ನಾನು, ಡಿಕೆಶಿ ಚೆನ್ನಾಗಿದ್ದೀವಿ; ಡಿ.ಕೆ. ಸುರೇಶ್​ ನಕಲಿ ಪತ್ರ ಬಿಡುಗಡೆ ಮಾಡಿದ್ದಾರೆ; ಮಾಜಿ ಸಿಎಂ ಯಡಿಯೂರಪ್ಪ

news18
Updated:September 8, 2018, 3:14 PM IST
ನಾನು, ಡಿಕೆಶಿ ಚೆನ್ನಾಗಿದ್ದೀವಿ; ಡಿ.ಕೆ. ಸುರೇಶ್​ ನಕಲಿ ಪತ್ರ ಬಿಡುಗಡೆ ಮಾಡಿದ್ದಾರೆ; ಮಾಜಿ ಸಿಎಂ ಯಡಿಯೂರಪ್ಪ
  • Advertorial
  • Last Updated: September 8, 2018, 3:14 PM IST
  • Share this:
ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ 2017ರ ಜನವರಿ 10ರಂದು ಬಿ.ಎಸ್​. ಯಡಿಯೂರಪ್ಪ ಪತ್ರ ಬರೆದಿದ್ದಾರೆ ಎಂದು ಆರೋಪಿಸಿ ಸಂಸದ ಡಿ.ಕೆ. ಸುರೇಶ್​ ಪತ್ರವೊಂದನ್ನು ಇಂದು ಬೆಳಗ್ಗೆ ಬಿಡುಗಡೆ ಮಾಡಿದ್ದರು. ಆದರೆ ಈ ಪತ್ರ ನಕಲಿ, ತಾವು ಯಾವುದೇ ಪತ್ರವನ್ನೂ ಆದಾಯ ತೆರಿಗೆ ಇಲಾಖೆಗೆ ಬರೆದಿಲ್ಲ ಎಂಬುದಾಗಿ ಯಡಿಯೂರಪ್ಪ ಸಮರ್ಥನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್​ ಬಿಡುಗಡೆ ಮಾಡಿದ ಪತ್ರ ನಕಲಿ ಎಂದಿದ್ದಾರೆ. 2017ರಿಂದ ಈವರೆಗೆ ನನ್ನ ಮತ್ತು ಡಿಕೆ ಶಿವಕುಮಾರ್​ ಸಂಬಂಧ ಚೆನ್ನಾಗಿದೆ. ಹೀಗಿರುವಾಗ ನಾನೇಕೆ ಅವರ ವಿರುದ್ಧ ದೂರು ನೀಡಲು ಎಂಬುದಾಗಿ ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಡಿ.ಕೆ. ಸುರೇಶ್​ ಈ ರೀತಿ ಆರೋಪ ಮಾಡುವ ಮೂಲಕ ಹೊಸ ಸುದ್ದಿ ಸೃಷ್ಟಿಸಿ ಗೊಂದಲ ಮೂಡಿಸುತ್ತಿದ್ದಾರೆ, ಈ ಬಗ್ಗೆ ಡಿ.ಕೆ.ಸುರೇಶ್​ ತಮ್ಮ ಅಣ್ಣನ ಬಳಿ ಕೇಳಲಿ ಎಂದಿದ್ದಾರೆ.

Fake Letter claimed to be written by me by DKS brothers today shows the desperation of Congress to save its unholy government. I have never indulged in such cheap politics and would retire from politics if it’s proven.
ಆರೋಪವೇನು?:

ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ವಾಮಮಾರ್ಗ ಹಾಗೂ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಬಿಜೆಪಿ ವಿರುದ್ದ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕರ್ನಾಟಕದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಸರ್ಕಾರ ರಚಿಸಿದ್ದೇವೆ. ಹಾಗಾಗಿ ಇಡಿ, ಐಟಿ ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸುತ್ತಿದ್ದಾರೆ. ಇದರ ಹಿಂದೆ ಇರುವವರನ್ನ ಬಂಧಿಸುವುದಕ್ಕೆ ಷಡ್ಯಂತ್ರ ನಡೆದಿದೆ. ಇದಕ್ಕೆ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರಿದ್ದಾರೆ ಎಂದು ಆರೋಪ ಮಾಡಿದ್ದರು.

ಸಿಬಿಐ ಅಧಿಕಾರಿಗಳು ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ. ನನಗೂ ಕೂಡ ನೋಟೀಸ್ ಕೊಟ್ಟಿದ್ದರು. ಕಳೆದ ಹತ್ತು ದಿನಗಳ ಹಿಂದೆ ನಾನು ಸಿಬಿಐ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.

ದ್ವೇಷದ ರಾಜಕೀಯಕ್ಕೆ ಯಡಿಯೂರಪ್ಪ ಮುನ್ನುಡಿ?; ಡಿಕೆಶಿ ಬ್ರದರ್ಸ್​ ವಿರುದ್ಧ ಮಾಜಿ ಸಿಎಂ ಐಟಿ ಇಲಾಖೆಗೆ ಬರೆದ ಪತ್ರ ಬಹಿರಂಗ

ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಗಮನಕ್ಕೆ ತರಲಿದ್ದೇನೆ. ಹಿಗಾಗಿ ಪ್ರಧಾನಿ ಭೇಟಿಗೆ ಅನುಮತಿ ಕೇಳಿದ್ದೇನೆ ಎಂದು ಡಿ.ಕೆ ಸುರೇಶ್ ಹೇಳಿದರು.
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ