HOME » NEWS » State » YEDDYURAPPA HAS SUCCESSFULLY TACKLED ALL THE CHALLENGES SAYS R ASHOK MAK

ಅಧಿಕಾರಕ್ಕೆ ಏರಿದಾಗಿಂದಲೂ ಎಲ್ಲಾ ಸವಾಲುಗಳನ್ನು ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ; ಆರ್‌. ಅಶೋಕ್

ಕಷ್ಟದ ಸಂದರ್ಭದಲ್ಲಿ ನೇತೃತ್ವ ಕೊಡುವಂತವನೇ ನಿಜವಾದ ನಾಯಕ. ಸುಖದಲ್ಲಿ ನಾಯಕತ್ವ ಕೊಟ್ರೆ ಅದಕ್ಕೆ ಬೆಲೆ ಇರಲ್ಲ. ಕಷ್ಟದಲ್ಲಿ ನಾಯಕತ್ವ ಕೊಡೋದೇ ಒಂದು ಸವಾಲು. ಈ ಸವಾಲನ್ನು ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಸಚಿವ ಆರ್‌. ಅಶೋಕ್‌ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:July 26, 2020, 11:46 AM IST
ಅಧಿಕಾರಕ್ಕೆ ಏರಿದಾಗಿಂದಲೂ ಎಲ್ಲಾ ಸವಾಲುಗಳನ್ನು ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ; ಆರ್‌. ಅಶೋಕ್
ಸಚಿವ ಆರ್​ ಅಶೋಕ್​​
  • Share this:
ಬೆಂಗಳೂರು (ಜುಲೈ 26); ಬಿಎಸ್‌ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿಂದಲೂ ಒಂದಲ್ಲಾ ಒಂದು ಸವಾಲು ಎದುರಾಗುತ್ತಲೇ ಇದೆ. ಆದರೆ, ಈ ವಯಸ್ಸಲ್ಲೂ ಅವರು ಈ ಎಲ್ಲಾ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಸಚಿವ ಆರ್‌. ಅಶೋಕ್‌ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಆಗಿ ಯಡಿಯೂರಪ್ಪ ಅವರ ಕಾರ್ಯವೈಖರಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವ ಆರ್‌. ಅಶೋಕ್, "ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಯಾವುದೇ ಸವಾಲುಗಳು ಇರಲಿಲ್ಲ. ಆದರೆ, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ್ಲೇಲ್ಲಾ ಬರೀ ಸವಾಲುಗಳೇ ಎದುರಾಗಿವೆ.

ಪ್ರವಾಹದ ಸಂದರ್ಭದಲ್ಲಿ ಮಂತ್ರಿ ಮಂಡಲ ರಚನೆಯಾಗದೆ ಇದ್ದಾಗ ಒಬ್ರೇ ಓಡಾಡಿ ನೊಂದ ಜನರಿಗೆ ನೆರವಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು 5 ಲಕ್ಷ ರೂಪಾಯಿ ನೀಡಿದ್ದರು. ಇನ್ನು ಕೊರೋನಾ ತಡೆಗಾಗಿ ಹೊರಗೆ ಬಂದು ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯದ ಸಿಎಂ ಗಳು ಹೊರಗೆ ಬರ್ತಿಲ್ಲ. ಅಂತದ್ದರಲ್ಲಿ ಬಿಎಸ್‌ ಯಡಿಯೂರಪ್ಪ ಈ ವಯಸ್ಸಲ್ಲೂ ಸಭೆಗಳನ್ನು ಮಾಡಿ ಕೊರೋನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ" ಎಂದು ಪ್ರಶಂಶಿಸಿದ್ದಾರೆ.

"ಲಾಕ್ ಡೌನ್ ಸಡಿಲಿಕೆ ನಂತರ ಯಡಿಯೂರಪ್ಪ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಕಾರ್ಮಿಕರು, ಬಡವರು, ಕೃಷಿಕರಿಗೆ ಪರಿಹಾರ ಕೊಟ್ಟಿದ್ದಾರೆ. ಬಿಎಸ್‌ವೈ ಕೈಗುಣ ಒಳ್ಳೆಯದಿರೋದ್ರಿಂದ ಈ ವರ್ಷ ಅತಿಹೆಚ್ಚು ಬೆಳೆ ಬರಲಿದೆ. ಕಳೆದ ಬಾರಿಗಿಂತ ಈ ಬಾರಿ ರಸ ಗೊಬ್ಬರ, ಬಿತ್ತನೆ ಬೀಜಗಳನ್ನು ಅಧಿಕವಾಗಿ ವಿತರಣೆ ಮಾಡಿದ್ದೇವೆ.

ಕಷ್ಟದ ಸಂದರ್ಭದಲ್ಲಿ ನೇತೃತ್ವ ಕೊಡುವಂತವನೇ ನಿಜವಾದ ನಾಯಕ. ಸುಖದಲ್ಲಿ ನಾಯಕತ್ವ ಕೊಟ್ರೆ ಅದಕ್ಕೆ ಬೆಲೆ ಇರಲ್ಲ. ಕಷ್ಟದಲ್ಲಿ ನಾಯಕತ್ವ ಕೊಡೋದೇ ಒಂದು ಸವಾಲು. ಈ ಸವಾಲನ್ನು ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ" ಎಂದು ಆರ್‌. ಅಶೋಕ್‌ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : CoronaVirus: ದೇಶದಲ್ಲಿ ಮುಂದುವರೆದ ಕೊರೋನಾ ಉಪಟಳ:13 ಲಕ್ಷ ದಾಟಿದ ಸೋಂಕು ಪೀಡಿತರ ಸಂಖ್ಯೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 55,396ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,796ಕ್ಕೆ ಏರಿಕೆಯಾಗಿದೆ. ಇನ್ನೂ ಬೆಂಗಳೂರಿನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರುತ್ತಿದ್ದು ಕಂದಾಯ ಸಚಿವ ಆರ್‌. ಅಶೋಕ್ ಅವರನ್ನು ಬೆಂಗಳೂರು ದಕ್ಷಿಣದ ಕೊರೋನಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
Published by: MAshok Kumar
First published: July 26, 2020, 11:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories