• Home
  • »
  • News
  • »
  • state
  • »
  • ಯತ್ನಾಳ್ ಒಂದು ರೀತಿ ಸಂಗೀತ‌ ಸಭೆಯಲ್ಲಿ ಅಪಸ್ವರ ಇದ್ದ ಹಾಗೆ; ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ಯತ್ನಾಳ್ ಒಂದು ರೀತಿ ಸಂಗೀತ‌ ಸಭೆಯಲ್ಲಿ ಅಪಸ್ವರ ಇದ್ದ ಹಾಗೆ; ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್

ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್

ಬೇರೆಯವರು ಅವರ ಮಕ್ಕಳನ್ನು ತಂದು ಅಧಿಕಾರಕ್ಕೆ ಕೂರಿಸಿದರು. ಆದರೆ ಯಡಿಯೂರಪ್ಪ ಆ ಕೆಲಸ ಮಾಡಲಿಲ್ಲ. ಸಂಘಟನೆ ಮೂಲಕ ಈತನೇ ಸ್ವಯಂ ಬೆಳೆದಿದ್ದಾನೆ. ವಿಜಯೇಂದ್ರ ಅವರಿಗೆ ಉತ್ತರಾಧಿಕಾರಿ ಆಗುವ ಎಲ್ಲಾ ಅವಕಾಶಗಳು ಇದ್ದರೇ. ಪಕ್ಷ ಯೋಚಿಸಿದರೆ ಸೂಕ್ತ.  ಆ ರೀತಿಯ ಅವಕಾಶವನ್ನು ಪಕ್ಷ ಕೊಟ್ಟರೆ ಯಾವುದೇ ವಿರೋಧ ಇಲ್ಲ ಎಂದು ತಿಳಿಸಿದರು.

ಮುಂದೆ ಓದಿ ...
  • Share this:

ಶಿವಮೊಗ್ಗ; ಸಿಎಂ  ಯಡಿಯೂರಪ್ಪ ವಿರುದ್ದ ಯತ್ನಾಳ್ ನೀಡಿರುವ ಹೇಳಿಕೆಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ದೊಡ್ಡ ಸಂಗೀತ ಸಭೆಯಲ್ಲಿ ಅಪಸ್ವರವೊಂದು ಎಂದು ಕಾಣುತ್ತೇ. ಯತ್ನಾಳ್ ಒಂದು ಅಪಸ್ವರ ಇದ್ದ ಹಾಗೆ. ಯತ್ನಾಳ್ ವಿರುದ್ದ ಕ್ರಮ ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ. ಖಾಯಿಲೆ ಬಂದ ವ್ಯಕ್ತಿಗೆ ಆಪರೇಷನ್ ಮಾಡುವ ಮೊದಲು ಮೆಡಿಷನ್ ಕೊಟ್ಟು ನೋಡುತ್ತಾರೆ. ಮೆಡಿಷನ್ ಗೆ ವಾಸಿ ಆಗಲಿಲ್ಲ ಅಂದರೆ ಆಪರೇಷನ್ ಮಾಡುತ್ತಾರೆ. ಆಪರೇಷನ್ ಮಾಡಲಿಲ್ಲ ಅಂದರೆ ಆ ಖಾಯಿಲೆ ಮುಂದುವರಿಯುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.


ಯತ್ನಾಳ್ ಸಿಎಂ  ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದರೂ, ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಜನಾಥ್ ಸರಿಯಾದ ಸಮಯದಲ್ಲಿ ಸರಿಯಾದ ರೀತಿ ತೀರ್ಮಾನವನ್ನು ಪಕ್ಷದ ನಾಯಕರು  ತೆಗೆದುಕೊಳ್ಳುತ್ತಾರೆ. ಆತ ತನ್ನನ್ನು ತಾನೇ ಅತ್ಯಂತ ಸಮರ್ಥ ಎಂದು ಕೊಂಡಿದ್ದಾನೆ. ಆ ರೀತಿಯ ಒಂದು ಭ್ರಮೆಗೆ ಒಳಗಾಗಿದ್ದಾನೆ. ಇತರರು ಯಾರೂ ತಮ್ಮನ್ನು ಹೊಗಳದಿದ್ದಾಗ ತಮ್ಮನ್ನು ತಾವೇ ಹೊಗಳಿಕೊಳ್ಳುವ ಖಾಯಿಲೆ ಇರುತ್ತೇ. ಆ ರೀತಿಯ ಖಾಯಿಲೆ ಯತ್ನಾಳ್ ಗೆ ಇದೆ. ಅದಕ್ಕೆ ಆತ್ಮರತಿ ಅಂತಾರೆ. ಅಂತಹ ಒಂದು ಮಾನಸಿಕ ಖಾಯಿಲೆ ಯತ್ನಾಳ್ ಒಳಗಾಗಿದ್ದಾನೆ. ರಾಜಕೀಯವಾಗಿ ಕಳೆದು ಹೋಗುತ್ತೇನೆ. ಪ್ರಚಾರ ಕಡಿಮೆ ಆಗುತ್ತೆ ಅನಿಸಿದಾಗ ಅಂತಹ ಸಮಯದಲ್ಲಿ ಈ ರೀತಿ ಏನಾದರೂ ಹೇಳಿಕೆ ನೀಡುತ್ತಾರೆ ಎಂದು ತಿಳಿಸಿದರು.


ಇನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಳೆದ ಎರಡು ಉಪ ಚುನಾವಣೆಯಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ಹಳೆ ಬೇರು ಹೊಸ ಚಿಗುರಿನ ಸಂಮಿಶ್ರಣವಾಗಿದೆ. ಪಕ್ಷದಲ್ಲಿ ಅತ್ಯಂತ ಹಿರಿಯರಿದ್ದಾರೆ. ತಳಮಟ್ಟದಲ್ಲಿ ಸಂಘಟನೆ ಇದೆ. ಸೈನ್ಯ ತುಂಬಾ ಚೆನ್ನಾಗಿದೆ. ಅದರ ನೇತೃತ್ವವನ್ನು ಹೊಸ ದಳಪತಿ ವಹಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಕೆಲವರಿಗೆ ಭಾಗ್ಯ ರೇಖೆ ಇರುತ್ತೆ, ಹೋದಲೆಲ್ಲಾ ಗೆಲುವು ಸಿಗುತ್ತೆ. ಅಂತಹ ಒಂದು ಭಾಗ್ಯರೇಖೆ ವಿಜಯೇಂದ್ರ ಅವರಿಗಿದೆ. ಹೊಸ ನಾಯಕತ್ವ ಈ ರೀತಿ ಬರುತ್ತಿದ್ದರೆ ಅದು ಸಂಘಟನೆಯ ಜೀವಂತಿಕೆ. ಯಾವ ಸಂಘಟನೆ ಜೀವಂತಿಕೆ ಇರುವುದಿಲ್ಲವೋ, ಅದು ಅಲ್ಲಲ್ಲೇ ಸುತ್ತುತ್ತಿರುತ್ತದೆ. ವಿಜಯೇಂದ್ರ ಹೋದ ಕಡೆಗಳಲ್ಲಿ ಯುವಕರನ್ನು ವಿಶೇಷವಾಗಿ ಆಕರ್ಷಿಸುತ್ತಿದ್ದಾರೆ. ನಿನ್ನೆಯಿಂದ ಬಸವಕಲ್ಯಾಣ ಪ್ರವಾಸದಲ್ಲಿದ್ದಾರೆ. ಬಸವಕಲ್ಯಾಣ ಹಾಗೂ ಮಸ್ಕಿ ಉಪ ಚುನಾವಣೆಯಲ್ಲಿ ಸಹ ವಿಜಯಿಶಾಲಿಯಾಗಿ ಬರಲಿ. ಹಾಗಂತ ವಿಜಯೇಂದ್ರ ಒಬ್ಬರೇ ಇರುತ್ತಾರೆ ಅಂತಾ ಭಾವಿಸುವುದು ಸರಿಯಲ್ಲ, ಅಲ್ಲಿ ಎಲ್ಲರೂ ಇರುತ್ತಾರೆ, ಅವರೆಲ್ಲರ ಸಹಕಾರದ ಮಧ್ಯೆ ಒಬ್ಬ ಯುವಕ ಎದ್ದು ಕಾಣಿಸುತ್ತಿದ್ದಾರೆ ಎಂದರು.


ಇದನ್ನು ಓದಿ: ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ; ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ


ಬೇರೆಯವರು ಅವರ ಮಕ್ಕಳನ್ನು ತಂದು ಅಧಿಕಾರಕ್ಕೆ ಕೂರಿಸಿದರು. ಆದರೆ ಯಡಿಯೂರಪ್ಪ ಆ ಕೆಲಸ ಮಾಡಲಿಲ್ಲ. ಸಂಘಟನೆ ಮೂಲಕ ಈತನೇ ಸ್ವಯಂ ಬೆಳೆದಿದ್ದಾನೆ. ವಿಜಯೇಂದ್ರ ಅವರಿಗೆ ಉತ್ತರಾಧಿಕಾರಿ ಆಗುವ ಎಲ್ಲಾ ಅವಕಾಶಗಳು ಇದ್ದರೇ. ಪಕ್ಷ ಯೋಚಿಸಿದರೆ ಸೂಕ್ತ.  ಆ ರೀತಿಯ ಅವಕಾಶವನ್ನು ಪಕ್ಷ ಕೊಟ್ಟರೆ ಯಾವುದೇ ವಿರೋಧ ಇಲ್ಲ ಎಂದು ತಿಳಿಸಿದರು.


ಕುರುಕ್ಷೇತ್ರದಲ್ಲಿ ನಮಗೆ ಗೆಲುವು ಮುಖ್ಯ. ಹಿಂದಿನ ಕುರುಕ್ಷೇತ್ರದಲ್ಲಿ ಘಟಾನುಘಟಿ ವೀರರೆ ಇದ್ದರು. ನಮ್ಮ ಪಕ್ಷದಲ್ಲಿ ಬಹಳ ಸಮರ್ಥರಾದ ಭೀಮ, ಅರ್ಜುನ ಎಲ್ಲರೂ ಇದ್ದರೂ ಸಹ ಅತ್ಯಂತ ಕಿರಿಯನನ್ನು ಮುಂದೆ ಬಿಟ್ಟಿದ್ದೇವೆ. ಯುದ್ದವನ್ನು ಎಲ್ಲರೂ ಸಮಾನವಾಗಿ ಎದುರಿಸಿದ್ದೇವೆ ಎಂದು ಅಭಿಪ್ರಾಯ ಪಟ್ಟರು.

Published by:HR Ramesh
First published: