ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ಜಾರಿಗೆ ಮುಂದಾದ ಸರ್ಕಾರ

ಉದ್ಯೋಗ ನಿರೀಕ್ಷೆಯಿಂದಲೇ ಕಾರ್ಖಾನೆಗಳಿಗೆ ನಮ್ಮ ಪರಿಸರ, ಭೂಮಿಯನ್ನು ತ್ಯಾಗ ಮಾಡುತ್ತಿದ್ದೇವೆ. ಆದರೆ, ಹೊರ ರಾಜ್ಯದವರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಅರ್ಹತೆ ಮತ್ತು ಪ್ರತಿಭೆ ಇದ್ದರೂ ಕನ್ನಡಿಗರಿಗೆ ಕೆಲಸಗಳು ಸಿಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸದ ಹೊರತು ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಕನ್ನಡ ಬಾವುಟ

ಕನ್ನಡ ಬಾವುಟ

 • Share this:
  ಬೆಂಗಳೂರು(ಫೆ.06): ಆಂಧ್ರಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ನೀಡುವ ಮೀಸಲು ಮಸೂದೆ ಜಾರಿಗೆ ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲೂ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ಕಡ್ಡಾಯವಾಗಿ ಮೀಸಲು ಇಡಲೇಬೇಕೆಂಬ ಕಾಯ್ದೆ ಪ್ರಕ್ರಿಯೆ ಚಾಲನೆಯಲ್ಲಿದೆ ಎನ್ನುತ್ತಿವೆ ಉನ್ನತ ಮೂಲಗಳು.

  ಈ ಸಂಬಂಧ ನ್ಯೂಸ್​​​-18 ಜತೆಗೆ ಮಾತಾಡಿದ ರಾಜ್ಯ ಕಾರ್ಮಿಕ ಸಚಿವ ಎಸ್​​ ಸುರೇಶ್​​ ಕುಮಾರ್​​ ಅವರು, ಈ ಕಾಯ್ದೆ ಪ್ರಕ್ರಿಯೆ ಚಾಲನೆಯಲ್ಲಿದೆ. ನಾವು ಯಾರ ವಿರುದ್ಧವೂ ಈ ಕಾಯ್ದೆ ಜಾರಿ ಮಾಡುತ್ತಿಲ್ಲ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಹೆಚ್ಚು ಸಿಗಬೇಕು ಎನ್ನುವುದೇ ನಮ್ಮ ಸರ್ಕಾರದ ಆಶಯ. ಅದೇ ನಿಟ್ಟಿನಲ್ಲಿ ಸರ್ಕಾರ ಕಾಯ್ದೆ ರಚನೆಗೆ ಮಾಡುತ್ತಿದೆ. ಈ ನೆಲದ ಭಾವನೆಗಳನ್ನು ನಾವು ಸದಾ ಗೌರವಿಸುತ್ತೇವೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ. ಮುಂದಿನ ಈ ಕಾಯ್ದೆ ಜಾರಿಯಾಗಲಿದೆ ಎಂದರು.

  ಈ ಹಿಂದೆಯೇ ಸ್ಥಳೀಯರಿಗೆ ಶೇ.75 ಮೀಸಲಾತಿ ಮಸೂದೆಗೆ ಆಂಧ್ರ ಪ್ರದೇಶದ ವಿಧಾನಸಭೆ ಅಸ್ತು ಎಂದಿದೆ. ಇಂತಹುದ್ದೇ ಕಾನೂನು ರಾಜ್ಯ ಸರ್ಕಾರ ತರಬೇಕು ಕನ್ನಡಪರ ಹೋರಾಗಾರರು ಒತ್ತಾಯಿಸಿದ್ದರು. ಹಾಗೆಯೇ ರಾಜ್ಯದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.90ರಷ್ಟು ಉದ್ಯೋಗ ಮೀಸಲಾತಿ ಒದಗಿಸಬೇಕು. ಬೆಂಗಳೂರಿನ ಕೆಲವು ಖಾಸಗಿ ಕಂಪನಿಗಳು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಅರ್ಜಿಯಲ್ಲಿ ಉತ್ತರ ಭಾರತದ ಅಭ್ಯರ್ಥಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಿವೆ. ದಕ್ಷಿಣ ಭಾರತದ ಅಭ್ಯರ್ಥಿಗಳನ್ನು ಕಡೆಗಣಿಸಬೇಕು ಎಂಬ ಉಲ್ಲೇಖಗಳು ಅರ್ಜಿಯಲ್ಲಿ ಲಭ್ಯವಿವೆ. ಸರ್ಕಾರ, ಕನ್ನಡಿಗ ಮಕ್ಕಳಿಗೆ ಉದ್ಯೋಗದ ಹಕ್ಕು ಕಲ್ಪಿಸಬೇಕು. ಕೇವಲ ಸಿ ಮತ್ತು ಡಿ ದರ್ಜೆಯಲ್ಲದೆ ಉನ್ನತ ದರ್ಜೆಯ ಹುದ್ದೆಗಳೂ ಸಿಗುವಂತಾಗಬೇಕು. ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಕರ್ನಾಟಕದಲ್ಲಿ ಮುಂದಿನ ದಿನದಲ್ಲಿ ಕನ್ನಡಿಗರಿಗೆ ಸಂಕಟದ ದಿನಗಳು ಬರಲಿದೆ ಎಂದು ಎಚ್ಚರಿಸಿದರು.

  ಇದನ್ನೂ ಓದಿ: ‘ನೋ ಕನ್ನಡ ನೋ ಬ್ಯುಸಿನೆಸ್​​​’ – ಕನ್ನಡ ಗ್ರಾಹಕರ ಕೂಟದಿಂದ ಭಾಷಾ ರಕ್ಷಣೆಗೆ ಹೊಸ ಅಭಿಯಾನ

  ಉದ್ಯೋಗ ನಿರೀಕ್ಷೆಯಿಂದಲೇ ಕಾರ್ಖಾನೆಗಳಿಗೆ ನಮ್ಮ ಪರಿಸರ, ಭೂಮಿಯನ್ನು ತ್ಯಾಗ ಮಾಡುತ್ತಿದ್ದೇವೆ. ಆದರೆ, ಹೊರ ರಾಜ್ಯದವರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಅರ್ಹತೆ ಮತ್ತು ಪ್ರತಿಭೆ ಇದ್ದರೂ ಕನ್ನಡಿಗರಿಗೆ ಕೆಲಸಗಳು ಸಿಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸದ ಹೊರತು ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

  ಆಂಧ್ರಪ್ರದೇಶದಲ್ಲಿ ಉದ್ಯಮ ಹಾಗೂ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ಮೀಸಲಿಡಲು ವಿಧೇಯಕ ಅಂಗೀಕಾರವಾಗಿದೆ. ನಮ್ಮಲ್ಲೂ ಇದು ಅನುಷ್ಠಾನವಾಗಬೇಕು ಎಂದಿದ್ದರು.

  (ವರದಿ: ಸ್ಟೇಸಿ ಪೆರೀರಾ, CNN-News18)
  First published: