• Home
  • »
  • News
  • »
  • state
  • »
  • ಬೆಳಗಾವಿ: ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಲೋಕಾರ್ಪಣೆ ಮಾಡಿದ ಸಿಎಂ ಬಿಎಸ್​​ವೈ

ಬೆಳಗಾವಿ: ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಲೋಕಾರ್ಪಣೆ ಮಾಡಿದ ಸಿಎಂ ಬಿಎಸ್​​ವೈ

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ

ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಇದರ ಕೆಲಸಗಳನ್ನು ಶರವೇಗದ ರೀತಿಯಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

  • Share this:

ಬೆಳಗಾವಿ(ಜ.29): ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಮಾರ್ಟ್ ಸಿಟಿ‌ ಯೋಜನೆಯಡಿ 76.80 ಕೋಟಿ ರೂಪಾಯಿ ಮೊತ್ತದಲ್ಲಿ ಸ್ಥಾಪಿಸಲಾದ ರಾಜ್ಯದ ಮೊದಲ ಇಂಟಿಗ್ರೇಟೆಡ್​​ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್​​ಗೆ ಮುಖ್ಯಮಂತ್ರಿ ಬಿ‌ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಇಂದು ಯಡಿಯೂರಪ್ಪನವರೇ ಖುದ್ದು ಪೂಜೆ ಸಲ್ಲಿಸುವ ಮೂಲಕ ಸೆಂಟಲ್ ಲೋಕಾರ್ಪಣೆ ಗೊಳಿಸಿದ್ದಾರೆ. ಇದಾದ ನಂತರ ಸುರಕ್ಷತೆ ಮತ್ತು ಕಣ್ಗಾವಲಿಗೆ ನೆರವಾಗುವ ಈ ಸೆಂಟರ್​​ನ ಕಾರ್ಯವೈಖರಿಯ ಪ್ರಾತ್ಯಕ್ಷಿಕೆನ್ನು ಸಿಎಂ ವೀಕ್ಷಿಸಿದರು. 


ಹಾಗೆಯೇ ಮಹಾನಗರ ಪಾಲಿಕೆಯ ಅಶೋಕ‌ ನಗರದಲ್ಲಿರುವ ಈಜುಕೊಳ ಹಾಗೂ ವ್ಯಾಯಾಮಶಾಲೆಗೆ ಚಾಲನೆ ನೀಡಿದರು. ಇದೇ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಭವನ(ಕಚೇರಿ ಸಂಕೀರ್ಣ) ಮತ್ತು ಆಂಗ್ಲ ಮಾಧ್ಯಮ ಶಾಲೆಯನ್ನು ಯಡಿಯೂರಪ್ಪ ಉದ್ಘಾಟಿಸಿದರು.


ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಇದರ ಕೆಲಸಗಳನ್ನು ಶರವೇಗದ ರೀತಿಯಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.


ಇದನ್ನೂ ಓದಿ: ಸಚಿವ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡುವಂತೆ ವಾಲ್ಮೀಕಿ ಸಮಾಜ ಒತ್ತಾಯ: ನಾಳೆ ಸಿಎಂ ಭೇಟಿ ಸಾಧ್ಯತೆ


ಇಂಟಿಗ್ರೇಟೆಡ್​ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಸೆಂಟರ್ ಬಿಇಎಲ್ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಒಂದೇ ಸೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ, ನಗರದ ಮಾಲಿನ್ಯ,  ಟ್ರಾಫಿಕ್ ಮ್ಯಾನೆಜಮೆಂಟ್, ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೆಜಮೆಂಟ್, ಸ್ಮಾರ್ಟ್ ವಾಟರ್, ಇ ಗವರ್ನನ್ಸ್, ಆ್ಯಂಬುಲೆನ್ಸ್  ಹಾಗೂ ಅಗ್ನಿ ಶಾಮಕ ಸಿಬ್ಬಂಧಿ ತುರ್ತು ಸಾಧನ ಸೇರಿ ಎಲ್ಲಾ ಸೌಲಭ್ಯಗಳ ಮಾಹಿತಿ ನೀಡಲಿದೆ. ಇದರಿಂದ ನಗರದ ಜನರಿಗೆ ಎಲ್ಲದರ ಬಗ್ಗೆಯೂ ಒಮ್ಮೆಯೇ ಮಾಹಿತಿ ಸಿಗಲಿದೆ.


ಇನ್ನು ಕ್ಯಾಮರಗಳು ಮೂಲಕ ನಗರದಲ್ಲಿ ನಡೆಯುವ ಎಲ್ಲಾ ಕೆಲಸಗಳ ಮೇಲೆ ಕಣ್ಣಿಡಲಾಗುತ್ತದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟ್ರಲ್​​ ಮೂಲಕ ಸಮಸ್ಯೆಗಳಿಗೆ ಆದಷ್ಟು ಬೇಗ ಸ್ಪಂದಿಸಲಿದ್ಧಾರೆ ಎನ್ನಲಾಗುತ್ತಿದೆ.

Published by:Ganesh Nachikethu
First published: