ನಾವು ಮಾಡ್ತಿರೋದು ತಪ್ಪು ಅಂತ ಅಂದ್ಕೊಂಡಿದ್ರೆ , ಆ ತಪ್ಪು ಸಾಯೋವರೆಗೂ ಮಾಡ್ತೀವಿ: ನಟ ಯಶ್

ಈಗ ನಾ ಹೇಳ್ತಿದ್ದೀನಿ, ಇದು ನಾವು ಮಾಡುತ್ತಿರುವುದು ತಪ್ಪಲ್ಲ ಅಂತ ನಮ್ಗೆಲ್ಲರಿಗೂ ಗೊತ್ತು. ಇದು ಯಾವುದೊ ಅಧಿಕಾರದ ಆಸೆಗೋ, ಮತ್ತೊಂದಕ್ಕೆ ಬಂದು ನಿಂತಿರುವುದಲ್ಲ ನಾವು.

zahir | news18
Updated:March 20, 2019, 8:33 PM IST
ನಾವು ಮಾಡ್ತಿರೋದು ತಪ್ಪು ಅಂತ ಅಂದ್ಕೊಂಡಿದ್ರೆ , ಆ ತಪ್ಪು ಸಾಯೋವರೆಗೂ ಮಾಡ್ತೀವಿ: ನಟ ಯಶ್
@WYF
  • News18
  • Last Updated: March 20, 2019, 8:33 PM IST
  • Share this:
ಮಂಡ್ಯ ಲೋಕಸಭಾ ಕ್ಷೇತ್ರ ಇಂದು ಸ್ಯಾಂಡಲ್​ವುಡ್​ ತಾರೆಗಳಿಂದ ರಂಗೇರಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸುಮಲತಾ ಅವರಿಗೆ ಬೆಂಬಲವಾಗಿ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಟ ದೊಡ್ಡಣ್ಣ, ರಾಕ್​ಲೈನ್​ ವೆಂಕಟೇಶ್​ ಸೇರಿದಂತೆ ಹಲವರು ವೇದಿಕೆಯನ್ನು ಹಂಚಿಕೊಂಡಿದ್ದರು.

ಈ ವೇಳೆ ಅಂಬಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಕಿ ಭಾಯ್ ಉರುಫ್ ಯಶ್, ನಾವೇನು ಪಾಕಿಸ್ತಾನದಿಂದ ಬಂದವರಲ್ಲ. ನಾವು ಸಿನಿಮಾದವರು ಅಂತ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನಾನು ಕೂಡ ಇದೇ ಮಾರ್ಗವಾಗಿ ಬೆಂಗಳೂರು ತಲುಪಿರುವುದು. ಮಂಡ್ಯದ ಪಾಲಳ್ಳಿ ಕೆರೆಯಲ್ಲಿ ಈಜಾಡಿದವನು ನಾನು. ಇಲ್ಲಿನ ಬೆಲ್ಲವನ್ನು, ಕಬ್ಬನ್ನು ಸವಿದವನು. ಇಡೀ ಕರ್ನಾಟಕಕ್ಕೆ ನಮ್ಮ ಋಣ ಇದೆ. ಅದರಲ್ಲಿ ಸ್ವಲ್ಪ ಜಾಸ್ತಿ ಮಂಡ್ಯದ ಮೇಲಿದೆ ಎಂದರು.

ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಬಂದಾಗ ಅಕ್ಕನ ಕಣ್ಣಲ್ಲಿ ನೀರಿತ್ತು. ಯಾಕೆ ಅಕ್ಕ ಏನಾದರೂ ಆಯ್ತಾ ಎಂದು ಕೇಳಿದೆ. ಇಲ್ಲಾಪಾ, ನನ್ನಿಂದ ನಿಮಗೆಲ್ಲಾ ತೊಂದರೆ ಆಗುತ್ತಿದೆ. ನಿನ್ನ ಮತ್ತು ದರ್ಶನ್ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನನಗಾದರೆ ಪರವಾಗಿಲ್ಲ ನನ್ನಿಂದ ನಿಮಗೆಲ್ಲಾ ತೊಂದರೆ ಆಗುತ್ತಿದೆಯಲ್ಲಾ ಅಂದರು.

ಈಗ ನಾ ಹೇಳ್ತಿದ್ದೀನಿ, ಇದು ನಾವು ಮಾಡುತ್ತಿರುವುದು ತಪ್ಪಲ್ಲ ಅಂತ ನಮ್ಗೆಲ್ಲರಿಗೂ ಗೊತ್ತು. ಇದು ಯಾವುದೊ ಅಧಿಕಾರದ ಆಸೆಗೋ, ಮತ್ತೊಂದಕ್ಕೆ ಬಂದು ನಿಂತಿರುವುದಲ್ಲ ನಾವು. ಇದು ತಪ್ಪು ಅಂತ ಕೆಲವು ಅಂದ್ಕೊಂಡಿದ್ರೆ, ಅಂತವರಿಗೆ ನಾವು ಒಂದು ಹೇಳ್ತಿನಿ. ನಾವು ತಪ್ಪೇ ಮಾಡ್ತೀವಿ. ಆ ತಪ್ಪು ಸಾಯೋವರೆಗೂ ಮಾಡ್ತೀನಿ ಎಂದು ಸುಮಲತಾ ಅವರಿಗೆ ಯಶ್ ದೈರ್ಯ ತುಂಬಿದರು.

ಇದನ್ನೂ ಓದಿ: ಅಂಬರೀಶ್​ ಕೊಡುಗೈ ದಾನಿ, ನಾನು ಕೈಚಾಚುತ್ತಿದ್ದೇನೆ, ಜತೆ ನಿಲ್ತೀರಾ; ಮಂಡ್ಯದ ಜನರಿಗೆ ಸುಮಲತಾ ಪ್ರಶ್ನೆ

ಇದು ಕೇವಲ ಚುನಾವಣೆಗೆ ಹೇಳುತ್ತಿಲ್ಲ. ಜೀವನಪೂರ್ತಿ ನಮ್ಮ ಬೆಂಬಲ ನಿಮಗೆ ಇರುತ್ತದೆ. ಯಾಕೆಂದರೆ ಮಂಡ್ಯದ ಗಂಡು ನನಗೆ ಅಷ್ಟೊಂದು ಬೆಂಬಲ ಕೊಟ್ಟಿದ್ದರು ಎಂದು ಸುಮಲತಾ ಅಂಬರೀಶ್​​ಗೆ ರಾಕಿಂಗ್ ಸ್ಟಾರ್ ಯಶ್ ಅಭಯ ನೀಡಿದರು.

ಇದನ್ನೂ ಓದಿ: ಯಾವ ವಯಸ್ಸಿನಲ್ಲಿ ಮಹಿಳೆಯರು ಹೆಚ್ಚು ಲೈಂಗಿಕ ಸುಖ ಪಡೆಯುತ್ತಾರೆ? ಸಂಶೋಧನೆಯಿಂದ ಹೊರ ಬಿತ್ತು ಹೊಸ ಸತ್ಯ
First published:March 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading