿಕೊಳ್ಳೋಕೆ ಮುಂದಾದ ಅಭ್ಯರ್ಥಿ!

JDS: ಎಲೆಕ್ಷನ್ ಗೆಲ್ಲೋಕೆ ಖತರ್ನಾಕ್ ಪ್ಲಾನ್; ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಸಿಕೊಳ್ಳೋಕೆ ಮುಂದಾದ ಅಭ್ಯರ್ಥಿ!

ಮುನೇಗೌಡ, ಜೆಡಿಎಸ್ ಅಭ್ಯರ್ಥಿ

ಮುನೇಗೌಡ, ಜೆಡಿಎಸ್ ಅಭ್ಯರ್ಥಿ

ಅಪಹರಣ, ಗಲಾಟೆ ಎಬ್ಬಿಸೋ ಬಗ್ಗೆ ನಡೆದ ಮಾತುಕತೆ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋ ನಿಮ್ಮ ನ್ಯೂಸ್ 18ಗೆ ಲಭ್ಯವಾಗಿದೆ.

 • News18 Kannada
 • 4-MIN READ
 • Last Updated :
 • Bangalore, India
 • Share this:

ಬೆಂಗಳೂರು: ಚುನಾವಣೆಯಲ್ಲಿ (Election) ಗೆಲ್ಲಲು ಜೆಡಿಎಸ್ ಅಭ್ಯರ್ಥಿ (JDS Candidate) ತನ್ನನ್ನೇ ತಾವೇ ಅಪಹರಣಕ್ಕೆ ಮಾಡಿಸಿಕೊಳ್ಳಲು (Kidnap Plan) ಮುಂದಾಗಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ. ಯಲಹಂಕ (Yelahanka Assembly Constituency) ಜೆಡಿಎಸ್​ ಅಭ್ಯರ್ಥಿ ಮುನೇಗೌಡ (Munegowda, JDS Candidate) ಕಿಡ್ನ್ಯಾಪ್ ಸ್ಕೆಚ್​ ಬಹಿರಂಗಗೊಂಡಿದೆ. ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಮುನೇಗೌಡ ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾಗಿದ್ದರು. ತಾನು ಕಿಡ್ನ್ಯಾಪ್ ಆಗಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ (Vishwanath, BJP Candidate) ಮೇಲೆ ಹಾಕಿ ಯಲಹಂಕ ಕ್ಷೇತ್ರದಲ್ಲಿ ಗಲಾಟೆ ಮಾಡಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.


ಅಪಹರಣ, ಗಲಾಟೆ ಎಬ್ಬಿಸೋ ಬಗ್ಗೆ ನಡೆದ ಮಾತುಕತೆ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋ ನಿಮ್ಮ ನ್ಯೂಸ್ 18ಗೆ ಲಭ್ಯವಾಗಿದೆ.


JDS ಅಭ್ಯರ್ಥಿ ಕಿಡ್ನ್ಯಾಪ್ ಸ್ಕೆಚ್ 


ಮುನೇಗೌಡ, JDS ಅಭ್ಯರ್ಥಿ:  ನನ್ ಬಾಮೈದನೇ ಕಿಡ್ನಾಪ್ ಪ್ಲಾನ್ ಮಾಡಿದ್ದ. ಅವನೂ ಎಲ್ಲಕ್ಕೂ ರೆಡಿ ಆಗಿದ್ದಾನೆ. ಹೊಡೆದಂಗೆ ಮಾಡ್ತೀವಿ ಅಂತ ಪ್ಲಾನ್ ಮಾಡಿದ್ದಾನೆ.


ಅಪರಿಚಿತ: ಅವನಿಗೆ ಸ್ಕೆಚ್ ಹಾಕೋಕೆ ಹೇಳಿ. ಬೆಸ್ಟ್ ಹೇಳ್ತೀನಿ ಕೇಳಿ. ನಾನು ಮಾಡಿಸ್ತೀನಿ. ನಿಮ್ ಮನೆಯವರು ಪ್ರಚಾರಕ್ಕೆ ಹೋಗಲಿ. ಹುಡುಗರಿಗೆ ಹೇಳಿ ನಿಮ್ಮನ್ನು ಕಿಡ್ನಾಪ್ ಮಾಡಿಸೋಣ


ಮುನೇಗೌಡ, JDS ಅಭ್ಯರ್ಥಿ:  ಒಂದು ಗಲಾಟೆ ಆಗಲಿ ಬಿಡಿ. ಒಂದ್ ಹೋದ್ರೆ ಹೋಗಲಿ.


ಅಪರಿಚಿತ: ನಮ್ಮವರು ಬೈದಿಲ್ಲ ಅಂದ್ರೂ ಆರೆಸ್ಸೆಸ್ ಹುಡುಗರೇ ಬಂದು ನಿಮ್ಮನ್ನು ಬಯ್ಯಲಿ. ನಮ್ಮವರು ಸೈಲೆಂಟಾಗಿ ನಿಲ್ಲಲಿ. ಕತ್ತರಿಸಿ ಹಾಕಿಬಿಡ್ತೀನಿ ಅಂತ ಬಯ್ಯಲಿ..


ಅಪರಿಚಿತ: ವಿಶ್ವನಾಥ್ ಮೋಸ ಮಾಡಿದ್ದ ಅಂತೆಲ್ಲಾ ಹೇಳೋಣ.


ಮುನೇಗೌಡ, JDS ಅಭ್ಯರ್ಥಿ: ರೆಡಿ ಮಾಡಿ ಹೊಡೆದು ಬಿಸಾಕೋಣ


ಅಪರಿಚಿತ: ಟಿವಿಯವರಿಗೂ ಹೇಳೋಣ.. ವಿಶ್ವನಾಥ್ ಹೀಗೆ ಮಾಡಿದ್ದ ಅಂತ ಹೇಳೋಣ. ಒಂದು ಇಂಟರ್​​ವ್ಯೂ ಮಾಡಿ ಕಳಿಸೋಣ.


ವಿಶ್ವನಾಥ್ ಪ್ರತಿಕ್ರಿಯೆ


ಈ ಬಗ್ಗೆ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಚುನಾವಣೆ ಪ್ರಚಾರ ಮುಗಿಸಿ ಬರುವಾಗ ಮುನೇಗೌಡರು ಸಂಚು ಮಾಡಿರುವುದು ಗೊತ್ತಾಗಿದೆ . ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ಚರಣ್ ಗೌಡ ಸಂಚು ಮಾಡಿರೋದು ನೋಡಿದೆ. 4-5 ನೇ ತಾರೀಕಿನಂದು ಅವರನ್ನೇ ಅವರು ಕಿಡ್ನ್ಯಾಪ್ ಮಾಡಿ ವಿಶ್ವನಾಥ್ ಅವರೇ ಕಿಡ್ನ್ಯಾಪ್ ಮಾಡಿದ್ದಾರೆಂದು ಆರೋಪಿಸೋಕೆ ಪ್ಲಾನ್ ಮಾಡಿದ್ದರು ಎಂದು ಹೇಳಿದರು.
ಸಿಂಗನಾಯಕನಹಳ್ಳಿ ಹೋಗುವಾಗ ಅವರ ಮೇಲೆ ಅವರೇ ಹಲ್ಲೆ ಮಾಡಿಕೊಂಡು ನನ್ನ ಮೇಲೆ ಎಫ್​​ಐಆರ್ ಮಾಡುವ ತರ ಪ್ಲಾನ್ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಲು ಮನವಿ ಮಾಡಿದ್ದೇನೆ. ನನ್ನ ಗ್ರಹಚಾರಕ್ಕೆ ಪ್ರತಿ ಸಲನೂ ಹೀಗೆ ಆಗ್ತಿದೆ. ಲೋಕಾಯುಕ್ತ ದಾಳಿ ಆಯ್ತು , ಶೂಟೌಟ್ ಆಗೋದು ಆಗ್ತಾನೇ ಇದೆ. ನಾನು ಕೂಡ ಮಂಪರು ಪರೀಕ್ಷೇ ಮಾಡಿಸಿ ಬೇಕಿದ್ರೆ ಅಂದಿದ್ದೆ. ಅದರಿಂದಲೂ ಬಚಾವ್ ಆಗಿದ್ದೇನೆ ಎಂದರು.


ಇದನ್ನೂ ಓದಿ: Narendra Modi: ಮಕ್ಕಳೊಂದಿಗೆ ಮಗುವಾದ ನರೇಂದ್ರ ಮೋದಿ! ಪ್ರಧಾನಿ ಜೊತೆ ಚಿಣ್ಣರ ಆಟ!

top videos


  ಈ ತರಹ ಗಲಾಟೆಗಳನ್ನ ಸೃಷ್ಟಿ ಮಾಡೋರು ಮಾಡ್ತಾನೆ ಇದ್ದಾರೆ, ನಾನು ಆ ಅಭ್ಯರ್ಥಿಯನ್ನ ನಾನು ನೋಡಿದ್ದು ಒಂದೇ ಬಾರಿ ಮಾತ್ರ. ಆದ್ರೆ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಾರೆ ಗೊತ್ತಾಗ್ತಿಲ್ಲ ಎಂದು ಬೇಸರ ಹೊರಹಾಕಿದರು.

  First published: