ಯಲಹಂಕ: ಕೂಡಿಟ್ಟ ಚೀಟಿ ಹಣ ಕೇಳಿದ್ದಕ್ಕೆ ಲಾಂಗು ಮಚ್ಚಿನಿಂದ ಮಾರಣಾಂತಿಕ ಹಲ್ಲೆ

 ಪುಂಡಾಟವನ್ನೇ  ಮೈಗೂಡಿಸಿ ಕೊಂಡಿರುವ ರಂಗನಾಥ್ ಮತ್ತು ಸುರೇಶ್ ಸಹೋದರರಿಗೆ ಜೊತೆಯಾಗಿರುವ ಜಾವಿದ್ ಮತ್ತಿತರರು ದಿಬ್ಬೂರು ಸರ್ಕಲ್ ನಲ್ಲಿ ಕಛೇರಿಯೊಂದನ್ನು ಇಟ್ಟುಕೊಂಡು ಅದರಲ್ಲಿ ಚೀಟಿ ದಂಧೆ ನಡೆಸುತ್ತಾರೆ. ಚೀಟಿದಂಧೆಯಲ್ಲಿ ಪಳಗಿರುವ ಇವರು ಚೀಟಿ ಹಣ ಕೇಳಿದವರ ಮೇಲೆ ಹಲ್ಲೆ ಮಾಡಿ ಬೆದರಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ‌ ಎನ್ನಲಾಗುತ್ತಿದೆ.

news18-kannada
Updated:June 30, 2020, 2:28 PM IST
ಯಲಹಂಕ: ಕೂಡಿಟ್ಟ ಚೀಟಿ ಹಣ ಕೇಳಿದ್ದಕ್ಕೆ ಲಾಂಗು ಮಚ್ಚಿನಿಂದ ಮಾರಣಾಂತಿಕ ಹಲ್ಲೆ
ಸಾಂದರ್ಭಿಕ ಚಿತ್ರ
  • Share this:
ಯಲಹಂಕ: ಕೂಡಿಟ್ಟ ಚೀಟಿ ಹಣ ಕೇಳಿದ್ದಕ್ಕೆ ಇಬ್ಬರ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಯಲಹಂಕದ ಬುಡಮನಹಳ್ಳಿಯಲ್ಲಿ ನಡೆದಿದೆ.

ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಬುಡಮನಹಳ್ಳಿಯ ರಂಗನಾಥ ಎಂಬ ವ್ಯಕ್ತಿಯ ಬಳಿ ಪಕ್ಕದ ಶಾನುಭೋಗನಹಳ್ಳಿ ಗ್ರಾಮದ ಉಮೇಶ್ ಚೀಟಿ ಹಾಕಿದ್ದರು. ಚೀಟಿ ಮುಗಿದಿದ್ದು, ಆ ಹಣವನ್ನು ನೀಡುವಂತೆ ಉಮೇಶ್ ಆಗಾಗ್ಗೆ ರಂಗನಾಥ್ ಬಳಿ ಕೇಳಿದ್ದಾರೆ. ಆದರೆ, ರಂಗನಾಥ್‌ ಹಣ ನೀಡಿರಲಿಲ್ಲ. ಹೀಗಾಗಿ ಒಂದು ದಿನ ಆತನಿಗೆ ಫೋನ್ ಮಾಡಿದ್ದ ಉಮೇಶ್ ಹಣ ನೀಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರಿಂದ ಕುಪಿತೊಂಡ ರಂಗನಾಥ ಎಂಬವರು ಹಣ ನೀಡುವುದಾಗಿ ಕರೆದು 10ಕ್ಕೂ ಹೆಚ್ಚು ಜನರಿರುವ ಪುಂಡರ ಗುಂಪನ್ನು ಕಟ್ಟಿಕೊಂಡು ಉಮೇಶ್‌ ಹಾಗೂ ಅವರ ಜೊತೆಗಿದ್ದ ಚಂದ್ರಶೇಖರ್‌ ಎಂಬವರ ಮೇಲೆ  ಏಕಾಏಕಿ ಲಾಂಗು ಮಚ್ಚು ಬೀಸಿ ಎಸ್ಕೇಪ್ ಆಗಿದ್ದಾರೆ. ‌ಅಕ್ಕಪಕ್ಕದ ಹಳ್ಳಿಗಳ ಜನಕ್ಕೆ ಹೆದರಿಸೋದು, ಕುಡಿದು ಗಲಾಟೆ ಮಾಡೋದು ಈ ಗುಂಪಿನ ನಿತ್ಯ ಕಾಯಕ ಎಂದು ಆರೋಪಿಸಲಾಗಿದೆ.

ಪುಂಡಾಟವನ್ನೇ  ಮೈಗೂಡಿಸಿ ಕೊಂಡಿರುವ ರಂಗನಾಥ್ ಮತ್ತು ಸುರೇಶ್ ಸಹೋದರರಿಗೆ ಜೊತೆಯಾಗಿರುವ ಜಾವಿದ್ ಮತ್ತಿತರರು ದಿಬ್ಬೂರು ಸರ್ಕಲ್ ನಲ್ಲಿ ಕಛೇರಿಯೊಂದನ್ನು ಇಟ್ಟುಕೊಂಡು ಅದರಲ್ಲಿ ಚೀಟಿ ದಂಧೆ ನಡೆಸುತ್ತಾರೆ. ಚೀಟಿದಂಧೆಯಲ್ಲಿ ಪಳಗಿರುವ ಇವರು ಚೀಟಿ ಹಣ ಕೇಳಿದವರ ಮೇಲೆ ಹಲ್ಲೆ ಮಾಡಿ ಬೆದರಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ‌ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕೊರೋನಾ ತಡೆ ಸಂಬಂಧ ಖಾಸಗಿ ವೈದ್ಯಕೀಯ ಕಾಲೇಜು ಮುಖ್ಯಸ್ಥರ ಜತೆ ಸಿಎಂ ಸಭೆ: ಇಲ್ಲಿವೆ ಮುಖ್ಯಾಂಶಗಳು

ರಂಗನಾಥ ಗ್ಯಾಂಗ್‌ನಿಂದ ತೀವ್ರ ಹಲ್ಲೆಗೆ ಒಳಗಾಗಿರುವ ಉಮೇಶ್‌ ಹಾಗೂ ಚಂದ್ರಶೇಖರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading