ಎಲ್ಲೆಲ್ಲೂ ಯುವಕ-ಯುವತಿಯರ ಭರ್ಜರಿ ವ್ಯಾಪಾರ. ಚಿಕ್ಕಚಿಕ್ಕ ಮಳಿಗೆಗಳಲ್ಲಿ ತರಹೇವಾರಿ ತಿಂಡಿ ತಿನಿಸುಗಳು. ಕಣ್ಣಿಗೆ ಮುದ ನೀಡುವ ಮಿನಿ ಥಿಯೇಟರ್, ಸ್ಕೇರಿ ಹೌಸ್, ಶೂಟಿಂಗ್ ಸೇರಿದಂತೆ ಹತ್ತು ಹಲವು ಗೇಮ್ಗಳನ್ನಾಡಿ ಎಂಜಾಯ್ ಮಾಡುತ್ತಿರುವ ವಿದ್ಯಾರ್ಥಿಗಳು. ಇದು ಯಾವುದೋ ಫಿಲ್ಮ್ ಸಿಟಿ ಅಲ್ಲ, ಫನ್ ವರ್ಡ್ ಅಂತೂ ಅಲ್ಲವೇ ಅಲ್ಲ.
ವಿದ್ಯಾರ್ಥಿಗಳು ಪದವಿ ನಂತರದ ದಿನಗಳಲ್ಲಿ ಬರಿ ಕೆಲಸಕ್ಕೆ ಅಲೆದಾಡದೆ ಸ್ವಂತ ಪರಿಶ್ರಮದಿಂದ ಮೇಲ್ಬರಬೇಕು, ಉದ್ಯೋಗಕ್ಕೆ ಅಲೆಯದೆ ಉದ್ಯಮಶೀಲರಾಗಲು ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉತ್ತಮ ವೇದಿಕೆ ಕಲ್ಪಿಸಲಾಗಿತ್ತು.
ವಿಧ್ಯಾರ್ಥಿಗಳಿಂದಲೆ ನಿರ್ಮಿಸಿದ ಈ ಮಳಿಗೆಗಳಲ್ಲಿ ವಿಧ್ಯಾರ್ಥಿಗಳೆ ತಯಾರಿಸಿದ್ದ ತಿಂಡಿ ತಿನಿಸುಗಳು ಸವಿದ ಮಕ್ಕಳು. ತಾವು ತಂದಿದ್ದ ಪದಾರ್ಥಗಳ ಮಾರಾಟ ಮಾಡಿ ಉತ್ತಮ ಲಾಭ ಗಳಿಸುವ ನಿಟ್ಟಿನಲ್ಲಿ ವಿಧ್ಯಾಭ್ಯಾಸದ ಜೊತೆ ಉದ್ದಿಮೆ ಕಟ್ಟಿ ಬೆಳೆಸಲು ಸಿಕ್ಕ ಸದವಕಾಶವನ್ನ ವಿಧ್ಯಾರ್ಥಿಗಳು ಉತ್ತಮವಾಗೆ ಬಳಸಿಕೊಂಡು ಎಂಜಾಯ್ ಸಹ ಮಾಡಿದರು.
ಇದನ್ನೂ ಒದಿ: ಕೊರೊನಾ ಎಫೆಕ್ಟ್; ಸೆನ್ಸೆಕ್ಸ್ 1100 ಅಂಕ ಕುಸಿತ; 5 ಲಕ್ಷ ಕೋಟಿ ನಷ್ಟದ ಅಂದಾಜು
ವಿದ್ಯಾರ್ಥಿಗಳು ಸಿಕ್ಕ ಸದವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಪದವಿ ನಂತರ ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾಲೇಜುಗಳು ಕಲ್ಪಿಸಿದ ವೇದಿಕೆಗಳು ಸಾಹಕಾರಿ ಆಗಲಿವೆ. ವಿದ್ಯೆ ಜೊತೆಗೆ ವ್ಯಾವಹಾರಿಕ ಜ್ಞಾನ ವೃದ್ದಿಯಾಗಲಿದ್ದು ಮುಂದೆ ಉದ್ಯಮ ಶೀಲರಾಗಲು ಸಕಾರಿ ಆಗಲಿವೆ ಎಂಬುದು ಎಲ್ಲರ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ