ಕೆ.ಆರ್.​​​ ಪೇಟೆ ಚುನಾವಣಾ ಅಖಾಡಕ್ಕೆ ಸುಮಲತಾ ಬದಲಿಗೆ ಜೋಡೆತ್ತು ಯಶ್​​-ದರ್ಶನ್​​ ಎಂಟ್ರಿ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಅಭ್ಯರ್ಥಿ ಕಣಕ್ಕಿಳಿಸದೆ ಬಹಿರಂಗವಾಗಿ ಸುಮಲತಾರಿಗೆ ಬೆಂಬಲ ಸೂಚಿಸಿತ್ತು. ಹಾಗಾಗಿಯೇ ಸುಮಲತಾ ತಮ್ಮ ಅಭ್ಯರ್ಥಿ ನಾರಯಾಣಗೌಡರನ್ನು ಬೆಂಬಲಿಸಿ ಪ್ರಚಾರ ಮಾಡಬೇಕೆಂದು ಬಿಜೆಪಿ ಕೇಳಿಕೊಂಡಿತ್ತು. ಇದಕ್ಕೆ ಸುಮಲತಾ ನಿರಾಕರಿಸಿದ್ದರು.

news18-kannada
Updated:November 28, 2019, 7:30 AM IST
ಕೆ.ಆರ್.​​​ ಪೇಟೆ ಚುನಾವಣಾ ಅಖಾಡಕ್ಕೆ ಸುಮಲತಾ ಬದಲಿಗೆ ಜೋಡೆತ್ತು ಯಶ್​​-ದರ್ಶನ್​​ ಎಂಟ್ರಿ?
ಸುಮಾ ಅಮ್ಮನ ಬಂಡಿಗೆ ಜೋಡಿ ಎತ್ತುಗಳಾದ ದರ್ಶನ್-ಯಶ್​
  • Share this:
ಮಂಡ್ಯ(ನ.28): ಕೆ.ಆರ್​​ ಪೇಟೆ ಉಪಚುನಾಣೆಗೆ ಸಂಸದೆ ಸುಮಲತಾ ಅಂಬರೀಶರನ್ನು ಕರೆಸಿಕೊಂಡು ಅಬ್ಬರದ ಪ್ರಚಾರ ಮಾಡಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಭಾರೀ ಸರ್ಕಸ್ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಆದರೀಗ ಜೋಡೆತ್ತುಗಳಾದ ಯಶ್ ಮತ್ತು ದರ್ಶನ್​ರನ್ನು ಅಖಾಡಕ್ಕೆ ಕರೆತರಬೇಕೆಂದು ಒಂದು ಪಕ್ಷ ಸರ್ಕಸ್​​​ ಮಾಡುತ್ತಿದೆ.

ಹೌದು, ಕೆ.ಆರ್‌ ಪೇಟೆ ಉಪಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿಂದೆ ಸ್ವಾಭಿಮಾನದ ಹೆಸರಲ್ಲಿ ಮಂಡ್ಯ ಲೋಕಸಭಾ ಚುನಾವಣೆ ಗೆಲುವು ಸಾಧಿಸಿದ್ದ ಸುಮಲತಾ ತಮ್ಮ ಪಕ್ಷದ ಪರ ಪ್ರಚಾರ ಮಾಡಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ದಂಬಾಲು ಬಿದ್ದಿದ್ದರು. ಆದರೆ, ಸುಮಲತಾ ಅವರು ಮಾತ್ರ ನಾನು ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಮೌನ ತಾಳಿದ್ದಾರೆ. ಈ ಮಧ್ಯೆ ಬಿಜೆಪಿ ನೀವು ಬರದೇ ಹೋದಲ್ಲಿ ನಮ್ಮ ಪರ ಪ್ರಚಾರಕ್ಕೆ ದರ್ಶನ್ ಮತ್ತು ಯಶ್​​ರನ್ನು ಕಳುಹಿಸಿ ಎಂದು ಒತ್ತಡ ಹಾಕಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಅಭ್ಯರ್ಥಿ ಕಣಕ್ಕಿಳಿಸದೆ ಬಹಿರಂಗವಾಗಿ ಸುಮಲತಾರಿಗೆ ಬೆಂಬಲ ಸೂಚಿಸಿತ್ತು. ಹಾಗಾಗಿಯೇ ಸುಮಲತಾ ತಮ್ಮ ಅಭ್ಯರ್ಥಿ ನಾರಯಾಣಗೌಡರನ್ನು ಬೆಂಬಲಿಸಿ ಪ್ರಚಾರ ಮಾಡಬೇಕೆಂದು ಬಿಜೆಪಿ ಕೇಳಿಕೊಂಡಿತ್ತು. ಇದಕ್ಕೆ ಸುಮಲತಾ ನಿರಾಕರಿಸಿದ್ದರು.

ಇದನ್ನೂ ಓದಿ: ಮಂಡ್ಯ ಚುನಾವಣೆ ಸೋಲಿನ ಭೀತಿಯಲ್ಲಿ ಸಿಎಂ: ಸುಮಲತಾ, ದರ್ಶನ್​​, ಯಶ್​​ ಬೆನ್ನ ಹಿಂದೆ ಬಿದ್ದ ಗುಪ್ತಚರ ಇಲಾಖೆ; ಗೆಲ್ಲಲು ಎಚ್​​​ಡಿಕೆ ತಂತ್ರವೇನು?

ದರ್ಶನ್ ಮತ್ತು ಯಶ್ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಜೋಡೆತ್ತುಗಳಂತೆ ನಿಂತು ಸುಮಲತಾರನ್ನು ಗೆಲ್ಲಿಸಿದರು. ಈ ಮೂಲಕ ಎದುರಾಳಿಗೆ ಸವಾಲ್​​ ಹಾಕಿ ಸುಮಲತಾರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದೀಗ ಈ ಜೋಡೆತ್ತುಗಳನ್ನೇ ಕೆ.ಆರ್‌ ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡರ ಪರ ಪ್ರಚಾರಕ್ಕೆ ಕರೆ ತರಲು ಯತ್ನಿಸುತ್ತಿದೆ.

ಒಟ್ಟಾರೆ ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿ ಸುಮಮಲತಾರನ್ನು ತಮ್ಮ ಪ್ರಚಾರಕ್ಕೆ ತರಬೇಕು ಎಂದು ಪ್ರಯತ್ನಪಟ್ಟಿದ್ದರು. ಈ ಮಧ್ಯೆ ಬಿಜೆಪಿ ಜೋಡೆತ್ತಗಳಿಗೆ ಗಾಳ ಹಾಕಿದೆ. ಹಾಗಾಗಿ ದರ್ಶನ್​​ ಮತ್ತು ಯಶ್​​​​​ ಬಿಜೆಪಿ ಪರ ಪ್ರಚಾರಕ್ಕೆ ಕೆ.ಆರ್​ ಪೇಟೆಗೆ ಎಂಟ್ರಿ ಕೊಡಲಿದ್ದಾರಾ? ಎಂದು ಕಾದು ನೋಡಬೇಕಿದೆ.
First published:November 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ