News18 India World Cup 2019

Mandya Election Result: ಜೋಡೆತ್ತು ಅಬ್ಬರಕ್ಕೆ ಮಂಕಾದ ನಿಖಿಲ್; ಯಶ್-ದರ್ಶನ್ ಬೆಂಬಲದಿಂದ ಗೆದ್ದರು ಸುಮಲತಾ

ಯಶ್​-ದರ್ಶನ್​ ಪ್ರಚಾರ ಫಲಪ್ರಧವಾಗಿದೆ. ಸುಮಲತಾ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಮಂಡ್ಯದಲ್ಲಿ ಗೆಲ್ಲುವ ಕನಸು ಕಂಡಿದ್ದ ನಿಖಿಲ್​ ಆಸೆಗೆ ತಣ್ಣೀರು ಬಿದ್ದಿದೆ.

Rajesh Duggumane | news18india
Updated:May 23, 2019, 6:08 PM IST
Mandya Election Result: ಜೋಡೆತ್ತು ಅಬ್ಬರಕ್ಕೆ ಮಂಕಾದ ನಿಖಿಲ್; ಯಶ್-ದರ್ಶನ್ ಬೆಂಬಲದಿಂದ ಗೆದ್ದರು ಸುಮಲತಾ
ದರ್ಶನ್​​, ಸುಮಲತಾ ಅಂಬರೀಶ್​​, ಯಶ್​
Rajesh Duggumane | news18india
Updated: May 23, 2019, 6:08 PM IST
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರು ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಪ್ರತಿಸ್ಪರ್ಧಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇವರ ಗೆಲುವಿನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹಾಗೂ ಯಶ್​ ಅವರ ಶ್ರಮ ಅಧಿಕವಾಗಿದೆ. ಜೋಡೆತ್ತು ಅಬ್ಬರದ ಪ್ರಚಾರಕ್ಕೆ ನಿಖಿಲ್​ ಸೋಲು ಕಂಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಮಂಡ್ಯ ಲೋಕಸಭಾ ಚುನಾವಣೆಯಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸ ಹೊರಟಿದ್ದರು. ಆದರೆ, ಮೈತ್ರಿ ಒಪ್ಪಂದದ ಪ್ರಕಾರ ಅವರಿಗೆ ಟಿಕೆಟ್​ ನೀಡುವಂತಿರಲಿಲ್ಲ. ಈ ಮೂಲಕ ಅವರನ್ನು ಕಣದಿಂದಲೇ ಹೊರಗಿಡುವ ಆಲೋಚನೆಯಲ್ಲಿ ಎಚ್​ಡಿಕೆ ಇದ್ದರು. ಆದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಈ ವೇಳೆ ಅವರ ಬೆಂಬಲಕ್ಕೆ ನಿಂತವರು ಯಶ್​ ಹಾಗೂ ದರ್ಶನ್​. ಈ ವಿಚಾರ ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ದರ್ಶನ್​-ಯಶ್ ವಿರುದ್ಧ ಮನಬಂದಂತೆ ಮಾತನಾಡಿದ್ದರು.

“ಯಶ್​-ದರ್ಶನ್​ ಜೋಡೆತ್ತಲ್ಲ ಕಳ್ಳೆತ್ತು. ಇವು ಮೇವು ಕದ್ದು ತಿನ್ನುತ್ತವೆ,” ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದಾದ ನಂತರ ದರ್ಶನ್​ ಹಾಗೂ ಯಶ್​ ಅಬ್ಬರದ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದರು. ಸುಮಾರು 15 ದಿನಗಳ ಕಾಲ ಮಂಡ್ಯದ ಮೂಲೆ ಮೂಲೆಗೂ ತೆರಳಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದ್ದರು. ಕುಮಾರಸ್ವಾಮಿ ನೀಡುತ್ತಿದ್ದ ಪ್ರತಿ ಹೇಳಿಕೆಗೂ ತಿರುಗೇಟು ನೀಡುವ ಮೂಲಕ ಜೋಡೆತ್ತಿನ ಪ್ರಚಾರ ಅಬ್ಬರದಿಂದ ಸಾಗಿತ್ತು.

ಇದನ್ನೂ ಓದಿ: ತನಗೆ ತಾನೆ ಗುಂಡಿ ತೋಡಿಕೊಂಡ ಜೆಡಿಎಸ್; ಸ್ವಯಂಕೃತ ಅಪರಾಧದಿಂದಾಗಿ ಪಕ್ಷವೇ ನಾಮಾವಶೇಷ; ಇನ್ನು ಚೇತರಿಕೆ ಬಲು ಕಷ್ಟ..!

ಯಶ್​-ದರ್ಶನ್​ ಪ್ರಚಾರ ಫಲಪ್ರಧವಾಗಿದೆ. ಸುಮಲತಾ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಮಂಡ್ಯದಲ್ಲಿ ಗೆಲ್ಲುವ ಕನಸು ಕಂಡಿದ್ದ ನಿಖಿಲ್​ ಆಸೆಗೆ ತಣ್ಣೀರು ಬಿದ್ದಿದೆ. ಅಂಬರೀಶ್​ ಅವರು ಚುನಾವಣೆ ಎದುರಿಸಿದಾಗ ಅವರ ಬೆಂಬಲಕ್ಕೆ ದರ್ಶನ್​ ನಿಂತಿದ್ದರು.

ಆರಂಭದಲ್ಲಿ, ಈ ಬಾರಿ ಪೂರ್ತಿ ಸಿನಿಮಾ ಮಾಡುತ್ತಿರೋ ಅಥವಾ ಅರ್ಧ ಸಿನಿಮಾ ಮಾಡುತ್ತಿರೋ ಎಂದು ಪತ್ರಕರ್ತರು ದರ್ಶನ್​ಗೆ ಪ್ರಶ್ನಿಸಿದ್ದರು. ಈ ಮೂಲಕ ಸಂಪೂರ್ಣ ಪ್ರಚಾರದಲ್ಲಿ ತೊಡಗುತ್ತೀರೋ ಅಥವಾ ಹೀಗೆ ಬಂದು ಹಾಗೆ ಹೋಗುತ್ತೀರಾ ಎಂಬುದನ್ನು ಪರೋಕ್ಷವಾಗಿ ಪತ್ರಕರ್ತರು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ದರ್ಶನ್​ ನಾವು ಮಾಡಿದ ಮೇಲೆ ಪೂರ್ತಿ ಸಿನಿಮಾವನ್ನೇ ಮಾಡುತ್ತೇವೆ ಎಂದಿದ್ದರು. ಅವರು ಮಾಡಿದ್ದ ಸಿನಿಮಾ ಈಗ ತೆರೆಕಂಡು ಯಶಸ್ಸು ಪಡೆದುಕೊಂಡಿದೆ.
Loading...


ಇದನ್ನೂ ಓದಿ: ಬಿಎಲ್​ ಸಂತೋಷ್​ ಎದುರು ಮಂಕಾಗುತ್ತಿದೆ ಬಿಎಸ್​ ಯಡಿಯೂರಪ್ಪ ವರ್ಚಸ್ಸು!


First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...