ನಟ ಯಶ್ ಆಡಿಟರ್ ಬಸವರಾಜ್​ ಕಚೇರಿ ಮೇಲೆ ಐಟಿ ದಾಳಿ

ಆಡಿಟರ್ ಬಸವರಾಜ್​ ಕಚೇರಿಯಲ್ಲಿನ ಕೆಲ ಮಹತ್ವದ ದಾಖಲಾತಿಗಳು ಹಾಗೂ ಕಡತಗಳನ್ನು ಪರಿಶೀಲಿಸಿದ್ದರು. ಬಳಿಕ ಎರಡು ಬ್ಯಾಗ್​ ಹಾಗೂ ಕೆಲ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

G Hareeshkumar | news18
Updated:January 11, 2019, 7:54 AM IST
ನಟ ಯಶ್ ಆಡಿಟರ್ ಬಸವರಾಜ್​ ಕಚೇರಿ ಮೇಲೆ ಐಟಿ ದಾಳಿ
ನಟ ಯಶ್
G Hareeshkumar | news18
Updated: January 11, 2019, 7:54 AM IST
- ಕಿರಣ ಕೆ.ಎನ್

ಬೆಂಗಳೂರು ( ಜ.11) :  ನಟ ಯಶ್ ಮನೆ ಮೇಲೆ ಐಟಿ ದಾಳಿಯ ಬೆನ್ನಲ್ಲೇ ಇದೀಗ ಯಶ್ ಆಡಿಟರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಯಶ್​ ಆಡಿಟರ್ ಬಸವರಾಜ್​ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಬಸವರಾಜ್​ ನಟ ಯಶ್ ಸೇರಿ ಸ್ಯಾಂಡಲ್​ವುಡ್ ಕೆಲ ನಿರ್ಮಾಪಕರ ಹಾಗೂ ನಟರ ಆಡಿಟರ್ ಕೂಡ ಆಗಿದ್ದಾರೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಖಾಸಗಿ ವಾಹನಗಳಲ್ಲಿ ಬಂದು, ಏಕಕಾಲದಲ್ಲಿ ದಾಳಿ ನಡೆಸಿದ  9 ಜನ ಐಟಿ ಅಧಿಕಾರಿಗಳು, ಸತತ 5 ಗಂಟೆಗಳ ಕಾಲ ತಪಾಸಣೆ ನಡೆಸಿದ್ದರು.

ಇದನ್ನೂ ಓದಿ : ಚಂದನವನದಲ್ಲಿ ಐಟಿ ದಾಳಿ: 109 ಕೋಟಿಯ ದಾಖಲೆ ರಹಿತ ಆಸ್ತಿ ಪತ್ತೆ ..!

ಆಡಿಟರ್ ಬಸವರಾಜ್​ ಕಚೇರಿಯಲ್ಲಿನ ಕೆಲ ಮಹತ್ವದ ದಾಖಲಾತಿಗಳು ಹಾಗೂ ಕಡತಗಳನ್ನು ಪರಿಶೀಲಿಸಿದ್ದರು. ಬಳಿಕ ಎರಡು ಬ್ಯಾಗ್​ ಹಾಗೂ ಕೆಲ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಸದ್ಯ ಐಟಿ ವಿಚಾರಣೆ ಎದುರಿಸುತ್ತಿರುವ ನಟ ಯಶ್​ ಗೆ ಈಗ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ ಅಂತ ಹೇಳಲಾಗ್ತಿದೆ. ದಾಖಲಾತಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೇ ನಟ ಯಶ್​ ಆಡಿಟರ್ ಬಸವರಾಜ್​ಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ, ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.

ನಟ ಶಿವರಾಜ್​ಕುಮಾರ್​, ಸುದೀಪ್​, ಯಶ್​, ಪುನೀತ್​, ನಿರ್ಮಾಪಕರಾದ ರಾಕ್​ಲೈನ್​ ವೆಂಕಟೇಶ್​, ವಿಜಯ್​ ಕಿರಗಂದೂರ್​, ಸಿ.ಆರ್​. ಮನೋಹರ್​, ಜಯಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.
Loading...

ಇದನ್ನೂ ಓದಿ: ಅಂದು ಐಟಿ ಅಧಿಕಾರಿಗಳಿಂದ ಯಶ್​, ಸುದೀಪ್​ ಪ್ರಶಂಸೆ; ಇಂದು ಅವರಿಂದಲೇ ದಾಳಿ

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ