• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅಡಿಯಾಳಾಗಿ ಬದುಕ ಬೇಕೆಂಬುದು ಹಿಂದುತ್ವ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ಹಿಂದೂ ಧರ್ಮ: ಯತೀಂದ್ರ ಸಿದ್ದರಾಮಯ್ಯ

ಅಡಿಯಾಳಾಗಿ ಬದುಕ ಬೇಕೆಂಬುದು ಹಿಂದುತ್ವ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ಹಿಂದೂ ಧರ್ಮ: ಯತೀಂದ್ರ ಸಿದ್ದರಾಮಯ್ಯ

ಯತೀಂದ್ರ ಸಿದ್ದರಾಮಯ್ಯ

ಯತೀಂದ್ರ ಸಿದ್ದರಾಮಯ್ಯ

ಹಿಂದುತ್ವ, ಹಿಂದೂ ಎರಡು ಒಂದೇ ಅಲ್ಲ, ಇದನ್ನು ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು, ಜನರಿಗೂ ಅರ್ಥ ಮಾಡಿಸಬೇಕು

  • Share this:

ಚಾಮರಾಜನಗರ (ಫೆ. 27): ಹಿಂದುತ್ವವೇ  ಬೇರೆ, ಹಿಂದೂ ಧರ್ಮವೇ ಬೇರೆಯಾಗಿದ್ದು, ಅಡಿಯಾಳಾಗಿ ಬದುಕ ಬೇಕೆಂಬುದು ಹಿಂದುತ್ವ.ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವುದು ಹಿಂದೂ ಧರ್ಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಗ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದುತ್ವವನ್ನು ಟೀಕೆ‌ ಮಾಡಿದರೆ ಹಿಂದೂ ವಿರೋಧಿಗಳಲ್ಲ. ಹಿಂದುತ್ವ ಅನ್ನುವುದು ರಾಜಕೀಯ ಸಿದ್ಧಾಂತವಾಗಿದೆ . ಹಿಂದುತ್ವ, ಹಿಂದೂ ಎರಡು ಒಂದೇ ಅಲ್ಲ, ಇದನ್ನು ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು, ಜನರಿಗೂ ಅರ್ಥ ಮಾಡಿಸಬೇಕು ಎಂದರು


ಆರ್ ಎಸ್ ಎಸ್ ಪ್ರತಿ ಮನೆಗೆ ಭೇಟಿ ನೀಡಿ ಜನರ ಬ್ರೈನ್  ವಾಶ್ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಹಿಂದುತ್ವದ ವಿರೋಧಿ ಎಂದು ಆರ್.ಎಸ್.ಎಸ್.ನವರು    ಹೇಳುತ್ತಿದ್ದಾರೆ.  ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋಮುವಾದ ಭಾವನೆ ಹೆಚ್ಚಾಗಿದೆ. ನಮ್ಮ ದೇಶ ಜ್ಯಾತ್ಯಾತೀತ ದೇಶವಾಗಿದೆ. ನಮ್ಮ ರಾಷ್ಟ್ರಕ್ಕೆ ಒಳ್ಳೆದಾಗುವುದನ್ನೇ ಸಂವಿಧಾನದಲ್ಲಿ ಸೇರಿಸಿದ್ದಾರೆ. ಹೀಗಾಗಿ ನಮ್ಮ ದೇಶ ಜ್ಯಾತ್ಯತೀತ ದೇಶವಾಗಿದೆ.  ಭಾರತ ದೇಶ ಒಂದು ಧರ್ಮಕ್ಕೆ ಸೇರಿದ ದೇಶವಲ್ಲ ಇದನ್ನ ನಮ್ಮ‌ ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದರು.


ಚುನಾವಣೆಗೆ ಎರಡು ವರ್ಷ ಮಾತ್ರ ಬಾಕಿ ಇದೆ.‌ ಕಾರ್ಯಕರ್ತರು ಟೊಂಕ‌ಕಟ್ಟಿ ನಿಲ್ಲಬೇಕು. ಕಾಂಗ್ರೆಸ್ ಪಕ್ಷವನ್ನ  ಅಧಿಕಾರಕ್ಕೆ ತರಬೇಕು.ಇದರಿಂದ ನಮ್ಮ ದೇಶವನ್ನ ಸುಭಿಕ್ಷೆಯ ಕಡೆ ತೆಗೆದುಕೊಂಡು ಹೋಗಲು ಸಾಧ್ಯ ಎಂದರು


ಇದನ್ನು ಓದಿ: ಕೈ ನಾಯಕರ ಜಟಾಪಟಿ: ನನ್ನ ಹಿಂಬಾಲಕರೇನು ಕತ್ತೆಗಳಾ ಎಂದ ತನ್ವೀರ್‌ ಸೇಠ್‌; ಸಿದ್ದರಾಮಯ್ಯ ಪರ ಮಹದೇವಪ್ಪ ಬ್ಯಾಟಿಂಗ್​


ಮೈಸೂರು ಮೇಯರ್ ಚುನಾವಣೆಯಲ್ಲಿ ನಡೆದಿರುವ ಘಟನೆಗಳು ಬಹಳ ದುರದುಷ್ಟಕರ ಎಂದ ಅವರು ಒಬ್ಬ ನಾಯಕನಿಗೆ ಹಿನ್ನೆಡೆ ಉಂಟು  ಮಾಡಲು ನಮ್ಮ ಪಕ್ಷದವರೆ ಕೆಲಸ ಮಾಡಿದ್ದಾರೆ. ಮೇಯರ್ ಸ್ಥಾನವನ್ನ ಪ್ರತಿ ಪಕ್ಷಕ್ಕೆ ಸಿಗುವಂತೆ ಮಾಡಿದ್ದಾರೆ ಎಂದ  ಆರೋಪಿಸಿದರು. ಇಂತಹ ಬೆಳವಣಿಗೆ ಬಹಳ ವಿಷದಾನಿಯ. ಇಂತಹ ಘಟನೆ ಗಳು ಎಲ್ಲೂ  ಮರಕಳಿಸಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮುಂದೆಯೇ  ಯತೀಂದ್ರ ಸಿದ್ದರಾಮಯ್ಯ ತಮ್ಮ ಅಸಮಧಾನ ವ್ಯಕ್ತ ಪಡಿಸಿದರು


ಈ ಘಟನೆಯಿಂದ ಕಾಂಗ್ರೆಸ್ ಒಡೆದ ಮನೆ ಎಂಬ ಸಂದೇಶ ರವಾನೆಯಾಗುತ್ತದೆ. ಕಾಂಗ್ರೆಸ್ ನಲ್ಲಿ‌ ಭಿನ್ನಾಭಿಪ್ರಾಯ ಇದ್ದರೆ, ಯಾವತ್ತು ಜನರಿಗೆ ಕಾಣುವ ರೀತಿ ಇರಬಾರದು ಎನ್ನುವ ಮೂಲಕ ಅವರು, ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಇರುವುದನ್ನು ಅವರು  ಪರೋಕ್ಷವಾಗಿ  ಒಪ್ಪಿಕೊಂಡರು.


ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಹಳಷ್ಟು ಒಳ್ಳೆಯ ಅವಕಾಶವಿದೆ. ನಮ್ಮ ನಾಯಕರಗಳು ಒಗಟ್ಟಾಗಿ ಹೋರಾಟ ಮಾಡಬೇಕು. ಒಗ್ಗಟ್ಟಾಗಿ ಜನರ ಬಳಿಗೆ ಹೋಗಬೇಕು ಎಂದು ಅವರು ಹೇಳಿದರು.


(ವರದಿ: ಎಸ್.ಎಂ.ನಂದೀಶ್)

Published by:Seema R
First published: