ಯಕ್ಷಗಾನ ಕಲಾವಿದರಿಂದ ಮಸಾಲೆ‌ ದೋಸೆ ಸರ್ವ್.. ಮೂಗುಮುರಿದ ಯಕ್ಷಗಾನಪ್ರಿಯರು!

ಮಹಾರಾಷ್ಟ್ರದಲ್ಲಿ ಕಲಾವಿದರ ಮೂಲಕ ಮಸಾಲೆ ದೋಸೆ ತರಿಸಿ ಹೊಟೇಲ್ ಉದ್ಘಾಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಯಕ್ಷಗಾನ ಕಲೆಯಲ್ಲಿ ಮಸಾಲೆ ದೋಸೆ ಸರ್ವ್ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರು ವಿವಾದಕ್ಕೆ ಗುರಿಯಾಗಿದ್ದಾರೆ.

ಕಲಾವಿದರಿಂದ ಮಸಾಲೆ ದೋಸೆ ಸರ್ವ್

ಕಲಾವಿದರಿಂದ ಮಸಾಲೆ ದೋಸೆ ಸರ್ವ್

  • Share this:
ಕಾರವಾರ: ನೃತ್ಯ , ಹಾಡು, ಮಾತುಗಾರಿಕೆ, ವೇಷಭೂಷಣವನ್ನೊಳಗೊಂಡ ಕಲೆ ಯಕ್ಷಗಾನ(Yakshagana). ಕರ್ನಾಟಕ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಯಕ್ಷಗಾನಕ್ಕೆ ಪ್ರಾಮುಖ್ಯವಿದೆ. ರಾಜ್ಯದ ಕರಾವಳಿಯಲ್ಲಿ(Karnataka Coastal Area)  ಯಕ್ಷಗಾನ ನೋಡುವುದೇ ವಿಶಿಷ್ಟ ಅನುಭವ. ಮಹಾರಾಷ್ಟ್ರದಲ್ಲಿ (Maharashtra) ಕಲಾವಿದರ ಮೂಲಕ ಮಸಾಲೆ ದೋಸೆ (Masala dose) ತರಿಸಿ ಹೊಟೇಲ್ ಉದ್ಘಾಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಯಕ್ಷಗಾನ ಕಲೆಯಲ್ಲಿ ಮಸಾಲೆ ದೋಸೆ ಸರ್ವ್ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರು ಉದ್ದೇಶಪೂರ್ವವಾಗಿ ಮಾಡದ ತಪ್ಪಿಗೆ ಬಹಿರಂಗ ಕ್ಷಮೆ ಕೇಳಿದ್ದಾರೆ..

ಉತ್ತರ ಕನ್ನಡ ಜಿಲ್ಲೆಗೂ ನಾಗಪುರದಲ್ಲಿ ನಡೆದ ಘಟ‌ನೆಗೂ ಏನು ಸಂಬಂಧ? 

ಕಳೆದ ನವೆಂಬರ್ 24ರಿಂದ 26ರವರೆಗೆ ನಾಗ್ಪುರದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆದಿತ್ತು. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕೆಲ ಕಲಾವಿದರು ತೆರಳಿದ್ದರು. ಕಾರ್ಯಕ್ರಮದ ಕೊನೆಯ ದಿನ ಹೊಟೇಲೊಂದರ ಉದ್ಘಾಟನೆ ನಡೆದಿತ್ತು. ಸಂಜೆ ವೇಳೆ ಹೊಟೇಲ್ ಮಾಲೀಕರು ಯಕ್ಷಗಾನ ಕಲಾವಿದರ ಮೂಲಕ ಪ್ರಿಯವಾದ ಮಸಾಲೆದೋಸೆಯನ್ನ ಗಣ್ಯರಿಗೆ ನೀಡುವ ಸನ್ನಿವೇಶ ಸೃಷ್ಟಿಸಿದರು. ನೆರೆದ ಗ್ರಾಹಕರು ಮತ್ತು ಗಣ್ಯರು ಪುಲ್ ಖುಷ್ ಆಗಿದ್ರು. ಆದ್ರೀಗ ಯಕ್ಷಗಾನ ವೇಷಧಾರಿಗಳಿಂದ ಮಸಾಲೆ ದೋಸೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಅಲ್ಲದೇ ಯಕ್ಷಗಾನ ಕಲಾವಿದರ ನಿಂದನೆಗೂ ಕಾರಣವಾಗಿದೆ. ಯಕ್ಷಗಾನ‌ ಭೂಷಣ ಧರಿಸಿ ಮಸಾಲೆ ದೋಸೆ ಸರ್ವ್ ಮಾಡಿದ್ದು ತಪ್ಪು ಎಂಬ ಬಗ್ಗೆ ತೀರಾ ಚರ್ಚೆ ಆಗುತ್ತಿದೆ.

ಏನಂತಾರೆ ಯಕ್ಷಗಾನ ಕಲಾವಿದರು?  

ಈ ಬಗ್ಗೆ ಮಾತನಾಡಿದ ಕಲಾವಿದರು ಯಕ್ಷಗಾನ ನೃತ್ಯ ಪ್ರದರ್ಶನ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದ್ದೆವು. ಅದೇ ವೇಳೆ ಕಾರ್ಯಕ್ರಮ ಆಯೋಜಕರ ಹೋಟೆಲ್ ಉದ್ಘಾಟನೆಯೂ ಇದ್ದು, ಅವರು ಗೌರವಪೂರ್ವಕವಾಗಿ ಮಸಾಲೆದೋಸೆಯನ್ನು ನಮ್ಮಿಂದ ಅತಿಥಿಗಳಿಗೆ ನೀಡಿಸುವ ಮೂಲಕ ಹೋಟೆಲ್ ಉದ್ಘಾಟನೆಯಾಗಲಿ ಎಂಬ ಉದ್ದೇಶದಿಂದ ಮಾಡಿಸಿದ್ದಾರೆ. ಕಲೆ, ಕಲಾವಿದರನ್ನು ಗೌರವದಿಂದಲೇ ಕಂಡಿದ್ದಾರೆ. ಆದರೆ ಕೇವಲ ವೈರಲ್ ಆದ ವಿಡಿಯೊ ನೋಡಿ, ಪೂರ್ವಾಪರ ವಿಚಾರಿಸದೇ ಅನಗತ್ಯವಾಗಿ ಕೆಲವರು ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿದ್ದಾರೆ. ವಿಷಯ ಅರಿಯದೇ ಈ ರೀತಿ ತೇಜೋವಧೆಗೆ ಮುಂದಾಗಿರುವುದು ಸರಿಯಲ್ಲ ‌ ತಮ್ಮಿಂದಾದುದು ಅಚಾತುರ್ಯವೇ ಹೊರತು ಪೂರ್ವ ನಿಯೋಜಿತವಲ್ಲ. ಇದರಿಂದ ಯಕ್ಷಗಾನ ಅಭಿಮಾನಿಗಳಿಗೆ ಬೇಸರವಾಗಿದ್ದಲ್ಲಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.

ಯಕ್ಷಗಾನದಲ್ಲಿ ಅಪಸವ್ಯಗಳಿಗೆ ಕಡಿವಾಣ ಹಾಕಿ

ಯಕ್ಷಗಾನದಲ್ಲಿ ಅಪಸವ್ಯಗಳು ಹೊಸದೇನಲ್ಲ. ಲುಂಗಿ ಡಾನ್ಸ್, ಪಾಶ್ಚಾತ್ಯ ಕುಸ್ತಿ, ಸಿನಿಮಾ ಹಾಡು, ಕೋಳಿ ಅಂಕ ಇತ್ಯಾದಿ ಯಕ್ಷಗಾನೇತರವಾದ ವಿಷಯಗಳು ಯಕ್ಷರಂಗಕ್ಕೆ ಬಂದಿವೆ. ಅನೇಕ ಜಾಹೀರಾತುಗಳಲ್ಲಿ ಯಕ್ಷಗಾನ ಬಳಸಿಕೊಳ್ಳಲಾಗಿದೆ. ಆದರೆ ಆ ವಿಷಯಗಳ ಕುರಿತು ಯಾರೀ ಚಕಾರವೆತ್ತುತ್ತಿಲ್ಲ. ಇಂತಹ ಅಪಸವ್ಯಗಳು ಮುಂದೆ ನಡೆಯದಂತೆ ಕಟ್ಟುನಿಟ್ಟಿನ ಚೌಕಟ್ಟು ರೂಪಿಸಲು ಈ ಮಸಾಲೆದೋಸೆ ಪ್ರಹಸನ ನಾಂದಿಯಾಗಬೇಕ ಎಂದಿದ್ದಾರೆ. ಒಟ್ಟಿನಲ್ಲಿ ಯಕ್ಷಗಾನದಲ್ಲಿ ಅಪಸವ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಯಕ್ಷಗಾನ ಅಕಾಡೆಮಿಯಿಂದ ಅಥವಾ ಪ್ರಾಜ್ಞರಿಂದ ನಿರ್ದಿಷ್ಟವಾದ ಚೌಕಟ್ಟು ನಿರ್ಮಿಸುವ ಅಗತ್ಯವಿದೆ ಎಂದು ಕಲಾವಿದರಾದ ಭಾಸ್ಕರ ಗಾಂವ್ಕರ ಬಿದ್ರೆಮನೆ ಹಾಗೂ ಸದಾಶಿವ ಭಟ್ಟ ಮಲವಳ್ಳಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Yakshagana: ಕಟೀಲು ದುರ್ಗಾಪರಮೇಶ್ವರಿಗೆ ಯಕ್ಷಗಾನದ ಹರಕೆ; ಪ್ರಸಂಗದಲ್ಲಿ ದೇವಿಯೇ ಸನ್ನಿಹಿತಳಾಗುತ್ತಾಳಂತೆ

ಕಟೀಲು ಶ್ರೀ ದುರ್ಗಾಪರಮೇಶ್ವರಿ  ಯಕ್ಷಗಾನ ಪ್ರಿಯೆ... ಕಟೀಲು ಶ್ರೀ ದುರ್ಗೆಗೆ ಹೇಳುವ ಅತಿ ದೊಡ್ಡ ಯಕ್ಷಗಾನ ಸೇವೆ. ಆದ್ದರಿಂದ ಭಕ್ತರು ತಮ್ಮ ಬಯಕೆ, ಇಷ್ಟಾರ್ಥ ಸಿದ್ಧಿಗೆ ತಾಯಿಗೆ ಯಕ್ಷಗಾನ ಸೇವೆಯನ್ನು ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿ ಕಟೀಲು ಶ್ರೀ ದೇವಿಯೇ ಬರುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ನವೆಂಬರ್ 29ರಿಂದ ಆರಂಭವಾದ ಕಟೀಲು ಯಕ್ಷಗಾನ ಪ್ರದರ್ಶನ ಮೇ 25 ರವರೆಗೆ ಅಂದರೆ ಸರಿಸುಮಾರು 167ದಿನಳ ಕಾಲ ಪ್ರದರ್ಶನ ನಡೆದು ವರ್ಷದ ತಿರುಗಾಟ ಮುಕ್ತಾಯವಾಗುತ್ತದೆ.
Published by:Kavya V
First published: