ಜನ್ಮದಿನದ ಶುಭಾಶಯ ತಿಳಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು

ಎಷ್ಟೇ ಸಮಯ ಕಾದರೂ ಯಶ್ ಬಾರದ ಹಿನ್ನೆಲೆಯಲ್ಲಿ ರವಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಸ್ಥಳದಲ್ಲಿ ನೆರೆದಿದ್ದವರು ಬೆಂಕಿ ನಂದಿಸಿ, ಆಂಬ್ಯುಲೆನ್ಸ್​ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ದೇಹದ ಬಹುಭಾಗ ಭಾಗಶಃ ಸುಟ್ಟಿದ್ದರಿಂದ ರವಿ ಪರಿಸ್ಥಿತಿ ಗಂಭೀರವಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

HR Ramesh | news18
Updated:January 9, 2019, 10:36 AM IST
ಜನ್ಮದಿನದ ಶುಭಾಶಯ ತಿಳಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು
ಮೃತಪಟ್ಟ ಯಶ್ ಅಭಿಮಾನಿ ರವಿ
HR Ramesh | news18
Updated: January 9, 2019, 10:36 AM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಶುಭಾಶಯ ಕೋರಲು ಸಾಧ್ಯವಾಗದೆ ನೊಂದು ಪೆಟ್ರೋಲ್ ಸುರಿದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದ  ಅಭಿಮಾನಿ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಧ್ಯರಾತ್ರಿ 1.30ರ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ನೆಲಮಂಗಲದ ನಿವಾಸಿಯಾದ ರವಿ (29) ಯಶ್​ ಅವರ ಅಪ್ಪಟ ಅಭಿಮಾನಿ. ನೆನ್ನೆ ಯಶ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸಕ್ಕೆ ತೆರಳಿದ್ದರು. ಆದರೆ, ಯಶ್ ಅವರು ಸಿಗದ ಕಾರಣಕ್ಕೆ ನೊಂದು ಸ್ಥಳದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿದು ನಟ ಯಶ್ ಕೂಡ ಆಸ್ಪತ್ರೆಗೆ ಭೇಟಿ  ನೀಡಿ, ಅಭಿಮಾನಿಯ ಆರೋಗ್ಯ ವಿಚಾರಿಸಿದ್ದರು.

"ಗಾರೆ ಕೆಲಸ ಮಾಡ್ತಾ ಇದ್ದ. ಅಲ್ಲಲ್ಲಿ ಪೋಸ್ಟರ್ ಹಚ್ಚುವ ಕೆಲಸವನ್ನೂ ಮಾಡ್ತಿದ್ದ. ನಿನ್ನೆ ಮನೆಯಲ್ಲಿದ್ದ, ಊಟ ಮುಗಿದ ಬಳಿಕ ಯಶ್ ಮನೆಗೆ ಹೋಗ್ತಿನಿ ಅಂದ. ನಾವು ಬೇಡ ಅಂತ ಹೇಳಿದ್ವಿ. ಆದ್ರೂ ಹೋಗ್ತಿನಿ ಅಂತ ಹೇಳಿ ಹೋಗಿದ್ದ. ಪೆಟ್ರೋಲ್ ಎಲ್ಲಿ ತಗೊಂಡಿದ್ನೊ ಗೊತ್ತಿಲ್ಲ. ರಾತ್ರಿ ಆಸ್ಪತ್ರೆಗೆ ಯಶ್ ಬಂದಾಗ ವಿಶ್ ಮಾಡ್ದಾ. ಶೇಕ್ ಹ್ಯಾಂಡ್ ತಗೊಂಡು ಹ್ಯಾಪಿ ಬರ್ತಡೇ ಅಣ್ಣ ಅಂದಿದ್ದ. ಆಗ ಯಶ್ ಏನು ಅಗಲ್ಲ ಅಂತ ಅವನಿಗೆ ದೈರ್ಯ ಹೇಳಿದ್ರು. ನಮಗೂ ಏನು ಅಗಲ್ಲ ಅಂತ ಹೇಳಿದ್ರು. ಅದ್ರೆ ರಾತ್ರಿ ಸಾವನ್ನಪ್ಪಿದ. ಕೆಜಿಎಫ್ ಚಿತ್ರ ನೋಡೋಕೆ ನಾಲ್ಕು ಟಿಕೆಟ್ ಬುಕ್ ಮಾಡಿದ್ದ. ಅವನು ಅವರ ಅಮ್ಮ ನನ್ನ ಕರ್ಕೊಂಡು ಹೋಗ್ತಿನಿ ಬನ್ನಿ ಅಂದ. ನಾವು ಬೇಡ ಜನ ಜಾಸ್ತಿ ಇರ್ತಾರೆ, ಕೈ ಕಾಲು ಅಗಲ್ಲ ಅಂದಿದ್ವಿ. ಆಮೇಲೆ ಇನ್ನೊಂದು ಸಲ ಹೋಗೊಣ ಅಂತ ಹೇಳಿದ್ವಿ. ಸ್ನೇಹಿತರನ್ನು ಕರ್ಕೊಂಡು ಸಿನಿಮಾ ನೋಡಿದ್ದ. ಪ್ರತಿವರ್ಷ ಬರ್ತಡೆ ದಿನ ಬರ್ತಿದ್ದ. ಹೋದ ವರ್ಷ ನಮ್ಮನ್ನು ಕರ್ಕೊಂಡು ಯಶ್ ಮನೆ ಹತ್ರ ಹೋಗಿದ್ದ. ನಾವು ಹೊರಗಡೆ ನಿಂತ್ಕೊಂಡು ನೋಡಿ ಹೋಗಿದ್ವಿ," ಎಂದು ರವಿ ತಂದೆ ರಾಮಣ್ಣ ನೋವಿನಿಂದ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಾದ್ಯಂತ ರಾಕಿಂಗ್​ ಸ್ಟಾರ್​ 'ಯಶೋಯಾತ್ರೆ': ಹುಟ್ಟುಹಬ್ಬ ಆಚರಣೆ ಬೇಡ ಎಂದ ಯಶ್​..!Loading...


First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...