ಶಾಸಕರ ಸಭೆಯಲ್ಲಿ ಸಿಎಂ ಬಿಎಸ್​ವೈ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್​​

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಕಸರತ್ತು ನಡೆಸಿರುವ ಬೆನ್ನಲ್ಲೇ ಬಸನಗೌಡ ಪಾಟೀಲ್​ ಯತ್ನಾಳ್​ ಈಗ ಸಿಎಂ ವಿರುದ್ಧ ನೇರಾವಾಗಿ ಅಸಮಾಧಾನ ಹೊರ ಹಾಕಿದ್ದಾರೆ

ಬಸನಗೌಡ ಪಾಟೀಲ್ ಯತ್ನಾಳ್.

ಬಸನಗೌಡ ಪಾಟೀಲ್ ಯತ್ನಾಳ್.

  • Share this:
ಬೆಂಗಳೂರು (ಡಿ. 4): ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತ ನಡೆಸುತ್ತಿದ್ದರು. ಶಾಸಕರ ಕ್ಷೇತ್ರಕ್ಕೆ ಅನುದಾನಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ  ಬಿಎಸ್​ ಯಡಿಯೂರಪ್ಪ,  ಎದುರೇ ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ಯತ್ನಾಳ್​ ಅಸಮಾಧಾನ ಹೊರಹಾಕಿದ್ದಾರೆ. ಶಾಸಕರ ಸಭೆಯಲ್ಲಿ ಮಾತನಾಡಿದ ಯತ್ನಾಳ್​, ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ಅನುದಾನ ಬೇಡುವಂತೆ ಆಗಿದೆ. ಇದು ಪ್ರತಿಪಕ್ಷ ಗಳಿಂದ ನಗೆಪಾಟಲಿಗೆ ಈಡಾಗುವ ವಿಚಾರ. ನಿಜವಾಗಿಯೂ ಸರ್ಕಾರ ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡುತ್ತಿಲ್ಲ. ಸರ್ಕಾರ ಈ ವಿಚಾರದಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ್ದಾರೆ. 

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಎರಡು ದಿನಗಳ ಕಾಲ ಶಾಸಕಾಂಗ ಸಭೆ ನಡೆಸಿದ್ದಾರೆ. ಈ ಕಸರತ್ತು ನಡೆಸಿರುವ  ಬೆನ್ನಲ್ಲೇ ಬಸನಗೌಡ ಪಾಟೀಲ್​ ಯತ್ನಾಳ್​ ಈಗ ಸಿಎಂ ವಿರುದ್ಧ ನೇರಾವಾಗಿ ಅಸಮಾಧಾನ ಹೊರ ಹಾಕಿರುವುದು ಸಿಎಂಗೆ ಮತ್ತಷ್ಟು ಮುಜುಗರವಾಗುವಂತೆ ಆಗಿದೆ. ಈಗಾಗಲೇ ಶಾಸಕರ ಕ್ಷೇತ್ರದ ಅನುದಾನದ ಕುರಿತು ಅನೇಕ ಬಾರಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು,  ಈಗ ಸಭೆಯಲ್ಲಿ ಮತ್ತೊಮ್ಮೆ ಬಹಿರಂಗವಾಗಿ ಅಸಮಾಧಾನ ತೋರಿಸಿದ್ದಾರೆ.

ಮುಂಬಯಿ ಹಾಗೂ ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆಗಿನ ಸಭೆ ವೇಳೆ ಮಾತನಾಡಿದ ಅವರು,  ಕ್ಷೇತ್ರಕ್ಕೆ ಬಾಕಿ ಉಳಿದಿರುವ ಕಾಮಾಗಾರಿಗಳು, ಬಿಡುಗಡೆಯಾಗ ಬೇಕಾದ ಅನುದಾನದ  ಬಗ್ಗೆ ಸಿಎಂಗೆ ಪ್ರಶ್ನಿಸಿದರು.

ಯತ್ನಾಳ್​ ವಿರುದ್ಧ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ

ಇನ್ನು ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಯತ್ನಾಳ್​ ಮೇಲೆ ಪಕ್ಷ ಯಾವ ಕ್ರಮ ಕೈಗೊಳ್ಳುವುದು ಎಂಬ ಬಗ್ಗೆ ಕೂಡ ಚರ್ಚೆಗೆ ಬಂದಿತ್ತು. ಈ ವೇಳೆ ಉತ್ತರಿಸಿದ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್​ ಕುಮಾರ್​ ಕಟೀಲ್, ನಮ್ಮಲ್ಲಿ ನಾಯಕತ್ವ ಕುರಿತ ಚರ್ಚೆಯೇ ಆಗಿಲ್ಲ. ನಮ್ಮ ಸರ್ವ ಸಮ್ಮತ ನಾಯಕ ಯಡಿಯೂರಪ್ಪ. ಮುಂದಿನ ಎರಡು ವರ್ಷ ಯಡಿಯೂರಪ್ಪಅವರೇ ಸಿಎಂ. ಇದನ್ನು ಈಗಾಗಲೇ ಅರುಣ್ ಸಿಂಗ್ ಸಹ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡುತ್ತಿರುವ ಯತ್ನಾಳ್ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ವರದಿ ಬಂದ ಮೇಲೆ ತೀರ್ಮಾನ ಮಾಡುತ್ತೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅರುಣ್ ಸಿಂಗ್ ನನಗೆ ಏನು ಹೇಳಿಲ್ಲ. ಯತ್ನಾಳ್ ವಿಚಾರದಲ್ಲಿ ಅವರು ಯಾವುದೇ ಸೂಚನೆ ನೀಡಿಲ್ಲ. ಬಿ ಫಾರಂ ತಗೊಂಡವರೆಲ್ಲಾ ಕೇಂದ್ರ ಶಿಸ್ತು ಸಮಿತಿಗೆ ಅಡಿಯಲ್ಲಿ ಬರುತ್ತಾರೆ. ಹಾಗಾಗಿ ಯತ್ನಾಳ್ ವಿಚಾರದಲ್ಲಿ ಕೇಂದ್ರ ಶಿಸ್ತು ಸಮಿತಿ ಏನು ಹೇಳುತ್ತೋ ಅದರ ಮೇಲೆ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
Published by:Seema R
First published: