BS Yediyurappa: ಇವತ್ತಿನಿಂದ ನಿಮ್ಮಾಟವೆಲ್ಲಾ ನಿಲ್ಲುತ್ತಪ್ಪ, ಸಿದ್ದರಾಮಯ್ಯ, ಡಿಕೆಶಿಗೆ ಬಿಎಸ್​​ವೈ ಟಾಂಗ್!

ಇಂದು ಹೈಕಮಾಂಡ್ ಬಿಎಸ್​​ವೈಗೆ ರಾಷ್ಟ್ರಮಟ್ಟದ ಸಮಿತಿಯಲ್ಲಿ ಸ್ಥಾನ ನೀಡಿದೆ. ಇದು ರಾಜ್ಯ ಬಿಜೆಪಿಗೆ ಸಂತಸ ತಂದಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಬಿಎಸ್​ವೈ ಸಂತಸ ಹಂಚಿಕೊಂಡರು. ಜೊತೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಬಿಎಸ್​​ವೈ-ಬೊಮ್ಮಾಯಿ

ಬಿಎಸ್​​ವೈ-ಬೊಮ್ಮಾಯಿ

  • Share this:
ಮಾಜಿ ಸಿಎಂ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್​ ರಾಷ್ಟ್ರಮಟ್ಟದ ಸಮಿತಿಯಲ್ಲಿ ಸ್ಥಾನಮಾನ ನೀಡಿದ್ದು ಯಡಿಯೂರಪ್ಪ (BS Yediyurappa) ಸಂತಸಗೊಂಡಿದ್ದಾರೆ. ರಾಜ್ಯ ಬಿಜೆಪಿ ಫುಲ್ ಖುಷ್ ಆಗಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ಕಾಂಗ್ರೆಸ್ (Congress) ವಿರುದ್ಧ ಆಕ್ರೋಶ ಹೊರಹಾಕಿದ್ರು. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (Dkshi) ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿದ್ರು. ಜೊತೆಗೆ ಈ ಬಾರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಎಲೆಕ್ಷನ್​ಗೆ (Election) ಹೋಗ್ತೇವೆ ಅಂತಾನೂ ಘೋಷಿಸಿದರು. ಇದೇ ವೇಳೆ ಯಡಿಯೂರಪ್ಪರಿಗೆ ಸಿಎಂ ಬೊಮ್ಮಾಯಿ ಅಭಿನಂದಿಸಿದರು. ಜೊತೆಗೆ ಸಂಪುಟ (Cabinet) ಪುನರ್​ರಚನೆ ಬಗ್ಗೆಯೂ ಸುಳಿವು ಕೊಟ್ಟರು.

ಇಂದು ಹೈಕಮಾಂಡ್​​ ಬಿಎಸ್​ವೈಗೆ ರಾಷ್ಟ್ರಮಟ್ಟದ ಸಮಿತಿಯಲ್ಲಿ ಸ್ಥಾನ ನೀಡಿದೆ. ಇದು ರಾಜ್ಯ ಬಿಜೆಪಿಗೆ ಸಂತಸ ತಂದಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಬಿಎಸ್​ವೈ ಸಂತಸ ಹಂಚಿಕೊಂಡರು. ಜೊತೆಗೆ ಕಾಂಗ್ರೆಸ್​ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಕೆಲವರು ಸಿಎಂ ಆಗೋಕೆ ಫೈಟ್​ ಮಾಡ್ತಿದ್ದಾರೆ

ಕೆಲವರು ಯಾರೋ ಸಿಎಂ ಆಗೋಕೆ ಫೈಟ್ ಮಾಡ್ತಿದ್ದಾರೆ. ಅವರ ಆಸೆ ಯಾವ ರೀತಿ ನಿರಾಸೆ ಆಗುತ್ತೆ ಅಂತಾ‌ ನೀವೇ ನೋಡಿ ಅಂತಾ ಯಡಿಯೂರಪ್ಪ ಹೇಳಿದ್ರು. ಕರ್ನಾಟಕದಲ್ಲಿ 140 ಸ್ಥಾನ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ನಿಶ್ಚಿತ. ಸಿಎಂ ಹುದ್ದೆಗೆ ಕಿತ್ತಾಡ್ತಿರೋ ಕಾಂಗ್ರೆಸ್​ ನಾಯಕರಿಗೆ ಟಾಂಗ್ ಕೊಟ್ರು. ಇವತ್ತಿಂದ ಅದೆಲ್ಲಾ ನಿಲ್ಲುತ್ತಲ್ಲಪ್ಪ ಅಂತಾ ಸಿದ್ದರಾಮಯ್ಯ, ಡಿಕೆಶಿಗೆ ಮಾತಿನಲ್ಲೇ ಗುದ್ದು ಕೊಟ್ರು.

Yeddyurappa outraged against Siddaramaiah DKSHI CM hinted at Expansion of the cabinet
ಯಡಿಯೂರಪ್ಪಗೆ ಬೊಮ್ಮಾಯಿ ಅಭಿನಂದನೆ


ಇದನ್ನೂ ಓದಿ: ರಾಜಕೀಯ ನಿವೃತ್ತಿ ಎಂದಿಗೂ ಬಯಸಿಲ್ಲ, ಕೈಕಾಲು ಗಟ್ಟಿ ಇರೋವರೆಗೆ ಕೆಲಸ ಮಾಡ್ತೀನಿ ಎಂದ ರಾಜಾಹುಲಿ!

ಸಾಮೂಹಿಕವಾಗಿ ರಾಜ್ಯ ಪ್ರವಾಸ

ಯಡಿಯೂರಪ್ಪ ಒಬ್ಬನೇ ಅಲ್ಲ, ಎಲ್ಲರೂ ಸಾಮೂಹಿಕವಾಗಿ ಪ್ರವಾಸ ಮಾಡ್ತೀವಿ ಅಂತಾ ಯಡಿಯೂರಪ್ಪ ಘೋಷಿಸಿದರು. ಯಾರೋ ಒಂದಿಬ್ಬರಿಂದ ಪಕ್ಷ ಗೆಲ್ಲಿಸಲು ಆಗಲ್ಲ. ಒಂದೊಂದು ತಿಂಗಳಿಗೆ ಇನ್ಮೇಲೆ ಪ್ರಧಾನಿಗಳು ಕರ್ನಾಟಕಕ್ಕೆ ಬರ್ತಾರೆ. ಮುಂದಿನ ರಾಜ್ಯ ಪ್ರವಾಸದಿಂದ ರಾಜ್ಯದಲ್ಲಿ ಯಾವ ರೀತಿ ಬದಲಾವಣೆ ಆಗುತ್ತೆ ನೋಡ್ತೀರಿ ಅಂತಾ ಹೇಳಿದ್ರು.

ಇದನ್ನೂ ಓದಿ: ಅಪ್ಪು ಸಮಾಧಿ ಸ್ಥಳ ಅಭಿವೃದ್ಧಿಗೆ ಚಿಂತನೆ; ಸಿಎಂ ಭೇಟಿಯಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘಣ್ಣ ಚರ್ಚೆ

ಬೊಮ್ಮಾಯಿ ನೇತೃತ್ವದಲ್ಲಿ ಎಲೆಕ್ಷನ್

ಸಿಎಂ ಬೊಮ್ಮಾಯಿ ನೇತೃತ್ವದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಬೊಮ್ಮಾಯಿ ನಾಯಕತ್ವ, ಬಿಎಸ್​​ವೈ ನಾಯಕತ್ವ, ಸದಾನಂದ ಗೌಡ ನಾಯಕತ್ವ ಅಂದರೆ ಅದೆಲ್ಲವೂ ಒಂದೇ. ಮುಖ್ಯಮಂತ್ರಿ ಆಗಿ ಬೊಮ್ಮಾಯಿ ಇರುವುದರಿಂದ ಅವರನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಅಂತಾ ಯಡಿಯೂರಪ್ಪ ಘೋಷಿಸಿದರು.

ಬಿಎಸ್​ವೈಗೆ ಹುದ್ದೆ ಸಿಕ್ಕಿದ್ದಕ್ಕೆ ವಿಜಯೇಂದ್ರ ಸಂತಸ

ಯಡಿಯೂರಪ್ಪರಿಗೆ ಉನ್ನತ ಹುದ್ದೆ ಸಿಕ್ಕಿರೋದಕ್ಕೆ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತೋಷ ಹಂಚಿಕೊಂಡರು. ಯಡಿಯೂರಪ್ಪನವರ ಪಕ್ಷ ನಿಷ್ಠೆ ನೋಡಿ ಮಹತ್ವದ ಹುದ್ದೆ ಕೊಟ್ಟಿದ್ದಾರೆ. ಬಿಎಸ್​​​ವೈ ಬಿಜೆಪಿ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡುತ್ತಾರೆ ಅಂದ್ರು.

ಅಧಿಕಾರಕ್ಕೆ ಬರೋದು ಶತಸಿದ್ಧ- ಸಿಎಂ

ಯಡಿಯೂರಪ್ಪರ ಮಾರ್ಗದರ್ಶನದಲ್ಲೇ ಮುಂದೆ ಹೋಗ್ತೀವಿ ಅಂತಾ ಹೇಳಿದ್ದೆ. ಅದೇ ರೀತಿ ಮುಂದೆ ಕೂಡ ಹೋಗ್ತೀವಿ. ದಕ್ಷಿಣ ಭಾರತದ ನಾಯಕತ್ವವನ್ನು ಹೈಕಮಾಂಡ್ ಯಡಿಯೂರಪ್ಪನವರಿಗೆ ಕೊಟ್ಟಿದೆ. ಇದರ ಒಟ್ಟು ಪರಿಣಾಮ 2023ಕ್ಕೆ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರೋದು ಶತಸಿದ್ದ ಅಂದ್ರು.

ಸಂಪುಟ ಪುನಾರಚನೆ ಸುಳಿವು ನೀಡಿದ ಬೊಮ್ಮಾಯಿ

ಸಚಿವ ಸಂಪುಟ ಹಾಗೂ ಪಕ್ಷದಲ್ಲಿ ಬದಲಾವಣೆ ವಿಚಾರವಾಗಿ ಬೊಮ್ಮಾಯಿ ಮಾತನಾಡಿದ್ರು. ಬೇರೆ ಬೇರೆ ಸನ್ನಿವೇಶದಲ್ಲಿ ಪಕ್ಷ ಸೂಕ್ತ ನಿರ್ಣಯ ಮಾಡಲಿದೆ. ಅನುಭವ, ಅವಕಾಶದ ಆಧಾರದ ಮೇಲೆ ಒಂದು ಒಳ್ಳೆಯ ನಿರ್ಣಯ ಮಾಡ್ತೀವಿ ಅಂತಾ ಸಿಎಂ ಸಂಪುಟ ಪುನಾರಚನೆಯ ಸುಳಿವು ಕೊಟ್ರು. ಗಣೇಶೋತ್ಸವ ಮುಗಿದ ಮೇಲೆ ಜನೋತ್ಸವ ಮಾಡಲು ನಿರ್ಧಾರ ಮಾಡಲಾಗಿದೆ ಅಂದ್ರು.
Published by:Thara Kemmara
First published: