HOME » NEWS » State » YEDIYURAPPA WILL BE CM FOR THE NEXT TWO AND A HALF YEARS SAYS DCM GOVIND KARJOL RBK HK

ಸಿದ್ದರಾಮಯ್ಯ ಸುಳ್ಳು ಭವಿಷ್ಯಗಾರರು - ಇನ್ನೂ ಎರಡೂವರೆ ವರ್ಷ ಬಿಎಸ್​ವೈ ಸಿಎಂ ಆಗಿರುತ್ತಾರೆ: ಡಿಸಿಎಂ ಗೋವಿಂದ ಕಾರಜೋಳ

ನಮ್ಮ ರಾಷ್ಟ್ರೀಯ ನಾಯಕರಾದ ಜೆ ಪಿ ನಡ್ಡಾ. ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಸಹ ಸಿಎಂ ಯಡಿಯೂರಪ್ಪನವರು ಉತ್ತಮ ಆಡಳಿತ ನಡೆಸಿದ್ದಾರೆಂದು ಹೇಳಿದ್ದಾರೆ. ಕೊರೋನಾ ಸಂದರ್ಭದಲ್ಲೂ ಒಳ್ಳೆಯ ಕೆಲಸ ಮಾಡಿದ್ದಾರೆ

news18-kannada
Updated:January 8, 2021, 3:02 PM IST
ಸಿದ್ದರಾಮಯ್ಯ ಸುಳ್ಳು ಭವಿಷ್ಯಗಾರರು - ಇನ್ನೂ ಎರಡೂವರೆ ವರ್ಷ ಬಿಎಸ್​ವೈ ಸಿಎಂ ಆಗಿರುತ್ತಾರೆ: ಡಿಸಿಎಂ ಗೋವಿಂದ ಕಾರಜೋಳ
ಡಿಸಿಎಂ ಗೋವಿಂದ ಕಾರಜೋಳ
  • Share this:
ಬಾಗಲಕೋಟೆ(ಜನವರಿ. 08): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭವಿಷ್ಯ ಯಾವತ್ತೂ ಸತ್ಯವಾಗಿಲ್ಲ. ಅವರು ಸುಳ್ಳು ಭವಿಷ್ಯಗಾರರು. ಅವರ ಭವಿಷ್ಯ ಸತ್ಯ ಆಗಲಿಕ್ಕೆ ಸಾಧ್ಯವಿಲ್ಲ. ನಾನು ಪದೇ ಪದೇ ಹೇಳುತ್ತಿದ್ದೇನೆ. ಮುಂದಿನ ಎರಡೂವರೆ ವರ್ಷ ಅವಧಿಗೆ ಬಿಎಸ್ ವೈ ಅವರೆ ಸಿಎಂ ಆಗಿ ಇರುತ್ತಾರೆ. ಬಿಎಸ್​​ವೈ ಅವರ ನೇತೃತ್ವದಲ್ಲೇ ಸರ್ಕಾರ ನಡೆಯುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ, ಅವರು, ಈಗಾಗಲೇ ನಮ್ಮ ರಾಷ್ಟ್ರೀಯ ನಾಯಕರಾದ ಜೆ ಪಿ ನಡ್ಡಾ. ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಸಹ ಸಿಎಂ ಯಡಿಯೂರಪ್ಪನವರು ಉತ್ತಮ ಆಡಳಿತ ನಡೆಸಿದ್ದಾರೆಂದು ಹೇಳಿದ್ದಾರೆ. ಕೊರೋನಾ ಸಂದರ್ಭದಲ್ಲೂ ಒಳ್ಳೆಯ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕಡೆಗೆ ಒತ್ತು ಕೊಟ್ಟಿದ್ದಾರೆ. ಕೊರೋನಾ ಸಂಕಷ್ಟ, ಆರ್ಥಿಕ ಹಿಂಜರಿಕೆಯಲ್ಲೂ ಉತ್ತಮ ಕೆಲಸ, ಜೊತೆಗೆ ಪ್ರವಾಹ ಹಾಗೂ ಬರ ಸರಿಯಾಗಿ ನಿಯಂತ್ರಣ ಮಾಡಿದ್ದು, ದೇಶದಲ್ಲಿ ಅತ್ಯುತ್ತಮ ಸರ್ಕಾರ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ನಲ್ಲಿ ಬಹಳ ಜನರಿದ್ದಾರೆಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕೊಹೊಳಿ ಹೇಳಿಕೆಗೆ ತಿರುಗೇಟು ನೀಡಿ, ಕಾಂಗ್ರೆಸ್ ನವರು ಕ್ಯೂ ಹಚ್ಚಲಿಕ್ಕೆ ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಅಳಿವಿನಂಚಿನಲ್ಲಿದೆ, ನಶಿಸಿ ಹೋಗಿದೆ. ಕಾಂಗ್ರೆಸ್ ಲೀಡರ್ ಲೆಸ್ಸ್ ಪಾರ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಅವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನರೇಂದ್ರ ಮೋದಿಯವರೇ ಇನ್ನೂ ಹತ್ತು ವರ್ಷ ಆಡಳಿತ ನಡೆಸಲಿದ್ದಾರೆ ಎಂದರು.

ಇನ್ನು ಇವತ್ತು ರಾಜ್ಯಾದ್ಯಂತ ಕೋವಿಡ್ ಲಸಿಕೆ ಡ್ರೈ ರನ್ ಹಿನ್ನೆಲೆಯಲ್ಲಿ , ಮಾತನಾಡಿದ ಕಾರಜೋಳ, ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಉತ್ತಮ ಗುಣಮಟ್ಟದ ಕೋವಿಡ್ -19 ಲಸಿಕೆ ತಯಾರಾಗಿದ್ದು, ಇಡೀ ದೇಶಕ್ಕೆ ಹಂಚಿಕೆ, ಬಿಡುಗಡೆ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಜನ ಭಯಭೀತರಾಗಿ ವ್ಯಾಪಾರ ವಹಿವಾಟು ನಿಲ್ಲಿಸಿದ್ದು, ನೋವಿನ ಸಂಗತಿಯಾಗಿತ್ತು. ದೇಶದ ಜನತೆ ಲಸಿಕೆಯ ಉಪಯೋಗ ಪಡೆದು ಕೊರೋನಾ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ಎಲ್ಲಾ ಕೆರೆಗಳ ಹೂಳೆತ್ತುವ ಗುರಿ ಇಡಿ: ಅಧಿಕಾರಿಗಳಿಗೆ ಬೆಂ. ಗ್ರಾಮಾಂತರ ಜಿ.ಪಂ. ಅಧ್ಯಕ್ಷ ಸೂಚನೆ

ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯದ ಸಿಎಂ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ಲಸಿಕೆ ತಯಾರಿಕಾ ಸಂಸ್ಥೆಗಳೊಂದಿಗೆ ಪ್ರಧಾನಿ ನಿರಂತರ ಸಂಪರ್ಕದಲ್ಲಿದ್ದರು. ಲಸಿಕೆ ತಯಾರಾಗಿದ್ದು,ಎಲ್ಲಾ ರಾಜ್ಯಗಳಿಗೆ ಹಂಚಿಕೆಯಾಗಲಿದ್ದು, ಕೆಲವೇ ಕ್ಷಣ,ಗಂಟೆಯಲ್ಲಿ ಲಸಿಕೆ ಬರಲಿದೆ. ನಾನು ಯಾವಾಗ ಲಸಿಕೆ ಬರುತ್ತೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಯಾವ ಯಾವ ದಿನಾಂಕದಂದು ಬಿಡುಗಡೆ ಎಂದು ಘೋಷಣೆ ಮಾಡುತ್ತಾರೆ ಎಂದರು.

ಲಿಂಗಾಯತ್ ಪಂಚಮಸಾಲಿ ಸಮಾಜ 2ಎ ಗೆ ಸೇರ್ಪಡೆಗೆ ಸರ್ಕಾರಕ್ಕೆ ಗಡುವುಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಕಾರಜೋಳ, ಯಾವುದೇ ಗಡುವು ಹಾಗೂ ಬೇಡಿಕೆ ಈಡೇರಿಸುವುದು ಸಂವಿಧಾನ ಚೌಕಟ್ಟಿನಲ್ಲಿ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಗಳು ಕಾನೂನು ಸಚಿವರು, ಹಾಗೂ ಸಂಬಂಧಪಟ್ಟ ಇಲಾಖೆಯವರು ಅದರ ಕಡೆಗೆ ಗಮನಹರಿಸುತ್ತಾರೆ ಎಂದು ತಿಳಿಸಿದರು.
Published by: G Hareeshkumar
First published: January 8, 2021, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories