News18 India World Cup 2019

ಮಾಂಸ ತಿಂದು ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಮಾಡಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಯತ್ನಾಳ


Updated:September 5, 2018, 4:34 PM IST
ಮಾಂಸ ತಿಂದು ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಮಾಡಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಯತ್ನಾಳ

Updated: September 5, 2018, 4:34 PM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ(ಸೆ. 05): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಂಸ ತಿಂದು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತವಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಗತಿಪರ ಚಿಂತಕರು ಮತ್ತು ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.  ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಗತಿಪರ ಚಿಂತಕರು ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.   ಇದೇ ಮೊದಲ ಬಾರಿಗೆ ಮಾನಸ ಸರೋವರಕ್ಕೆ ತೆರಳಿದ ರಾಹುಲ್ ಗಾಂಧಿ, ಮಾಂಸ ತಿಂದು ಯಾತ್ರೆ ನಡೆಸಿದ್ದಾರೆ.  ಇದೇ ರೀತಿ ಮಾಡಿ ಸಿದ್ಧರಾಮಯ್ಯ ಸರಕಾರ ಕಳೆದುಕೊಂಡರು.  ರಾಹುಲ್ ಗಾಂಧಿಗೆ ಶ್ರದ್ಧಾಕೇಂದ್ರಗಳ ಪಾವಿತ್ರ್ಯತೆ ಗೊತ್ತಿಲ್ಲ.  ಪವಿತ್ರ ಸ್ಥಾನಗಳಿಗೆ ಭೇಟಿ ನೀಡಿ ಚಿಕನ್ ಸೂಪ್ ಕುಡಿದರೆ ಹೇಗೆ?  ಹೀಗಾಗಿ ರಾಹುಲ್ ಭೇಟಿ ನೆಗಟಿವ್ ಆಗಲಿದೆ ಎಂದು ಯತ್ನಾಳ್ ಹೇಳಿದ್ದಾರೆ..

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಮಾಡಿದವರನ್ನು ಸಮರ್ಥಿಸುತ್ತಿರುವವರ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್ ಹಾಕಿದವರನ್ನ ಚಿಂತಕರು ಎನ್ನುತ್ತಾರೆ. ಅದೇ ರಾಜೀವ್ ಗಾಂಧಿಯವರನ್ನು ಕೊಂದವರನ್ನ ಭಯೋತ್ಪಾದಕರು ಎನ್ನುತ್ತಾರೆ. ಪ್ರಧಾನಿಗಳಲ್ಲಿ ವ್ಯತ್ಯಾಸವಿದೆಯಾ ಎಂದು ಕಿಡಿ ಕಾರಿದ್ದಾರೆ.

ಗೌರಿ ಡೆ ಆಚರಣೆ ಕುರಿತು ಮಾತನಾಡಿದ ಅವರು ದೇಶದಲ್ಲಿ ಹಲವೆಡೆ ಹಿಂದೂಗಳ ಹತ್ಯೆ ನಡೆಯಿತು. ಅದನ್ನು ಡೇ ಆಚರಣೆ ಮಾಡಿದ್ರಾ? ಇದು ನಾಚಿಕೆಗೇಡು ಎಂದು ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಸಧ್ಯದಲ್ಲೆ ರಾಜ್ಯ ಸರಕಾರ ಪತನವಾಗಲಿದ ಎಂದು ಮತ್ತೆ ಭವಿಷ್ಯ ನುಡಿದ ಯತ್ನಾಳ, ನಾನು ಹೇಳಿದ ಭವಿಷ್ಯ ಸತ್ಯವಾಗಿದೆ. ಕಿತ್ತೂರುರಾಣಿ ಚೆನ್ನಮ್ಮ, ರಾಯಣ್ಣನ ನಾಡು ಬೆಳಗಾವಿಯಲ್ಲಿ ಸರಕಾರರ ಉರುಳಿಸುವ ತಯಾರಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲೆ ಬೆಂಕಿ ಹೊತ್ತಿ ಉರಿಯುತ್ತಿದೆ. ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ನಡುವಿನ ಸಂಘರ್ಷ ಸಮ್ಮಿಶ್ರ ಸರಕಾರ ಪತನಕ್ಕೆ ಮುನ್ನುಡಿಯಾಗಲಿದೆ. ನಾವೇನೂ ಸರಕಾರ ಕೆಡವುದಿಲ್ಲ. ತಾನಾಗಿಯೇ ಸರಕಾರ ಪತನವಾಗಲಿದೆ ಎಂದು ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದ್ದಾರೆ.
Loading...

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ, ವಿಜಯಪುರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕಾಂತ ಬಗಲಿ, ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಎಂ. ಎಸ್. ಕರಡಿ, ಬಿಜೆಪಿ ಮುಖಂಡ ಶೀತಲ್ ಕುಮಾರ್ ಹೋಗಿ ಉಪಸ್ಥಿತರಿದ್ದರು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...